‘ಗಾಂಧಿ ಗೋಡ್ಸೆ’ ರಿಲೀಸ್​​ಗೂ ಮೊದಲು ನಿರ್ದೇಶಕನಿಗೆ ಬೆದರಿಕೆ; ಭದ್ರತೆ ಕೋರಿದ ರಾಜ್​ಕುಮಾರ್ ಸಂತೋಷಿ

|

Updated on: Jan 24, 2023 | 7:16 AM

Rajkumar Santoshi: ಸೂಕ್ಷ್ಮ ವಿಚಾರ ಆಗಿರುವುದರಿಂದ ಚಿತ್ರಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಈ ಚಿತ್ರದ ಪ್ರಮೋಷನ್​ ವೇಳೆ ಅನೇಕರು ಬಂದು ಸಿನಿಮಾ ತಂಡಕ್ಕೆ ತೊಂದರೆ ಮಾಡಿದ ಬಗ್ಗೆ ವರದಿ ಆಗಿದೆ.

‘ಗಾಂಧಿ ಗೋಡ್ಸೆ’ ರಿಲೀಸ್​​ಗೂ ಮೊದಲು ನಿರ್ದೇಶಕನಿಗೆ ಬೆದರಿಕೆ; ಭದ್ರತೆ ಕೋರಿದ ರಾಜ್​ಕುಮಾರ್ ಸಂತೋಷಿ
‘ಗಾಂಧಿ ಗೋಡ್ಸೆ’ ಚಿತ್ರದ ನಿರ್ದೇಶಕ ರಾಜ್​ಕುಮಾರ್ ಸಂತೋಷಿ
Follow us on

‘ಗಾಂಧಿ ಗೋಡ್ಸೆ: ಏಕ್ ಯುದ್ಧ್​’ (Gandhi Godse: Ek Yudh) ಸಿನಿಮಾ ರಿಲೀಸ್​ಗೆ ರೆಡಿ ಇದೆ. ಜನವರಿ 26ರಂದು ಚಿತ್ರ ತೆರೆಗೆ ಬರುತ್ತಿದೆ. ಜನವರಿ 30ಕ್ಕೆ ಗಾಂಧೀಜಿ ಅವರ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಚಿತ್ರವನ್ನು ನಿರ್ದೇಶಕ ರಾಜ್​ಕುಮಾರ್ ಸಂತೋಷಿ ಅವರು ತೆರೆಗೆ ತರುತ್ತಿದ್ದಾರೆ. ಈಗ ಸಿನಿಮಾ ರಿಲೀಸ್​ಗೂ ಮೊದಲು ಅವರಿಗೆ ಬೆದರಿಕೆ ಎದುರಾಗಿದೆ. ಹೀಗಾಗಿ ಭದ್ರತೆ ನೀಡಿ ಎಂದು ರಾಜ್​ಕುಮಾರ್ ಸಂತೋಷಿ (Rajkumar Santoshi) ಅವರು ಮುಂಬೈನ ವಿಶೇಷ ಪೊಲೀಸ್ ಆಯುಕ್ತ ದೇವೇನ್ ಭಾರ್ತಿಗೆ ಕೋರಿದ್ದಾರೆ.

‘ಗಾಂಧಿ ಗೋಡ್ಸೆ: ಏಕ್ ಯುದ್ಧ್​’ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿತು. ಗೋಡ್ಸೆ ಗುಂಡು ಹಾರಿಸಿದ ನಂತರದಲ್ಲಿ ಮಹಾತ್ಮ ಗಾಂಧೀಜಿ ಬದುಕಿದ್ದರೆ ಏನಾಗುತ್ತಿತ್ತು ಎನ್ನುವ ಕಲ್ಪನೆಯೊಂದಿಗೆ ಈ ಸಿನಿಮಾ ಮೂಡಿ ಬಂದಿದೆ. ಸೂಕ್ಷ್ಮ ವಿಚಾರ ಆಗಿರುವುದರಿಂದ ಚಿತ್ರಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಈ ಚಿತ್ರದ ಪ್ರಮೋಷನ್​ ವೇಳೆ ಅನೇಕರು ಬಂದು ಸಿನಿಮಾ ತಂಡಕ್ಕೆ ತೊಂದರೆ ಮಾಡಿದ ಬಗ್ಗೆ ವರದಿ ಆಗಿದೆ.

‘ನನ್ನ ತಂಡ (ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರು) ಸುದ್ದಿಗೋಷ್ಠಿ ನಡೆಸುವಾಗ ಕೆಲವರು ತೊಂದರೆ ಮಾಡಿದ್ದಾರೆ. ಅನೇಕರು ಸಿನಿಮಾ ರಿಲೀಸ್ ಮಾಡಬಾರದು ಎಂದು ಬೆದರಿಕೆ ಹಾಕಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಸಮಸ್ಯೆ ಆಗಬಹುದು. ಹೀಗಾಗಿ ಭದ್ರತೆ ನೀಡಿ’ ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ
Sudheer Varma Death: ತೆಲುಗು ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆಗೆ ಶರಣು
Honey Rose: ನಟಿ ಹನಿ ರೋಸ್  ಜತೆ ನಂದಮೂರಿ ಪಾರ್ಟಿ; ಫೋಟೋ ವೈರಲ್
ಗಾಂಧಿ-ಗೋಡ್ಸೆ ನಡುವಿನ ಸೈದ್ಧಾಂತಿಕ ಯುದ್ಧದ ಕಥೆ ಹೇಳ ಹೊರಟ ನಿರ್ದೇಶಕ ರಾಜ್​ಕುಮಾರ್ ಸಂತೋಷಿ

ಟ್ರೇಲರ್​​ನಲ್ಲೇನಿದೆ?

ಗಾಂಧಿ ಹಾಗೂ ಗೋಡ್ಸೆ ಯಾವ ರೀತಿಯ ಸೈದ್ಧಾಂತಿಕ ನಿಲುವನ್ನು ಹೊಂದಿದ್ದರು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿನ್ಮಯ್ ಮಂಡ್ಲೇಕರ್ ಅವರು ಗೋಡ್ಸೆಯಾಗಿ ಹಾಗೂ ದೀಪಕ್ ಅಂತಾನಿ ಅವರು ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂ ಪಾತ್ರಗಳು ಟ್ರೇಲರ್​ನಲ್ಲಿ ಸಾಕಷ್ಟು ಗಮನ ಸೆಳೆದಿವೆ.

‘ಗಾಂಧಿ ಗೋಡ್ಸೆ ಏಕ್​ ಯುದ್ಧ್​’ ಸಿನಿಮಾ ಕಾಲ್ಪನಿಕ ಎಂದು ನಿರ್ದೇಶಕರು ಈ ಮೊದಲೇ ತಿಳಿಸಿದ್ದರು. ಅದೇ ರೀತಿಯಲ್ಲಿ ಟ್ರೇಲರ್ ಮೂಡಿಬಂದಿದೆ. ಗಾಂಧೀಜಿಗೆ ಗೋಡ್ಸೆ ಗುಂಡು ಹಾರಿಸುತ್ತಾರೆ. ನಂತರ ಗೋಡ್ಸೆ ಅರೆಸ್ಟ್ ಆಗುತ್ತಾರೆ. ಅದೃಷ್ಟವಶಾತ್ ಗಾಂಧಿ ಬದುಕುತ್ತಾರೆ. ‘ನಾನು ಗೋಡ್ಸೆಯನ್ನು ಭೇಟಿ ಮಾಡಬೇಕು’ ಎಂಬ ಇಚ್ಛೆಯನ್ನು ಗಾಂಧಿ ವ್ಯಕ್ತಪಡಿಸುತ್ತಾರೆ. ಇಬ್ಬರೂ ಭೇಟಿ ಆಗುತ್ತಾರೆ. ಇಬ್ಬರ ಮಧ್ಯೆ ಸೈದ್ಧಾಂತಿಕ ಯುದ್ಧ ನಡೆಯುತ್ತದೆ. ಇದನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ