ಹೃತಿಕ್​ ರೋಷನ್​ ಮನೆಯವರ ಜೊತೆ ಪ್ರೇಯಸಿ ಸಬಾ ಆಜಾದ್​​ ದೀಪಾವಳಿ; ಈಗ ಎಲ್ಲವೂ ಅಧಿಕೃತ

ಹಲವು ತಿಂಗಳಿಂದ ಹೃತಿಕ್​ ರೋಷನ್​ ಮತ್ತು ಸಬಾ ಆಜಾದ್​ ಡೇಟಿಂಗ್​ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅವರು ಮದುವೆ ಆಗಲಿ ಎಂಬುದು ಫ್ಯಾನ್ಸ್​ ಆಸೆ. ಸಬಾ ಅವರು ಹೃತಿಕ್​ ರೋಷನ್​ ಅವರ ಫ್ಯಾಮಿಲಿಗೆ ತುಂಬ ಹತ್ತಿರ ಆಗಿದ್ದಾರೆ. ಪ್ರತಿ ಹಬ್ಬದಲ್ಲೂ ಅವರು ಜೊತೆಯಾಗಿ ಸಂಭ್ರಮಿಸುತ್ತಾರೆ. ಆ ಮೂಲಕ ಅವರಿಬ್ಬರ ಸಂಬಂಧ ಅಧಿಕೃತವಾಗಿದೆ.

ಹೃತಿಕ್​ ರೋಷನ್​ ಮನೆಯವರ ಜೊತೆ ಪ್ರೇಯಸಿ ಸಬಾ ಆಜಾದ್​​ ದೀಪಾವಳಿ; ಈಗ ಎಲ್ಲವೂ ಅಧಿಕೃತ
ಸಬಾ ಆಜಾದ್​, ಹೃತಿಕ್​ ರೋಷನ್​

Updated on: Nov 14, 2023 | 7:08 AM

ಎಲ್ಲೆಲ್ಲೂ ದೀಪಾವಳಿ (Deepavali 2023) ಹಬ್ಬದ ಸಂಭ್ರಮ ಮನೆ ಮಾಡಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಸಡಗರದಿಂದ ಹಬ್ಬ ಆಚರಿಸುತ್ತಿದ್ದಾರೆ. ನಟ ಹೃತಿಕ್​ ರೋಷನ್​ (Hrithik Roshan) ಕೂಡ ಎಲ್ಲ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ. ಈಗ ಅವರ ಮನೆಯಲ್ಲಿ ದೀಪಾವಳಿಯ ಸಂಭ್ರಮ ತುಂಬಿ ತುಳುಕುತ್ತಿದೆ. ಈ ಖುಷಿಯನ್ನು ಇನ್ನಷ್ಟು ಹೆಚ್ಚಿಸಿರುವುದು ಅವರ ಪ್ರೇಯಸಿ ಸಬಾ ಆಜಾದ್​. ಹೌದು, ಹೃತಿಕ್​ ರೋಷನ್​ ಅವರ ಕುಟುಂಬದ ಜೊತೆ ಸಬಾ ಆಜಾದ್​ (Saba Azad) ಕೂಡ ಸೇರಿಕೊಂಡಿದ್ದಾರೆ. ದೀಪಾವಳಿಯ ಖುಷಿಯಲ್ಲಿ ಅವರು ಫ್ಯಾಮಿಲಿ ಜೊತೆ ಪೋಸ್​ ನೀಡಿದ್ದಾರೆ. ಆ ಫೋಟೋ ವೈರಲ್​ ಆಗಿದೆ.

ಹಲವು ತಿಂಗಳಿಂದ ಹೃತಿಕ್​ ರೋಷನ್​ ಮತ್ತು ಸಬಾ ಆಜಾದ್​ ಅವರು ಡೇಟಿಂಗ್​ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅವರು ಮದುವೆ ಆಗಲಿ ಎಂಬುದು ಫ್ಯಾನ್ಸ್​ ಆಸೆ. ಸಬಾ ಆಜಾದ್​ ಅವರು ಹೃತಿಕ್​ ರೋಷನ್​ ಫ್ಯಾಮಿಲಿಗೆ ತುಂಬ ಹತ್ತಿರ ಆಗಿದ್ದಾರೆ. ಪ್ರತಿ ಹಬ್ಬದಲ್ಲೂ ಅವರು ಜೊತೆಯಾಗಿ ಸಂಭ್ರಮಿಸುತ್ತಾರೆ. ಆ ಮೂಲಕ ಅವರಿಬ್ಬರ ಸಂಬಂಧ ಅಧಿಕೃತವಾಗಿದೆ. ಹೃತಿಕ್​ ರೋಷನ್​ ಮತ್ತು ಸಬಾ ಆಜಾದ್​ ಅವರು ಜೊತೆಯಾಗಿರುವ ಅನೇಕ ಫೋಟೋಗಳು ಹರಿದಾಡುತ್ತಿವೆ.

ಈ ಬಾರಿಯ ದೀಪಾವಳಿ ಹಬ್ಬದ ಪ್ರಯುಕ್ತ ಹೃತಿಕ್ ರೋಷನ್​ ಅವರು ಕಪ್ಪು ಬಣ್ಣದ ಕುರ್ತಾ ಧರಿಸಿದ್ದಾರೆ. ಸಬಾ ಆಜಾದ್​ ಅವರು ನೀಲಿ ಮತ್ತು ಕೆಂಪು ಬಣ್ಣದ ಲೆಹಂಗಾ ಧರಿಸಿ ಮಿಂಚಿದ್ದಾರೆ. ಫ್ಯಾಮಿಲಿ ಜೊತೆ ಅವರು ಖುಷಿಯಿಂದ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋ ಶೇರ್​ ಮಾಡಿಕೊಳ್ಳುವ ಮೂಲಕ ಹೃತಿಕ್​ ರೋಷನ್​ ಅವರು ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಮೊದಲು ಸುಸಾನೆ ಖಾನ್​ ಜೊತೆ ಹೃತಿಕ್​ ಮದುವೆ ಆಗಿದ್ದರು. ಕೆಲವು ವರ್ಷಗಳ ಹಿಂದೆ ಅವರು ವಿಚ್ಛೇದನ ಪಡೆದುಕೊಂಡರು.

ಇದನ್ನೂ ಓದಿ: ಐದೇ ವಾರದಲ್ಲಿ ಸಿಕ್ಸ್ ಪ್ಯಾಕ್ ಮಾಡಿದ ಹೃತಿಕ್; ಇದಕ್ಕೆಲ್ಲಾ ಗರ್ಲ್​​ಫ್ರೆಂಡ್ ಕಾರಣ

ಇತ್ತೀಚೆಗೆ ರಿಲೀಸ್​ ಆದ ‘ಟೈಗರ್​ 3’ ಸಿನಿಮಾದಲ್ಲಿ ಹೃತಿಕ್​ ರೋಷನ್​ ಅತಿಥಿ ಪಾತ್ರ ಮಾಡಿದ್ದಾರೆ. ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡುತ್ತಿರುವ ‘ಫೈಟರ್​’ ಸಿನಿಮಾದಲ್ಲಿ ಹೃತಿಕ್​ ನಟಿಸುತ್ತಿದ್ದಾರೆ. 2024ರ ಜನವರಿ 25ರಂದು ಆ ಸಿನಿಮಾ ಬಿಡುಗಡೆ ಆಗಲಿದೆ. ಅದರ ಜೊತೆಗೆ ಅಯಾನ್​ ಮುಖರ್ಜಿ ನಿರ್ದೇಶನದ ‘ವಾರ್​ 2’ ಸಿನಿಮಾದಲ್ಲಿ ಅವರು ಜೂನಿಯರ್​ ಎನ್​ಟಿಆರ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us