Salman Khan: ಗ್ಯಾಂಗ್​ಸ್ಟರ್ ಹೆಸರಲ್ಲಿ ಸಲ್ಲು ಮನೆಯಿಂದ ಕ್ಯಾಬ್ ಬುಕ್ ಮಾಡಿದ ವ್ಯಕ್ತಿ; ಆ ಬಳಿಕ ಏನಾಯ್ತು?

ರೋಹಿತ್ ತ್ಯಾಗಿ ಎಂಬ 20 ವರ್ಷದ ವ್ಯಕ್ತಿ ಸಲ್ಮಾನ್ ಖಾನ್ ಮನೆಯಿಂದ ಕಾರ್ ಬುಕ್ ಮಾಡಿದ್ದ. ಇಷ್ಟೇ ಆಗಿದ್ದರೆ ಅಷ್ಟೇನು ಸಮಸ್ಯೆ ಆಗುತ್ತಿರಲಿಲ್ಲವೇನೋ. ಆತ ಕ್ಯಾಬ್ ಬುಕ್ ಮಾಡಿದ್ದು ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಹೆಸರಿನಿಂದ. ಈ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ.

Salman Khan: ಗ್ಯಾಂಗ್​ಸ್ಟರ್ ಹೆಸರಲ್ಲಿ ಸಲ್ಲು ಮನೆಯಿಂದ ಕ್ಯಾಬ್ ಬುಕ್ ಮಾಡಿದ ವ್ಯಕ್ತಿ; ಆ ಬಳಿಕ ಏನಾಯ್ತು?
ಸಲ್ಮಾನ್ ಖಾನ್

Updated on: Apr 20, 2024 | 11:35 AM

ಸಲ್ಮಾನ್ ಖಾನ್ (Salman Khan) ಅವರು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದಾರೆ. ಅವರಿಗೆ ದಿನ ಕಳೆದಂತೆ ಬೆದರಿಕೆ ಹೆಚ್ಚುತ್ತಿದೆ. ಇತ್ತೀಚೆಗೆ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿತ್ತು. ಈಗ ಮತ್ತೊಂದು ಪ್ರಕರಣ ನಡೆದಿದೆ. ಗ್ಯಾಂಗ್​ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಸಲ್ಲುಗೆ ಜೀವ ಬೆದರಿಕೆ ಇದೆ. ಈಗ ಮತ್ತೋರ್ವ ವ್ಯಕ್ತಿ ಅರೆಸ್ಟ್ ಆಗಿದ್ದಾರೆ.

ರೋಹಿತ್ ತ್ಯಾಗಿ ಎಂಬ 20 ವರ್ಷದ ವ್ಯಕ್ತಿ ಸಲ್ಮಾನ್ ಖಾನ್ ಮನೆಯಿಂದ ಕಾರ್ ಬುಕ್ ಮಾಡಿದ್ದ. ಇಷ್ಟೇ ಆಗಿದ್ದರೆ ಅಷ್ಟೇನು ಸಮಸ್ಯೆ ಆಗುತ್ತಿರಲಿಲ್ಲವೇನೋ. ಆತ ಕ್ಯಾಬ್ ಬುಕ್ ಮಾಡಿದ್ದು ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಹೆಸರಿನಿಂದ. ಈ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ. ಕ್ಯಾಬ್ ಬುಕ್ ಮಾಡಿದವನು ಉತ್ತರ ಪ್ರದೇಶದ ಗಜಿಯಾಬಾದ್​ನವನು.

ಕ್ಯಾಬ್ ಡ್ರೈವರ್ ಸಲ್ಮಾನ್ ಖಾನ್ ವಾಸವಾಗಿರುವ ಗ್ಯಾಲಾಕ್ಸಿ ಅಪಾರ್ಟ್​ಮೆಂಟ್ ಬಳಿ ಬಂದಿದ್ದಾನೆ. ‘ಲಾರೆನ್ಸ್ ಬಿಷ್ನೋಯ್ ಕ್ಯಾಬ್ ಬುಕ್ ಮಾಡಿದ್ದಾರೆ’ ಎಂದು ಸೆಕ್ಯುರಿಟಿ ಬಳಿ ಹೇಳಿದ್ದಾರೆ. ಇದನ್ನು ಕೇಳಿ ಸೆಕ್ಯುರಿಟಿ ಶಾಕ್ ಆಗಿದ್ದಾರೆ. ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಇದು ಫೇಕ್ ಬುಕಿಂಗ್ ಅನ್ನೋದು ಗೊತ್ತಾಗಿದೆ.

ರೋಹಿತ್ ತ್ಯಾಗಿ ಎಂಬಾತ ಈ ಕ್ಯಾಬ್ ಬುಕ್ ಮಾಡಿದ್ದಾನೆ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ. ಆ ಬಳಿಕ ಆತನ ಬಂಧಿಸಲಾಗಿದೆ. ಪ್ರ್ಯಾಂಕ್ ಮಾಡಲು ಈ ರೀತಿ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾರೆ. ಸದ್ಯ ಗಜಿಯಾಬಾದ್​ನಿಂದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಆ ಜಾಗ ಇನ್ನೂ ಕಾಡುತ್ತದೆ’; ಹಿಟ್ ಆ್ಯಂಡ್ ರನ್ ಕೇಸ್ ಬಗ್ಗೆ ಮಾತನಾಡಿದ್ದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರು ಸದ್ಯ ದುಬೈನಲ್ಲಿದ್ದಾರೆ. ಸಲ್ಮಾನ್​ ಖಾನ್​ ಅವರಿಗೆ ಭಾರತದಲ್ಲಿ ವೈ ಪ್ಲಸ್​ ಭದ್ರತೆ ನೀಡಲಾಗಿದೆ. ಬುಲೆಟ್​ ಪ್ರೂಫ್​ ಕಾರಿನಲ್ಲಿ ಅವರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ವರದಿಗಳ ಪ್ರಕಾರ, ಸಲ್ಮಾನ್​ ಖಾನ್​ ಅವರು ದುಬೈನಲ್ಲಿ ನಡೆಯುವ ಒಂದು ಕಾರ್ಯಕ್ರಮಕ್ಕೆ ಹಾಜರಿ ಹಾಕಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us