Katrina Kaif: ಪ್ರತಿ ವಾರ ಕತ್ರಿನಾ ಕೈಫ್ ಮನೆಯಲ್ಲಿ ನಡೆಯುತ್ತೆ ಬಜೆಟ್ ಸಭೆ; ಹೊಸ ವಿಷಯ ತಿಳಿಸಿದ ವಿಕ್ಕಿ ಕೌಶಲ್

ಸೆಲೆಬ್ರಿಟಿಗಳು ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ ಎನ್ನುವ ನಂಬಿಕೆ ಅನೇಕರದ್ದು. ಆದರೆ, ಎಲ್ಲರೂ ಇದೇ ರೀತಿ ಇರುವುದಿಲ್ಲ ಎಂಬುದಕ್ಕೆ ಕತ್ರಿನಾ ಉತ್ತಮ ಉದಾಹರಣೆ.

Katrina Kaif: ಪ್ರತಿ ವಾರ ಕತ್ರಿನಾ ಕೈಫ್ ಮನೆಯಲ್ಲಿ ನಡೆಯುತ್ತೆ ಬಜೆಟ್ ಸಭೆ; ಹೊಸ ವಿಷಯ ತಿಳಿಸಿದ ವಿಕ್ಕಿ ಕೌಶಲ್
ವಿಕ್ಕಿ ಕೌಶಲ್, ಕತ್ರಿನಾ ಕೈಫ್

Updated on: Jun 07, 2023 | 7:01 AM

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ (Katrina Kaif) ಮಧ್ಯೆ ವಯಸ್ಸಿನ ಅಂತರ ಜಾಸ್ತಿ ಇದೆ. ಕತ್ರಿನಾಗಿಂತ ವಿಕ್ಕಿ ಐದು ವರ್ಷ ಸಣ್ಣವರು. ಆದರೆ, ಈ ವಯಸ್ಸಿನ ಅಂತರದಿಂದ ಇವರ ಸಂಸಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇಬ್ಬರ ಮಧ್ಯೆ ಇರುವ ಪ್ರೀತಿ ಎಷ್ಟು ಎಂಬುದು ಈಗಾಗಲೇ ಅನೇಕ ಬಾರಿ ಸಾಬೀತಾಗಿದೆ. ಈಗ ಕತ್ರಿನಾ ಬಗ್ಗೆ ವಿಕ್ಕಿ ಅಚ್ಚರಿಯ ವಿಚಾರ ಹೊರಹಾಕಿದ್ದಾರೆ. ಪ್ರತಿವಾರ ಕತ್ರಿನಾ ಬಜೆಟ್ ಮೀಟಿಂಗ್ ನಡೆಸುತ್ತಾರೆ. ಇದಕ್ಕೆ ಕಾರಣ ಏನು ಎಂಬುದನ್ನು ವಿಕ್ಕಿ ಕೌಶಲ್ ಅವರು ವಿವರಿಸಿದ್ದಾರೆ.

ಸೆಲೆಬ್ರಿಟಿಗಳು ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ ಎನ್ನುವ ನಂಬಿಕೆ ಅನೇಕರದ್ದು. ಆದರೆ, ಎಲ್ಲರೂ ಇದೇ ರೀತಿ ಇರುವುದಿಲ್ಲ ಎಂಬುದಕ್ಕೆ ಕತ್ರಿನಾ ಉತ್ತಮ ಉದಾಹರಣೆ. ಅವರು ಹಣ ಎಲ್ಲೆಲ್ಲಿ ಖರ್ಚಾಗುತ್ತಿದೆ, ಹಣವನ್ನು ಯಾವ ರೀತಿಯಲ್ಲಿ ಬಳಕೆ ಮಾಡಲಾಗುತ್ತಿದೆ ಎಂಬುದನ್ನು ಸಭೆಯಲ್ಲಿ ಮನೆಯ ಸಿಬ್ಬಂದಿ ಬಳಿ ಕೇಳುತ್ತಾರಂತೆ.

‘ನಮ್ಮ ಮನೆಯ ಸಿಬ್ಬಂದಿಯೊಂದಿಗೆ ಕತ್ರಿನಾ ಸಭೆ ನಡೆಸುತ್ತಾರೆ. ಇದು ಸಖತ್ ಫನ್ ಆಗಿರುತ್ತದೆ. ಮನೆಯ ಕೆಲಸದವರನ್ನು ಕರೆದು ಕತ್ರಿನಾ ಮನೆಯ ಬಜೆಟ್​ ಬಗ್ಗೆ ಚರ್ಚೆ ಮಾಡುತ್ತಾರೆ. ಹಣವನ್ನು ಹೇಗೆ ಖರ್ಚು ಮಾಡಲಾಗುತ್ತಿದೆ, ಎಷ್ಟು ವೆಚ್ಚ ಬರುತ್ತಿದೆ ಎಂದು ಅವರು ಲೆಕ್ಕ ಕೇಳುತ್ತಾರೆ. ಆ ಚರ್ಚೆ ನಡೆಯುವಾಗ ನಾನು ಅಲ್ಲಿ ಪ್ರೇಕ್ಷಕ. ಈ ಸಭೆಯನ್ನು ಆನಂದಿಸುತ್ತೇನೆ. ಯಾವಾಗಲೂ ನಾನು ಪಾಪ್‌ಕಾರ್ನ್‌ನೊಂದಿಗೆ ಕುಳಿತಿರುತ್ತೇನೆ’ ಎಂದಿದ್ದಾರೆ ವಿಕ್ಕಿ.

ಇದನ್ನೂ ಓದಿ: ನಟ ವಿಕ್ಕಿ ಕೌಶಲ್ ಅನ್ನು ಬದಿಗೆ ತಳ್ಳಿದ ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ, ವಿಡಿಯೋ ವೈರಲ್

ಸಿನಿಮಾ ವಿಚಾರಕ್ಕೆ ಬರೋದಾದರೆ ವಿಕ್ಕಿ ಕೌಶಲ್ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ವಿಕ್ಕಿಗೆ ಜೊತೆಯಾಗಿ ಸಾರಾ ಅಲಿ ಖಾನ್ ನಟಿಸಿದ್ದಾರೆ. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 25+ ಕೋಟಿ ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮೈಲೇಜ್​ ಪಡೆದುಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.   ಇನ್ನು ಕತ್ರಿನಾ ಕೈಫ್ ಅವರು ‘ಮೇರಿ ಕ್ರಿಸ್​​ಮಸ್’ ಹಾಗೂ ‘ಟೈಗರ್ 3’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us