ಹೃತಿಕ್ ರೋಷನ್ ಅವರಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಅವರು ಕಳೆದ ಎರಡು ದಶಕಗಳಿಂದ ಚಿತ್ರರಂಗವನ್ನು ಆಳುತ್ತಿದ್ದಾರೆ. ಅವರು ಸ್ಟಾರ್ ನಿರ್ದೇಶಕ ಹಾಗೂ ನಿರ್ಮಾಪಕ ರಾಕೇಶ್ ರೋಷನ್ ಅವರ ಮಗನಾದರೂ ತಮ್ಮದೇ ಆದ ಸ್ಥಾನ ಪಡೆದರು. ಈಗ ಅವರ ಮೇಲೆ ಡಾಕ್ಯುಮೆಂಟರಿ ಸಿದ್ಧಗೊಳ್ಳುವ ಸಾಧ್ಯತೆ ಇದೆ ಎಂದು ಹೇಲಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ನಿರ್ದೇಶಕ ಶಶಿ ರಂಜನ್ ಅವರು ಪ್ರತಿಕ್ರಿಯಿಸಿದ್ದಾರೆ.
ನೆಟ್‌ಫ್ಲಿಕ್ಸ್‌ನಲ್ಲಿ ‘ದಿ ರೋಷನ್’ ಎನ್ನುವ ಟೈಟಲ್ನೊಂದಿಗೆ ಡಾಕ್ಯುಮೆಂಟರಿ ಬಿಡುಗಡೆ ಕಂಡಿದೆ. ಇದು ರಾಕೇಶ್ ರೋಷನ್ ಅವರ ಕುರಿತು, ಅವರ ಕುಟುಂಬದ ಲೆಗಸಿ ಕುರಿತು ಇದೆ. ಇದಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಈ ಡಾಕ್ಯುಮೆಂಟರಿ ನಿರ್ದೇಶಕ ಶಶಿ ರಂಜನ್ ಮಾತನಾಡಿದ್ದಾರೆ.
ಈ ಬಗ್ಗೆ ಶಶಿ ಅವರಿಗೆ ಪ್ರಶ್ನೆ ಮಾಡಲಾಗಿದೆ. ‘ಹೃತಿಕ್ ಬಗ್ಗೆ ಡಾಕ್ಯುಮೆಂಟರಿ ಮಾಡುವ ಉದ್ದೇಶ ಇದೆಯೇ’ ಎಂದು ಕೇಳಲಾಯಿತು. ಇದಕ್ಕೆ ಶಶಿ ರಂಜನ್ ಉತ್ತರಿಸಿದ್ದಾರೆ. ‘ಡಾಕ್ಯುಮೆಂಟರಿ ಮಾಡಲು ಅವರು ಆಸಕ್ತಿ ತೋರಿದಾಗ ಮಾಡುತ್ತೇವೆ. ತಂದೆಯಾಗಿ, ಪತಿಯಾಗಿ, ನಟನಾಗಿ ಹೀಗೆ ಅವರು ನಿರ್ವಹಿಸಿದ ಪಾತ್ರಗಳನ್ನು ಡಾಕ್ಯುಮೆಂಟರಿಯಲ್ಲಿ ಸೇರಿಸಲಾಗುವುದು’ ಎಂದು ಶಶಿ ರಂಜನ್ ಹೇಳಿದ್ದಾರೆ.
ಹೃತಿಕ್ ರೋಷನ್ ಅವರ ಜೀವನವು ಕೆಲವು ವಿವಾದಗಳಿಂದಲೂ ಕೂಡಿದೆ. ಅವರು ಕಂಗನಾ ರಣಾವತ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಕಂಗನಾ ಅವರು ಆರೋಪ ಮಾಡಿದ್ದರು. ಇದನ್ನು ಡಾಕ್ಯುಮೆಂಟರಿಯಲ್ಲಿ ಸೇರಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಒಂದೊಮ್ಮೆ ಸೇರಿಸಿದರೆ ಇದು ಕೇವಲ ನಟನ ಆ್ಯಂಗಲ್ನಿಂದ ಮಾತ್ರ ಇರುತ್ತದೆಯೇ ಎಂದು ಅನೇಕರು ಕೇಳಿದ್ದಾರೆ.
ಇದನ್ನೂ ಓದಿ: ಸಾವಿನ ಕದ ತಟ್ಟಿ ಬಂದಿದ್ದ ಹೃತಿಕ್ ರೋಷನ್; 50 ಅಂತಸ್ತಿನ ಕಟ್ಟಡದ ಮೇಲಾಗಿದ್ದೇನು?
ಹೃತಿಕ್ ರೋಷನ್ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಕೂಡ ನಟಿಸುತ್ತಿದ್ದಾರೆ. ಅಯಾನ್ ಮುಖರ್ಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜೂನಿಯರ್ ಎನ್ಟಿಆರ್ ಅವರು ದಕ್ಷಿಣ ಭಾರತದ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹೃತಿಕ್ ಅವರು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ. ಹೃತಿಕ್ ರೋಷನ್ ಅವರ ನಟನೆಯ ‘ಕ್ರಿಶ್ 4’ ಸಿನಿಮಾ ಕೂಡ ಬರಬೇಕಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.