Fact Check: ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ಎಂದು ವಿಡಿಯೋ ವೈರಲ್

Salman Khan Sikandar Movie: ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಸಿಕಂದರ್ ಚಿತ್ರ ಬಿಡುಗಡೆಯಾದ ನಂತರ ಸಲ್ಮಾನ್ ಖಾನ್ ಮನೆಯ ಹೊರಗೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ. ವೈರಲ್ ಆಗುತ್ತಿರುವ ಈ ವಿಡಿಯೋ ಸಿರಿಯಾದ್ದಾಗಿದೆ.

Fact Check: ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ಎಂದು ವಿಡಿಯೋ ವೈರಲ್
Salman Khan Fact Check

Updated on: Apr 03, 2025 | 5:05 PM

ಬೆಂಗಳೂರು (ಏ. 03): ಇತ್ತೀಚೆಗೆ ಸಲ್ಮಾನ್ ಖಾನ್ (Salman Khan) ನಟನೆಯ ಸಿಕಂದರ್ ಸಿನಿಮಾ ಬಿಡುಗಡೆಯಾಗಿತ್ತು. ಆದರೆ, ಇದು ದೊಡ್ಡ ಮಟ್ಟದಲ್ಲಿ ಯಶಸ್ಸು ಆದಂತೆ ಕಾಣುತ್ತಿಲ್ಲ, ಚಿತ್ರದ ಗಳಿಕೆ ಕೂಡ ತಗ್ಗುತ್ತಿದೆ. ಇದರ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಕಟ್ಟಡದ ಹೊರಗೆ ಕೆಲವರು ಪಿಸ್ತೂಲ್​ನಿಂದ ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಬ್ರೇಕಿಂಗ್ ನ್ಯೂಸ್ ಎಂದು ಹಂಚಿಕೊಳ್ಳಲಾಗುತ್ತಿದ್ದು, ಸಿಕಂದರ್ ಚಿತ್ರದಿಂದ ನಿರಾಶೆಗೊಂಡ ಸಲ್ಮಾನ್ ಖಾನ್ ಅವರ ಅಪರಿಚಿತ ಅಭಿಮಾನಿಯೊಬ್ಬರು ಅವರ ಮನೆಯ ಹೊರಗೆ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್​ಸ್ಟಾ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ‘‘ಬ್ರೇಕಿಂಗ್ ನ್ಯೂಸ್: ಸಲ್ಮಾನ್ ಖಾನ್ ಮನೆಯಲ್ಲಿ ಗುಂಡಿನ ದಾಳಿ, ಸಿಕಂದರ್ ಚಿತ್ರದ ನಂತರ ವಿವಾದ ಉಲ್ಬಣಗೊಂಡಿದೆ! ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಚಿತ್ರ ಸಿಕಂದರ್ ಅಭಿಮಾನಿಗಳಲ್ಲಿ ಅಪಾರ ಕ್ರೇಜ್ ಕಾಣುತ್ತಿದೆ, ಆದರೆ ಏತನ್ಮಧ್ಯೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ವರದಿಗಳ ಪ್ರಕಾರ, ಭಾನುವಾರ ತಡರಾತ್ರಿ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ (ಬಾಂದ್ರಾ, ಮುಂಬೈ) ಮೇಲೆ ಕೆಲವು ಅಪರಿಚಿತ ದಾಳಿಕೋರರು ಗುಂಡು ಹಾರಿಸಿದ್ದಾರೆ. ಈ ಘಟನೆಯ ನಂತರ, ಇಡೀ ಬಾಲಿವುಡ್ ಮತ್ತು ಸಲ್ಮಾನ್ ಅಭಿಮಾನಿಗಳಲ್ಲಿ ಸಂಚಲನ ಉಂಟಾಗಿದೆ. ಮೂಲಗಳ ಪ್ರಕಾರ, ಸಿಕಂದರ್ ಚಿತ್ರದ ಮೇಲೆ ಕೋಪಗೊಂಡಿರುವ ಕೆಲವು ಅತೃಪ್ತ ಗುಂಪು ಗುಂಡಿನ ದಾಳಿಯ ಹಿಂದೆ ಇರಬಹುದು. ಆದಾಗ್ಯೂ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಯಾವುದೇ ಆರೋಪಿಯನ್ನು ಇನ್ನೂ ಗುರುತಿಸಲಾಗಿಲ್ಲ. ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ, ಆದರೆ ಈ ದಾಳಿ ಅವರ ಅಭಿಮಾನಿಗಳಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ’’ ಎಂದು ಬರೆಯಲಾಗಿದೆ.

ಇದನ್ನೂ ಓದಿ
ಚಾಹಲ್- ಧನಶ್ರೀ ವಿಚ್ಛೇದನದ ಹಾರ್ದಿಕ್ ಪಾಂಡ್ಯ ಶಾಕಿಂಗ್ ಹೇಳಿಕೆ?
RCB ಗೆದ್ದ ಬಳಿಕ ಅನುಷ್ಕಾ ಕೊಹ್ಲಿಯ ಪಾದ ಮುಟ್ಟಿ ನಮಸ್ಕರಿಸಿದ್ದು ನಿಜವೇ?
ಚೆಪಾಕ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಜೊತೆ ಕಾಣಿಸಿಕೊಂಡ ಮಹೇಶ್ ಬಾಬು?
ಎದೆ ಮೇಲೆ ಅಂಬೇಡ್ಕರ್ ಟ್ಯಾಟೂ ಹಾಕಿಸಿಕೊಂಡ ಶುಭ್​ಮನ್ ಗಿಲ್?

 

ಸಲ್ಮಾನ್ ಖಾನ್ ಮನೆಯ ಮೇಲೆ ನಿಜಕ್ಕೂ ಗುಂಡಿನ ದಾಳಿ ನಡೆದಿದೆಯೇ?:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಸಿಕಂದರ್ ಚಿತ್ರ ಬಿಡುಗಡೆಯಾದ ನಂತರ ಸಲ್ಮಾನ್ ಖಾನ್ ಮನೆಯ ಹೊರಗೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ. ವೈರಲ್ ಆಗುತ್ತಿರುವ ಈ ವಿಡಿಯೋ ಸಿರಿಯಾದ್ದಾಗಿದೆ.

ಒಂದಂಕಿ ತಲುಪಿದ ‘ಸಿಕಂದರ್’ ಕಲೆಕ್ಷನ್; ನನಗೆ ಬಾಲಿವುಡ್​ ಬೆಂಬಲ ಬೇಕಿದೆ ಎಂದ ಸಲ್ಮಾನ್ ಖಾನ್

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್​ನಲ್ಲಿ ಈ ಕುರಿತ ಸುದ್ದಿಯನ್ನು ಕೀವರ್ಡ್ ಮೂಲಕ ಹುಡುಕಿದೆವು. ಆದರೆ, ಸಿಕಂದರ್ ಚಿತ್ರದ ನಂತರ ಸಲ್ಮಾನ್ ಖಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಘಟನೆಯ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿ ನಮಗೆ ಸಿಗಲಿಲ್ಲ. ಸ್ಟಾರ್ ನಟನೊಬ್ಬನ ಮನೆಗೆ ಈ ರೀತಿ ಗುಂಡಿನ ದಾಳಿ ಆಗಿದ್ದರೆ ಅದನ್ನು ಮುಖ್ಯವಾಹಿನಿಯ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಅಂತಹ ಯಾವುದೇ ಘಟನೆಯಲ್ಲಿ ಸತ್ಯವಿದ್ದರೆ, ಅದು ಖಂಡಿತವಾಗಿಯೂ ಸುದ್ದಿಯಲ್ಲಿ ಉಲ್ಲೇಖಿಸಲ್ಪಡುತ್ತಿತ್ತು. ಆದರೆ, ಆ ರೀತಿಯ ಯಾವುದೇ ವರದಿ ನಮಗೆ ಸಿಕ್ಕಿಲ್ಲ.

ಬಳಿಕ ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಅನೇಕ ಸುದ್ದಿ ವೆಬ್‌ಸೈಟ್‌ಗಳಲ್ಲಿ ಪ್ರಕಟವಾದ ಸುದ್ದಿಯೊಂದಿಗೆ ಈ ವಿಡಿಯೋ ನಮಗೆ ಸಿಕ್ಕಿತು. ಮಾರ್ಚ್ 7, 2025 ರಂದು ರಾಯಿಟರ್ಸ್ ಸುದ್ದಿಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ವಿಡಿಯೋ ಸಿರಿಯಾದಿಂದ ಬಂದಿದೆ, ಅಲ್ಲಿ ಪದಚ್ಯುತ ನಾಯಕ ಬಶರ್ ಅಲ್-ಅಸ್ಸಾದ್ ಅವರೊಂದಿಗೆ ಸಂಬಂಧ ಹೊಂದಿರುವ ಹೋರಾಟಗಾರರು ಸರ್ಕಾರಿ ಪಡೆಗಳ ಮೇಲೆ ಮಾರಕ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಇದರ ಆಧಾರದ ಮೇಲೆ, ನಾವು ವಿಡಿಯೋದ ಕುರಿತು ನಮ್ಮ ತನಿಖೆಯನ್ನು ಮುಂದುವರಿಸಿದ್ದೇವೆ. ಮಾರ್ಚ್ 7, 2025 ರಂದು NBC ಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ಈ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ವಿಡಿಯೋದಲ್ಲಿ ಹೀಗೆ ಹೇಳಲಾಗಿದೆ: “ಪದಚ್ಯುತ ಸಿರಿಯನ್ ನಾಯಕ ಬಷರ್ ಅಲ್-ಅಸ್ಸಾದ್ ಜೊತೆಗೂಡಿದ ಹೋರಾಟಗಾರರು ಗುರುವಾರ ಸರ್ಕಾರಿ ಪಡೆಗಳ ಮೇಲೆ ಮಾರಕ ದಾಳಿ ನಡೆಸಿದರು, ಇಸ್ಲಾಮಿಸ್ಟ್ ನೇತೃತ್ವದ ಬಂಡುಕೋರರು ಅಧಿಕಾರವನ್ನು ವಶಪಡಿಸಿಕೊಂಡ ನಂತರ ನಡೆದ ಅತ್ಯಂತ ಕೆಟ್ಟ ಸರ್ಕಾರಿ ವಿರೋಧಿ ಹಿಂಸಾಚಾರಗಳಲ್ಲಿ ಇದು ಒಂದಾಗಿದೆ.” ಎಂದು ಬರೆಯಲಾಗಿದೆ.

ಹೀಗಾಗಿ ಸಿಕಂದರ್ ಚಿತ್ರ ಬಿಡುಗಡೆಯಾದ ನಂತರ ಸಲ್ಮಾನ್ ಖಾನ್ ಮನೆಯ ಹೊರಗೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಕಂಡುಕೊಂಡಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ಸಿರಿಯಾದ್ದಾಗಿದೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us