500 ಕೋಟಿ ರೂಪಾಯಿ ಬಾಚಿಕೊಂಡ ‘ಗದರ್​ 2’ ಸಿನಿಮಾ; ಅದ್ದೂರಿಯಾಗಿ ನಡೆಯಿತು ಪಾರ್ಟಿ

ಬಾಲಿವುಡ್​ ಸೆಲೆಬ್ರಿಟಿಗಳು ‘ಗದರ್​ 2’ ಸಿನಿಮಾದ ಗೆಲುವನ್ನು ಸಂಭ್ರಮಿಸಿದ್ದಾರೆ. ಸನ್ನಿ ಡಿಯೋಲ್​ ಅವರು ಆಯೋಜಿಸಿದ್ದ ಸಕ್ಸಸ್​ ಪಾರ್ಟಿಗೆ ಅನೇಕರು ಹಾಜರಿ ಹಾಕಿದ್ದಾರೆ. ಆಮಿರ್​ ಖಾನ್​, ಸಲ್ಮಾನ್​ ಖಾನ್​, ಶಾರುಖ್​ ಖಾನ್​, ಕೃತಿ ಸನೋನ್​, ವಿಕ್ಕಿ ಕೌಶಲ್​ ಸೇರಿದಂತೆ ಅನೇಕರು ಪಾರ್ಟಿಯಲ್ಲಿ ಭಾಗಿಯಾಗಿ ಸನ್ನಿ ಡಿಯೋಲ್​ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

500 ಕೋಟಿ ರೂಪಾಯಿ ಬಾಚಿಕೊಂಡ ‘ಗದರ್​ 2’ ಸಿನಿಮಾ; ಅದ್ದೂರಿಯಾಗಿ ನಡೆಯಿತು ಪಾರ್ಟಿ
ಅಮೀಷಾ ಪಟೇಲ್​, ಸನ್ನಿ ಡಿಯೋಲ್​

Updated on: Sep 04, 2023 | 7:33 PM

ಖ್ಯಾತ ನಟ ಸನ್ನಿ ಡಿಯೋಲ್​ ಅಭಿನಯದ ‘ಗದರ್​ 2’ ಸಿನಿಮಾ (Gadar 2 Movie) ಹೊಸ ದಾಖಲೆ ಬರೆದಿದೆ. ಅತಿ ವೇಗವಾಗಿ 500 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ಬಾಲಿವುಡ್​ ಸಿನಿಮಾ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗಿದೆ. ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಸನ್ನಿ ಡಿಯೋಲ್​ (Sunny Deol) ಅವರು ಇಂಥ ಯಶಸ್ಸು ಕಂಡಿದ್ದಾರೆ. ಹಾಗಾಗಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಸನ್ನಿ ಡಿಯೋಲ್​ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ‘ಗದರ್​ 2’ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಬರೋಬ್ಬರಿ 500 ಕೋಟಿ ರೂಪಾಯಿ ಗಳಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದೇ ಖುಷಿಯಲ್ಲಿ ಸನ್ನಿ ಡಿಯೋಲ್​ ಅವರು ಪಾರ್ಟಿ (Gadar 2 Success Party) ಮಾಡಿದ್ದಾರೆ. ಅದರಲ್ಲಿ ಹಿಂದಿ ಚಿತ್ರರಂಗದ ಅನೇಕರು ಭಾಗಿ ಆಗಿದ್ದಾರೆ.

‘ಗದರ್​ 2’ ಸಿನಿಮಾ ಈ ಪರಿ ಕಲೆಕ್ಷನ್​ ಮಾಡುತ್ತದೆ ಎಂದು ಬಹುತೇಕರು ನಿರೀಕ್ಷಿಸಿರಲಿಲ್ಲ. ‘ಜೈಲರ್​’, ‘ಒಎಂಜಿ 2’ ಮುಂತಾದ ಸಿನಿಮಾಗಳ ಪೈಪೋಟಿ ನಡುವೆ ಈ ಚಿತ್ರ ಬಿಡುಗಡೆ ಆಗಿತ್ತು. ಮೊದಲ ದಿನವೇ 40.10 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಈ ಸಿನಿಮಾ ಸದ್ದು ಮಾಡಿತು. ದಿನದಿಂದ ದಿನಕ್ಕೆ ಕಲೆಕ್ಷನ್​ ಹೆಚ್ಚುತ್ತಲೇ ಹೋಯಿತು. ಅಂತಿಮವಾಗಿ ಈ ಸಿನಿಮಾ 500 ಕೋಟಿ ರೂಪಾಯಿ ಕ್ಲಬ್​ ಸೇರಲಿದೆ ಎಂದು ಬಾಕ್ಸ್​ ಆಫೀಸ್​ ತಜ್ಞರು ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ. 24ನೇ ದಿನಕ್ಕೆ ‘ಗದರ್​ 2’ ಚಿತ್ರದ ಒಟ್ಟು ಗಳಿಕೆ 501 ಕೋಟಿ ರೂಪಾಯಿ ಆಗಿದೆ.

ತರಣ್ ಆದರ್ಶ್​ ಟ್ವೀಟ್​:

ಅನಿಲ್​ ಶರ್ಮಾ ನಿರ್ದೇಶನದ ‘ಗದರ್​ 2’ ಸಿನಿಮಾದಲ್ಲಿ ಸನ್ನಿ ಡಿಯೋಲ್​ ಅವರಿಗೆ ಜೋಡಿಯಾಗಿ ಅಮೀಷಾ ಪಟೇಲ್​ ನಟಿಸಿದ್ದಾರೆ. ಸನ್ನಿ ಡಿಯೋಲ್​ ರೀತಿಯೇ ಅಮೀಷಾ ಕೂಡ ಒಂದು ಗೆಲುವಿಗಾಗಿ ಕಾದಿದ್ದರು. ಅವರಿಗೆ ಈ ಸಿನಿಮಾದಿಂದ ಭಾರಿ ಜನಪ್ರಿಯತೆ ಸಿಕ್ಕಂತೆ ಆಗಿದೆ. ಬಾಲಿವುಡ್​ನಲ್ಲಿ ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ‘ಗದರ್​ 2’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸೆಪ್ಟೆಂಬರ್​ 7ರಂದು ‘ಜವಾನ್​’ ತೆರೆಕಂಡ ಬಳಿಕ ‘ಗದರ್​ 2’ ಹವಾ ಸಹಜವಾಗಿಯೇ ಕಡಿಮೆ ಆಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ‘ಗದರ್​ 2’ ಯಶಸ್ಸು ಸಹಿಸದ ಕಿಡಿಗೇಡಿಗಳು; ಚಿತ್ರಮಂದಿರದ ಎದುರು ಬಾಂಬ್​ ಸ್ಫೋಟ

ಬಾಲಿವುಡ್​ ಸೆಲೆಬ್ರಿಟಿಗಳು ‘ಗದರ್​ 2’ ಸಿನಿಮಾದ ಗೆಲುವನ್ನು ಸಂಭ್ರಮಿಸಿದ್ದಾರೆ. ಸನ್ನಿ ಡಿಯೋಲ್​ ಅವರು ಆಯೋಜಿಸಿದ್ದ ಸಕ್ಸಸ್​ ಪಾರ್ಟಿಗೆ ಅನೇಕರು ಹಾಜರಿ ಹಾಕಿದ್ದಾರೆ. ಆಮಿರ್​ ಖಾನ್​, ಸಲ್ಮಾನ್​ ಖಾನ್​, ಶಾರುಖ್​ ಖಾನ್​, ಕೃತಿ ಸನೋನ್​, ವಿಕ್ಕಿ ಕೌಶಲ್​, ಕಾರ್ತಿಕ್​ ಆರ್ಯನ್​, ಅಜಯ್​ ದೇವಗನ್​, ಸಾರಾ ಅಲಿ ಖಾನ್​, ಸಂಜಯ್​ ದತ್​, ಕಾಜೋಲ್​, ಆದಿತ್ಯ ರಾಯ್​ ಕಪೂರ್​ ಸೇರಿದಂತೆ ಅನೇಕರು ಈ ಪಾರ್ಟಿಯಲ್ಲಿ ಭಾಗಿಯಾಗಿ ಸನ್ನಿ ಡಿಯೋಲ್​ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us