ಖ್ಯಾತ ಹಿಂದಿ ಗಾಯಕ ಯೋ ಯೋ ಹನಿ ಸಿಂಗ್ (ಹಿರ್ದೇಶ್ ಸಿಂಗ್) ಇಂದು (ಸೆಪ್ಟೆಂಬರ್ 3) ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದ್ದಾರೆ. ಅವರ ವಿರುದ್ಧ ಪತ್ನಿ ಶಾಲಿನಿ ತಲ್ವಾರ್ ಕೌಟುಂಬಿಕ ದೌರ್ಜನ್ಯದ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದರು. ದೆಹಲಿಯ ತಿಸ್ ಹಜಾರಿ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರಾದ ಅವರು, ನ್ಯಾಯಾಧೀಶರು ದಂಪತಿಗಳಿಗೆ ನಡೆಸಿದ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಹನಿ ಸಿಂಗ್ ವಕೀಲರು ಆದಾಯದ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಶನಿವಾರ (ಆಗಸ್ಟ್ 28), ಹನಿ ಸಿಂಗ್ ಕಳಪೆ ಆರೋಗ್ಯದ ಕಾರಣದಿಂದ ಹಾಜರಾಗಲು ವಿಫಲವಾದ ನಂತರ ಸೆಪ್ಟೆಂಬರ್ 3 ರಂದು ತನ್ನ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಹನಿ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್, ಪತಿಯ ವಿರುದ್ಧ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ದೌರ್ಜನ್ಯ ಆರೋಪಿಸಿ ದೂರು ನೀಡಿದ್ದರು. ಇಂದು ನ್ಯಾಯಾಧೀಶರ ಕೊಠಡಿಯಲ್ಲಿ ವಿಚಾರಣೆ ನಡೆದಿದ್ದು, ನ್ಯಾಯಾಧೀಶರು ದಂಪತಿಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದಿನ ವಿಚಾರಣೆಯಲ್ಲಿ ಏನಾಗಿತ್ತು?
ಆಗಸ್ಟ್ 28ರಂದು ಮೆಟ್ರೊಪಾಲಿಟನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ಕೋರ್ಟ್ನಲ್ಲಿಯೇ ಕಣ್ಣೀರು ಹಾಕಿದ್ದರು. ‘ಜೀವನದ ಯಾವ ಘಟ್ಟದಲ್ಲಿ ಮದುವೆ ಆಗಿತ್ತು? ಪ್ರೀತಿ ಮುರಿದು ಬಿದ್ದಿದ್ದು ಯಾವಾಗ’ ಎಂಬಿತ್ಯಾದಿ ಪ್ರಶ್ನೆಗಳನ್ನು ನ್ಯಾಯಾಧೀಶೆ ತನಿಯಾ ಸಿಂಗ್ ಅವರು ಶಾಲಿನಿಗೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರ ಹೇಳುವಾಗ ಶಾಲಿನಿ ಕಣ್ಣೀರು ಹಾಕಿದ್ದರು. ಅನಾರೋಗ್ಯದ ಕಾರಣ ನೀಡಿ ಹನಿ ಸಿಂಗ್ ಕೋರ್ಟ್ಗೆ ಹಾಜರಾಗಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಧೀಶೆ ತನಿಯಾ ಸಿಂಗ್ ಅಸಮಾಧಾನ ಹೊರ ಹಾಕಿ, ‘ಯಾರೊಬ್ಬರೂ ಕಾನೂನಿಗಿಂತ ದೊಡ್ಡವರಲ್ಲ. ಈ ಪ್ರಕರಣವನ್ನು ಹನಿ ಸಿಂಗ್ ಹಗುರವಾಗಿ ತೆಗೆದುಕೊಂಡಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ’ ಎಂದಿದ್ದರು.
ಇದನ್ನೂ ಓದಿ:
ಮುಂಬೈನಲ್ಲಿ ನೆರವೇರಿತು ಸಿದ್ದಾರ್ಥ್ ಶುಕ್ಲಾ ಅಂತ್ಯಸಂಸ್ಕಾರ; ಕಣ್ಣೀರಿಟ್ಟ ಕುಟುಂಬದ ಸದಸ್ಯರು
Samantha: ಶೂಟಿಂಗ್ನಿಂದ ಬ್ರೇಕ್ ತೆಗೆದುಕೊಂಡ ಸಮಂತಾ ಈಗೇನು ಮಾಡುತ್ತಿದ್ದಾರೆ?; ಉತ್ತರ ನೀಡುತ್ತಿದೆ ಈ ಫೊಟೊ
(Honey Singh appeared in front of Delhi s Tis Hazari Court in domestic violence case accused by his wife Shalini Talwar)
Published On - 5:50 pm, Fri, 3 September 21