ಸಲ್ಮಾನ್​ ಖಾನ್​ ಪಂಚೆ ಧರಿಸಿ ಕುಣಿದಿದ್ದಕ್ಕೆ ಎದುರಾಯ್ತು ಕಿರಿಕ್​; ಸಿನಿಮಾ ಬ್ಯಾನ್​ ಮಾಡಲು ಒತ್ತಾಯ

Yentamma song: ‘ಈ ಹಾಡಿನಿಂದಾಗಿ ದಕ್ಷಿಣ ಭಾರತದ ಸಂಸ್ಕೃತಿಗೆ ಧಕ್ಕೆ ಆಗಿದೆ. ಸಾಂಪ್ರದಾಯಿಕ ಉಡುಗೆಯನ್ನು ಅಸಹ್ಯವಾಗಿ ತೋರಿಸಲಾಗಿದೆ’ ಎಂದು ಲಕ್ಷ್ಮಣ್​ ಶಿವರಾಮಕೃಷ್ಣನ್​ ಕಿಡಿ ಕಾರಿದ್ದಾರೆ.

ಸಲ್ಮಾನ್​ ಖಾನ್​ ಪಂಚೆ ಧರಿಸಿ ಕುಣಿದಿದ್ದಕ್ಕೆ ಎದುರಾಯ್ತು ಕಿರಿಕ್​; ಸಿನಿಮಾ ಬ್ಯಾನ್​ ಮಾಡಲು ಒತ್ತಾಯ
ಸಲ್ಮಾನ್ ಖಾನ್

Updated on: Apr 09, 2023 | 1:05 PM

ಮುಖ್ಯಾಂಶಗಳು

  • ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾದ ಹೊಸ ಹಾಡು
  • ‘ಯೆಂಟಮ್ಮಾ..’ ಗೀತೆಗೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಕ್ರಿಕೆಟರ್
  • ಸಿನಿಮಾವನ್ನು ಬ್ಯಾನ್​ ಮಾಡುವಂತೆ ಸೆನ್ಸಾರ್​ ಮಂಡಳಿಗೆ ಮನವಿ

ನಟ ಸಲ್ಮಾನ್​ ಖಾನ್​ (Salman Khan) ಅವರು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಅವರೇ ಮಾಡಿದ್ದಾರೆ. ಈದ್​ ಹಬ್ಬದ ಪ್ರಯುಕ್ತ ಏಪ್ರಿಲ್​ 21ರಂದು ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ (Kisi Ka Bhai Kisi Ki Jaan) ಸಿನಿಮಾ ರಿಲೀಸ್​ ಆಗಲಿದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ‘ಯೆಂಟಮ್ಮಾ..’ ಹಾಡು ಬಿಡುಗಡೆ ಆಯಿತು. ಎಲ್ಲ ಕಡೆಗಳಿಂದ ಈ ಗೀತೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಲ್ಲಿ ಸಲ್ಮಾನ್​ ಖಾನ್​ ಅವರು ಪಂಚೆ ಧರಿಸಿ ಕುಣಿದಿದ್ದಾರೆ. ಅವರಿಗೆ ರಾಮ್​ ಚರಣ್​, ದಗ್ಗುಬಾಟಿ ವೆಂಕಟೇಶ್​ ಕೂಡ ಸಾಥ್​ ನೀಡಿದ್ದಾರೆ. ಆದರೆ ಈ ಹಾಡಿನ ವಿರುದ್ಧ ಕೆಲವರು ಕಿಡಿಕಾರಿದ್ದಾರೆ. ಮಾಜಿ ಕ್ರಿಕೆಟರ್​, ಕಾಮೆಂಟೇಟರ್​ ಲಕ್ಷ್ಮಣ್​ ಶಿವರಾಮಕೃಷ್ಣನ್​ (Laxman Sivaramakrishnan) ಅವರು ‘ಯೆಂಟಮ್ಮಾ..’ ಗೀತೆ ಬಗ್ಗೆ ತಕರಾರು ಎತ್ತಿದ್ದಾರೆ.

ಲಕ್ಷ್ಮಣ್​ ಶಿವರಾಮಕೃಷ್ಣನ್​ ತಕರಾರು ಏನು?

‘ಈ ಹಾಡಿನಿಂದಾಗಿ ದಕ್ಷಿಣ ಭಾರತದ ಸಂಸ್ಕೃತಿಗೆ ಧಕ್ಕೆ ಆಗಿದೆ. ಇದು ಲುಂಗಿ ಅಲ್ಲ. ಇದು ಧೋತಿ. ಸಾಂಪ್ರದಾಯಿಕ ಉಡುಗೆಯನ್ನು ಅಸಹ್ಯವಾಗಿ ತೋರಿಸಲಾಗಿದೆ’ ಎಂದು ಲಕ್ಷ್ಮಣ್​ ಶಿವರಾಮಕೃಷ್ಣನ್​ ಟ್ವೀಟ್​ ಮಾಡಿದ್ದಾರೆ. ಅವರ ಮಾತಿಗೆ ಕೆಲವು ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಅವರ ಈ ಟ್ವೀಟ್​ ವೈರಲ್​ ಆಗಿದೆ.

ಇದನ್ನೂ ಓದಿ
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಸಿನಿಮಾ ಬ್ಯಾನ್​ ಮಾಡಲು ಮನವಿ:

‘ಇಂದಿನ ಕಾಲದಲ್ಲಿ ಜನರು ದುಡ್ಡಿಗಾಗಿ ಏನನ್ನು ಬೇಕಿದ್ದಾರೂ ಮಾಡುತ್ತಾರೆ. ಲುಂಗಿ ಮತ್ತು ಧೋತಿ ಎಂದರೆ ಏನು ಅಂತ ಸಣ್ಣ ಅಧ್ಯಯನ ಮಾಡೋದು ಬೇಡವೇ? ಶೂಟಿಂಗ್ ಸೆಟ್​ ಆಗಿದ್ದರೂ ಕೂಡ ಅದನ್ನು ದೇವಸ್ಥಾನದ ರೀತಿ ತೋರಿಸಲಾಗುತ್ತದೆ. ಅಂಥ ದೇವಸ್ಥಾನದ ಜಾಗದಲ್ಲಿ ಚಪ್ಪಲಿ ಹಾಕಬಾರದು ಅನ್ನೋದು ಸಿನಿಮಾದವರಿಗೆ ಗೊತ್ತಾಗಲ್ವಾ? ಈ ಸಿನಿಮಾವನ್ನು ಬ್ಯಾನ್​ ಮಾಡಬೇಕು ಎಂದು ಸೆನ್ಸಾರ್​ ಮಂಡಳಿಗೆ ಮನವಿ ಮಾಡುತ್ತೇನೆ’ ಎಂದು ಕೂಡ ಲಕ್ಷ್ಮಣ್​ ಶಿವರಾಮಕೃಷ್ಣನ್​ ಟ್ವೀಟ್​ ಮಾಡಿದ್ದಾರೆ.

Salman Khan: ಬೆದರಿಕೆ ಹೆಚ್ಚಾದ ಬೆನ್ನಲ್ಲೇ ಬುಲೆಟ್​ಪ್ರೂಫ್​ ಕಾರು ಖರೀದಿಸಿದ ಸಲ್ಮಾನ್​ ಖಾನ್; ಇದರ ಬೆಲೆ ಎಷ್ಟು?

ಹೇಗಿದೆ ‘ಯೆಂಟಮ್ಮಾ..’ ಹಾಡು?

ಸಲ್ಮಾನ್​ ಖಾನ್​ ಮತ್ತು ಪೂಜಾ ಹೆಗ್ಡೆ ನಟಿಸಿರುವ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾದ ಮೊದಲ ಹಾಡು ಕೆಲವು ಕಾರಣದಿಂದ ಟ್ರೋಲ್​ ಆಗಿತ್ತು. ಆದರೆ ಈಗ ‘ಯೆಂಟಮ್ಮಾ..’ ಸಾಂಗ್​ ಧೂಳೆಬ್ಬಿಸುತ್ತಿದೆ. ಈ ಹಾಡಿನಲ್ಲಿ ಸಲ್ಮಾನ್​ ಖಾನ್​, ರಾಮ್​ ಚರಣ್​, ದಗ್ಗುಬಾಟಿ ವೆಂಕಟೇಶ್​ ಅವರು ಪಂಚೆ ಎತ್ತಿಕಟ್ಟಿ ಕುಣಿದಿದ್ದಾರೆ. ಪಾಯಲ್​ ದೇವ್​ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಹಿಂದಿ ಮತ್ತು ತೆಲುಗು ಮಿಶ್ರಿತ ಸಾಹಿತ್ಯ ಇದೆ. ಇದು ಅಭಿಮಾನಿಗಳಿಗೆ ಹೊಸ ಕಿಕ್​ ನೀಡುತ್ತಿದೆ. ಅಂದಹಾಗೆ, ರಾಮ್​ ಚರಣ್​ ಅವರು ಈ ಚಿತ್ರದಲ್ಲಿ ನಟಿಸಿಲ್ಲ. ಅವರು ಈ ಹಾಡಿನಲ್ಲಿ ಗೆಸ್ಟ್​ ಅಪಿಯರೆನ್ಸ್​ ನೀಡಿದ್ದಾರೆ ಅಷ್ಟೇ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:05 pm, Sun, 9 April 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us