AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಗೆ ಮೋಸ ಮಾಡಿದ ಆರೋಪ: ‘ಯಾರೋ ಆಕೆಯ ದಾರಿ ತಪ್ಪಿಸಿದ್ದಾರೆ’ ಎಂದ ನಟ ಗೋವಿಂದ

1987ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೋವಿಂದ ಮತ್ತು ಸುನಿತಾ ಅಹುಜಾ ಅವರಿಗೆ ಟೀನಾ ಮತ್ತು ಯಶವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲದ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಗಂಡನ ವಿರುದ್ಧ ಸುನಿತಾ ಅಹುಜಾ ಅವರು ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದಾರೆ.

ಪತ್ನಿಗೆ ಮೋಸ ಮಾಡಿದ ಆರೋಪ: ‘ಯಾರೋ ಆಕೆಯ ದಾರಿ ತಪ್ಪಿಸಿದ್ದಾರೆ’ ಎಂದ ನಟ ಗೋವಿಂದ
Govinda Image Credit source: PTI
ಮದನ್​ ಕುಮಾರ್​
|

Updated on: Oct 26, 2026 | 5:48 PM

Share

ಬಾಲಿವುಡ್‌ನ ಹಿರಿಯ ನಟ ಗೋವಿಂದ ಮತ್ತು ಅವರ ಪತ್ನಿ ಸುನಿತಾ ಅಹುಜಾ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಬಾಲಿವುಡ್ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಗೋವಿಂದ ಅವರು ನಂಬಿಕೆಗೆ ದ್ರೋಹ ಎಸಗಿದ್ದಾರೆ ಎಂದು ಇತ್ತೀಚೆಗೆ ಸುನಿತಾ ಬಹಿರಂಗವಾಗಿ ಆರೋಪಿಸಿದ್ದರು. ಇದೀಗ ಈ ವಿಚಾರವಾಗಿ ಮೌನ ಮುರಿದಿರುವ ಗೋವಿಂದ, ತಮ್ಮ ಪತ್ನಿಯನ್ನು ಯಾರೋ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಮತ್ತು ಅವರ ಹಿಂದೆ ನಿಂತು ಆಟವಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಸುನಿತಾ ಅಹುಜಾ ಅವರು ಪತಿ ಗೋವಿಂದ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ‘ರೂಪಾ’ ಚಿತ್ರದ ಸಹನಟಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಗೋವಿಂದ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬುದು ಸುನಿತಾ ಅವರ ಪ್ರಮುಖ ಆರೋಪವಾಗಿತ್ತು. ಇತ್ತೀಚೆಗೆ ಮುಂಬೈನ ಪ್ರಸಿದ್ಧ ‘ಲಾಲ್‌ಬಾಗ್‌ಚಾ ರಾಜ’ ಗಣಪತಿ ಪೆಂಡಾಲ್‌ನಲ್ಲಿ ಗೋವಿಂದ ಅವರು ಕೋಮಲ್ ಅವರೊಂದಿಗೆ ಕಾಣಿಸಿಕೊಂಡಿದ್ದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಅದೇ ದಿನ ಸುನಿತಾ ಅವರು ಒಬ್ಬರೇ ಪೆಂಡಾಲ್‌ಗೆ ಭೇಟಿ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೋವಿಂದ, ‘ಯಾರನ್ನಾದರೂ ಮುಜುಗರಕ್ಕೆ ಈಡುಮಾಡುವುದು ಅಥವಾ ಮಾನಹಾನಿ ಮಾಡುವುದು ನನ್ನ ಸ್ವಭಾವವಲ್ಲ. ಏಳೆಂಟು ವರ್ಷಗಳ ಹಿಂದೆಯೇ ನಾನು ಇಂತಹ ಕಷ್ಟದ ಹಂತವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದೆ. ಈಗ ನಾವೆಲ್ಲರೂ ಅದೇ ಸುಳಿಯಲ್ಲಿ ಸಿಲುಕಿದ್ದೇವೆ. ನನ್ನ ಹೆಸರಿಗೆ ಕಳಂಕ ತರುವುದು ಹೊಸದೇನಲ್ಲ. ನಾನು ಎಂದಿಗೂ ನಂಬಿಕೆ ದ್ರೋಹ ಮಾಡುತ್ತೇನೆ ಎಂದೇ ಜನರು ಭಾವಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು ಮಾತನಾಡಿದ ಗೋವಿಂದ ಅವರು, ‘ನನ್ನ ಮತ್ತು ಸುನಿತಾ ನಡುವೆ ಯಾರೋ ದೊಡ್ಡ ಆಟವಾಡುತ್ತಿದ್ದಾರೆ. ಸುನಿತಾ ಅವರನ್ನು ಯಾರೋ ಮಿಸ್‌ಗೈಡ್ ಮಾಡುತ್ತಿದ್ದಾರೆ ಮತ್ತು ಪ್ರಚೋದಿಸುತ್ತಿದ್ದಾರೆ. ಆದರೆ ಸುನಿತಾ ನನ್ನ ಜೀವನ ಮತ್ತು ವೃತ್ತಿಜೀವನಕ್ಕೆ ನೀಡಿದ ಕೊಡುಗೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರ ಗೌರವಕ್ಕೆ ಧಕ್ಕೆ ತರಲು ನಾನು ಬಯಸುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಪ್ರೇಯಸಿ ಜತೆ ಗಣಪತಿ ದರ್ಶನಕ್ಕೆ ಬಂದ ಗೋವಿಂದ: ಪತ್ನಿ ಸುನೀತಾ ಪ್ರತಿಕ್ರಿಯೆ

‘ಅವರನ್ನು ಪ್ರಚೋದಿಸುತ್ತಿರುವವರಿಗೆ ತಲೆತಿರುಗಿ ಸುಮ್ಮನಾಗುವವರೆಗೆ ನಾನು ಈ ಆರೋಪಗಳನ್ನು ಎದುರಿಸುತ್ತಲೇ ಇರುತ್ತೇನೆ. ಅವರು ಗೋವಿಂದ ಜೊತೆ ಆಟವಾಡುತ್ತಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕಹಿ ಎಂದಿಗೂ ಸಿಹಿಯಾಗಲು ಸಾಧ್ಯವಿಲ್ಲ. ಈ ಕೆಟ್ಟ ಸಮಯ ಕಳೆದ ಮೇಲೆ ಜನರು ನಾನು ಎಷ್ಟು ಗೌರವಯುತವಾಗಿ ನಡೆದುಕೊಂಡೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ನಾನು ಅವರ ಯಾವುದೇ ತಂತ್ರಗಳಿಗೆ ಬಲಿಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಪರಿಚಯ
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಪರಿಚಯ
ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು!
ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು!
ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ಲಖನೌದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ಗುಂಡಿನ ದಾಳಿ
ಲಖನೌದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ಗುಂಡಿನ ದಾಳಿ
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ಸಂಸತ್ ಭವನದ ನಾರ್ತ್ ಬ್ಲಾಕ್‌ನಲ್ಲಿ ಭಾರಿ ಅಗ್ನಿ ಅವಘಡ
ಸಂಸತ್ ಭವನದ ನಾರ್ತ್ ಬ್ಲಾಕ್‌ನಲ್ಲಿ ಭಾರಿ ಅಗ್ನಿ ಅವಘಡ
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು