ನಟ ಶಾರುಖ್ ಖಾನ್ (Shah Rukh Khan) ಅವರ ಜನಪ್ರಿಯತೆ ಭಾರತಕ್ಕೆ ಮಾತ್ರ ಸೀಮಿತವಲ್ಲ. ಅವರ ಹವಾ ವಿಶ್ವಾದ್ಯಂತ ಇದೆ. ಅದರಲ್ಲೂ ದುಬೈನಲ್ಲಿ ಅವರನ್ನು ಇಷ್ಟಪಡುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಇತ್ತೀಚೆಗೆ ಅವರು ದುಬೈಗೆ (Dubai) ತೆರಳಿದ್ದರು. ಅಲ್ಲಿ ಸ್ನೇಹಿತರೊಬ್ಬರ ರಿಯಲ್ ಎಸ್ಟೇಟ್ ಕಂಪನಿಯ ಪ್ರಚಾರ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗಿಯಾದರು. ಆ ಇವೆಂಟ್ನಲ್ಲಿ ಅವರು ಕೆಲವು ಅಭಿಮಾನಿಗಳನ್ನು ಭೇಟಿ ಮಾಡಿದರು. ಅಭಿಮಾನಿಗಳ (Shah Rukh Khan Fans) ಗುಂಪಿನಲ್ಲಿ ಇದ್ದ ಮಹಿಳೆಯೊಬ್ಬರು ಶಾರುಖ್ಗೆ ಕಿಸ್ ಮಾಡಿದ್ದಾರೆ. ನಟನ ಅನುಮತಿ ಇಲ್ಲದೇ ಸಾರ್ವಜನಿಕವಾಗಿ ಈ ರೀತಿ ನಡೆದುಕೊಂಡಿದ್ದಕ್ಕಾಗಿ ಆಕೆಯನ್ನು ಜೈಲಿಗೆ ಹಾಕಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದುಬೈನಲ್ಲಿ ಮಹಿಳೆಯೊಬ್ಬರು ಶಾರುಖ್ ಖಾನ್ಗೆ ಕಿಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ವೇಳೆ ಶಾರುಖ್ ಜೊತೆ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಮತ್ತು ಬಾಡಿ ಗಾರ್ಡ್ಸ್ ಕೂಡ ಇದ್ದರು. ಶಾರುಖ್ ಬಳಿ ಬಂದ ಮಹಿಳೆಯು ‘ನಿಮಗೆ ನಾನು ಕಿಸ್ ಮಾಡಲೇ’ ಎಂದು ಕೇಳುತ್ತಾರೆ. ಶಾರುಖ್ ಕಡೆಯಿಂದ ಉತ್ತರ ಬರುವುದಕ್ಕೂ ಮುನ್ನವೇ ಆಕೆಯು ತಮ್ಮ ನೆಚ್ಚಿನ ನಟನ ಮುಖಕ್ಕೆ ಮುತ್ತು ಕೊಟ್ಟು ಖುಷಿಪಡುತ್ತಾರೆ. ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
The love #ShahRukhKhan gets every part of the world, is truly amazing. He deserves every bit of it & more. Thank You @iamsrk for existing, You truly are love itself ❤️ pic.twitter.com/yzhKUMd9wg
— Shah Rukh Khan Warriors FAN Club (@TeamSRKWarriors) June 13, 2023
‘ಶಾರುಖ್ ಖಾನ್ ಅವರ ಜಾಗದಲ್ಲಿ ಓರ್ವ ನಟಿಯನ್ನು ಕಲ್ಪಿಸಿಕೊಳ್ಳಿ. ಆ ನಟಿಯ ಜೊತೆ ಪುರುಷನೊಬ್ಬ ಇದೇ ರೀತಿ ನಡೆದುಕೊಂಡಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು’ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ‘ಶಾರುಖ್ ಖಾನ್ ಅವರ ಅನುಮತಿ ಇಲ್ಲದೇ ಕಿಸ್ ಮಾಡಿದ ಆ ಮಹಿಳೆಯನ್ನು ಜೈಲಿಗೆ ಹಾಕಿ’ ಎಂದು ಅಭಿಮಾನಿಗಳು ಆಕ್ರೋಶದಿಂದ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Shah Rukh Khan: ತಕ್ಷಣ ನೋಡಿ ಇದು ಶಾರುಖ್ ಖಾನ್ ಅಂದುಕೊಳ್ಳಬೇಡಿ; ಈ ವ್ಯಕ್ತಿಯ ಕಥೆ ಬೇರೆಯೇ ಇದೆ
ಸಿನಿಮಾ ವಿಚಾರಕ್ಕೆ ಬರೋದಾದರೆ ಶಾರುಖ್ ಖಾನ್ ಅವರು ‘ಪಠಾಣ್’ ಸಿನಿಮಾದ ಗೆಲುವಿನ ಬಳಿಕ ಟ್ರ್ಯಾಕ್ಗೆ ಮರಳಿದ್ದಾರೆ. ಈಗ ಅವರು ಅಭಿನಯಿಸುತ್ತಿರುವ ‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ. ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಬಜೆಟ್ನ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಜವಾನ್’ ಪಾತ್ರವಾಗುತ್ತಿದೆ. ಈ ಚಿತ್ರವನ್ನು ಶಾರುಖ್ ಖಾನ್ ಅವರ ‘ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ನಿರ್ಮಿಸುತ್ತಿದೆ. ಕಾಲಿವುಡ್ನ ಜನಪ್ರಿಯ ನಿರ್ದೇಶಕರಾದ ಅಟ್ಲಿ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಜವಾನ್’ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿವೆ. ದೊಡ್ಡ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಬಂದಿದೆ.
ಇದನ್ನೂ ಓದಿ: ಶಾರುಖ್ ಖಾನ್ ಪುತ್ರಿ ಸುಹಾನಾಗೆ ಸಿಕ್ಕಿದೆ ಭರಪೂರ ಮೆಚ್ಚುಗೆ
ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರವು ಜಗತ್ತಿನಾದ್ಯಂತ ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತ್ತು. ಈಗ ಆ ಸಿನಿಮಾದ ರೀತಿಯೇ ‘ಜವಾನ್’ ಚಿತ್ರ ಕೂಡ ಬಿಸ್ನೆಸ್ ಮಾಡುವ ಮುನ್ಸೂಚನೆ ಸಿಕ್ಕಿದೆ. ‘ಜವಾನ್’ ಚಿತ್ರದ ಒಟಿಟಿ, ಸ್ಯಾಟಿಲೈಟ್ ಮತ್ತು ಆಡಿಯೋ ಹಕ್ಕುಗಳಿಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿವೆ ಎನ್ನಲಾಗುತ್ತಿದೆ. ಭಾರಿ ಮೊತ್ತಕ್ಕೆ ಹಕ್ಕುಗಳು ಸೇಲ್ ಆಗಿರುವ ಸುದ್ದಿ ಇದೆ. ಆದರೆ, ಎಷ್ಟು ಕೋಟಿಗೆ ಹಕ್ಕುಗಳು ಮಾರಾಟವಾಗಿವೆ ಎಂಬ ಮಾಹಿತಿಯನ್ನು ಚಿತ್ರತಂಡದವರು ಬಹಿರಂಗಗೊಳಿಸಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.