ಮಗಳು ಸುಹಾನಾ ಜೊತೆ ಸಿನಿಮಾ ಮಾಡಲ್ಲ ಎಂದ ಶಾರುಖ್ ಖಾನ್; ಅರ್ಧಕ್ಕೆ ನಿಂತಿತು ಚಿತ್ರ

ಸುಜಯ್ ಘೋಷ್ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಸುಹಾನಾ ಖಾನ್, ಶಾರುಖ್ ಖಾನ್ ಒಟ್ಟಾಗಿ ಕೆಲಸ ಮಾಡಬೇಕಿತ್ತು. ಇಬ್ಬರೂ ತಂದೆ ಮಗಳ ಪಾತ್ರದಲ್ಲಿ ನಟಿಸಬೇಕಿತ್ತು. ದೊಡ್ಡ ಪರದೆಮೇಲೆ ತಂದೆ ಮಗಳನ್ನು ಒಟ್ಟಾಗಿ ನೋಡಲು ಫ್ಯಾನ್ಸ್ ಕಾದಿದ್ದರು. ಆದರೆ, ಈ ಸಿನಿಮಾ ರಿಲೀಸ್ ಆಗುತ್ತಿಲ್ಲ.

ಮಗಳು ಸುಹಾನಾ ಜೊತೆ ಸಿನಿಮಾ ಮಾಡಲ್ಲ ಎಂದ ಶಾರುಖ್ ಖಾನ್; ಅರ್ಧಕ್ಕೆ ನಿಂತಿತು ಚಿತ್ರ
ಸುಹಾನಾ-ಶಾರುಖ್

Updated on: Feb 01, 2024 | 10:30 AM

ಶಾರುಖ್ ಖಾನ್ (Shah Rukh Khan) ಅವರು ಬಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಕಳೆದ ವರ್ಷ ಅವರ ನಟನೆಯ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿ ಸದ್ದು ಮಾಡಿವೆ. ಈ ಬೆನ್ನಲ್ಲೇ ಅವರು ಮಗಳು ಸಹಾನಾ ಜೊತೆ ಸಿನಿಮಾ ಮಾಡಬೇಕಿತ್ತು. ತಂದೆ-ಮಗಳನ್ನು ಒಟ್ಟಿಗೆ ತೆರೆ ಮೇಲೆ ನೋಡೋ ಅವಕಾಶ ಸಿಗಲಿದೆ ಎಂದು ಫ್ಯಾನ್ಸ್ ಖುಷಿಪಟ್ಟಿದ್ದರು. ಆದರೆ, ಇದಕ್ಕೆ ಶಾರುಖ್ ಖಾನ್ ಅವಕಾಶ ನೀಡುತ್ತಿಲ್ಲ. ಮಗಳ ಜೊತೆ ಸಿನಿಮಾ ಮಾಡುವುದಿಲ್ಲ ಎಂದು ಶಾರುಖ್ ಖಾನ್ ಹೇಳಿದ್ದಾರೆ. ಈ ಕಾರಣಕ್ಕೆ ಸಿನಿಮಾ ಅರ್ಧಕ್ಕೆ ನಿಂತಿದೆ.

ಸುಹಾನಾ ಖಾನ್ ಈಗಾಗಲೇ ಶಿಕ್ಷಣ ಪೂರ್ಣಗೊಳಿಸಿ ನಟನೆಗೆ ಕಾಲಿಟ್ಟಿದ್ದಾರೆ. ಜೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾ ಮೂಲಕ ಬಣ್ಣದ ಬದುಕು ಶುರು ಮಾಡಿದ್ದಾರೆ. ಈ ಚಿತ್ರದಲ್ಲಿ ಖುಷಿ ಕಪೂರ್, ಅಗಸ್ತ್ಯ ನಂದ ಸೇರಿ ಅನೇಕ ಸ್ಟಾರ್ ಕಲಾವಿದರ ಮಕ್ಕಳಿದ್ದರು. ಈಗ ಸುಹಾನಾ ಅವರು ತಂದೆ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಚಿತ್ರವನ್ನು ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿಲ್ಲ.

ಸುಜಯ್ ಘೋಷ್ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ಒಟ್ಟಾಗಿ ಕೆಲಸ ಮಾಡಬೇಕಿತ್ತು. ಇಬ್ಬರೂ ತಂದೆ ಮಗಳ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ದೊಡ್ಡ ಪರದೆಮೇಲೆ ತಂದೆ ಮಗಳನ್ನು ಒಟ್ಟಾಗಿ ನೋಡಲು ಫ್ಯಾನ್ಸ್ ಕಾದಿದ್ದರು. ಆದರೆ, ಈ ಚಿತ್ರವನ್ನು ಮಾಡಲು ಶಾರುಖ್ ಖಾನ್ ನಿರಾಕರಿಸಿದ್ದಾರೆ.

ಈಗಾಗಲೇ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ನಟನೆಯನ್ನು ಟೀಕೆ ಮಾಡಲಾಗಿದೆ. ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡರೆ ಸಹಜವಾಗಿಯೇ ಫ್ಯಾನ್ಸ್ ಹೋಲಿಕೆ ಮಾಡುತ್ತಾರೆ. ಈ ರೀತಿ ಆಗೋದು ಶಾರುಖ್​ ಅವರಿಗೆ ಇಷ್ಟ ಇಲ್ಲ. ಈ ಕಾರಣಕ್ಕೆ ಅವರು ಮಗಳ ಜೊತೆ ಸಿನಿಮಾ ಮಾಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಈ ಚಿತ್ರಕ್ಕೆ ‘ಕಿಂಗ್​’ ಎಂದು ಶೀರ್ಷಿಕೆ ಇಡಲಾಗಿತ್ತು. ಆ್ಯಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರುವುದರಲ್ಲಿತ್ತು. ಈಗ ಶಾರುಖ್ ಖಾನ್ ಅವರೇ ಸಿನಿಮಾನ ಮಾಡಲು ಆಸಕ್ತಿ ತೋರಿಸಿಲ್ಲ. ಹೀಗಾಗಿ, ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡುವಂತಾಗಲಿ ಎಂಬುದು ಫ್ಯಾನ್ಸ್ ಕೋರಿಕೆ.

ಇದನ್ನೂ ಓದಿ: ಪ್ರೀತಿಯಿಂದ ಹಗ್ ಕೊಟ್ಟ ಶಾರುಖ್ ಖಾನ್​; ತಡೆಯಲಾಗದೆ ಕಣ್ಣೀರು ಹಾಕಿದ ಅಭಿಮಾನಿ

ಶಾರುಖ್ ಖಾನ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಡಂಕಿ’ ಸಿನಿಮಾದಲ್ಲಿ. ಈ ಚಿತ್ರದಲ್ಲಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮೊದಲಾದವರು ನಟಿಸಿದ್ದರು. ಸುಹಾನಾ ಅವರ ನಟನೆಯ ‘ದಿ ಆರ್ಚೀಸ್’ ಸಿನಿಮಾ ನೇರವಾಗಿ ನೆಟ್​ಫ್ಲಿಕ್ಸ್​​ನಲ್ಲಿ ರಿಲೀಸ್ ಆಗಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us