ವಾರ್ 2 ಟ್ವಿಟ್ಟರ್ ವಿಮರ್ಶೆ: ಹೇಗಿದೆ ಜೂ ಎನ್​ಟಿಆರ್-ಹೃತಿಕ್ ರೋಷನ್ ಜುಗಲ್​ಬಂಧಿ

war 2 movie review: ಜೂ ಎನ್​ಟಿಆರ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್ 2’ ಸಿನಿಮಾ ಇಂದು (ಆಗಸ್ಟ್ 14) ಬಿಡುಗಡೆ ಆಗಿದೆ. ಅರ್ಲಿ ಮಾರ್ನಿಂಗ್ ಶೋ ನೋಡಿದವರು, ವಿದೇಶದಲ್ಲಿ ಸಿನಿಮಾ ನೋಡಿದವರು ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ‘ವಾರ್ 2’ ಸಿನಿಮಾದ ಟ್ವಿಟ್ಟರ್ ವಿಮರ್ಶೆ.

ವಾರ್ 2 ಟ್ವಿಟ್ಟರ್ ವಿಮರ್ಶೆ: ಹೇಗಿದೆ ಜೂ ಎನ್​ಟಿಆರ್-ಹೃತಿಕ್ ರೋಷನ್ ಜುಗಲ್​ಬಂಧಿ
War 2

Updated on: Aug 14, 2025 | 9:24 AM

ಬಾಲಿವುಡ್ (Bollywood) ಹಾಗೂ ದಕ್ಷಿಣ ಭಾರತದ ಇಬ್ಬರು ಸೂಪರ್ ಸ್ಟಾರ್ ನಟರು ಮೊದಲ ಬಾರಿ ಒಟ್ಟಿಗೆ ತೆರೆ ಹಂಚಿಕೊಂಡಿರುವ ‘ವಾರ್ 2’ ಸಿನಿಮಾ ಇಂದು (ಆಗಸ್ಟ್ 14) ಬಿಡುಗಡೆ ಆಗಿದೆ. ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾಕ್ಕೆ ‘ವಾರ್ 2’ ಸ್ಪರ್ಧೆ ಒಡ್ಡಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸಿನಿಮಾದ ಅರ್ಲಿ ಮಾರ್ನಿಂಗ್ ಶೋಗಳನ್ನು ಆಯೋಜಿಸಲಾಗಿದ್ದು, ಜನ ಈಗಾಗಲೇ ಸಿನಿಮಾ ನೋಡಿ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ ಜನರಿಗೆ ಸಿನಿಮಾ ಬಗ್ಗೆ ಅನಿಸಿದ್ದೇನು? ಇಲ್ಲಿದೆ ನೋಡಿ ‘ವಾರ್ 2’ ಟ್ವಿಟ್ಟರ್ ವಿಮರ್ಶೆ…

‘ಜೂ ಎನ್​ಟಿಆರ್ ಅದ್ಭುತವಾಗಿ ನಟಿಸಿದ್ದಾರೆ. ಜೂ ಎನ್​ಟಿಆರ್ ತನ್ನ ವೃತ್ತಿ ಜೀವನದ ಅದ್ಭುತ ನಟನೆಯನ್ನು ಸಿನಿಮಾನಲ್ಲಿ ನೀಡಿದ್ದಾರೆ. ಇಬ್ಬರು ಸ್ಟಾರ್ ನಟರು ಎದುರು-ಬದುರಾಗುವ ದೃಶ್ಯಗಳು ಅದ್ಭುತವಾಗಿವೆ. ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಎಮೋಷನ್ ಸೀನ್​ಗಳು ಸಹ ಬಹಳ ಚೆನ್ನಾಗಿ ಮೂಡಿ ಬಂದಿವೆ. ಟೈಗರ್ ಮತ್ತೊಮ್ಮೆ ಗೆದ್ದಿದ್ದಾನೆ’ ಎಂದು ಹೆಮಂತ್ ಟ್ವೀಟ್ ಮಾಡಿದ್ದಾರೆ.

ಬ್ರಿಟನ್​​ನಲ್ಲಿ ‘ವಾರ್ 2’ ಸಿನಿಮಾ ನೋಡಿದ ನೀಲ್ ಎಂಬುವರು ಟ್ವೀಟ್ ಮಾಡಿ, ‘ಇಂಟರ್ವೆಲ್ ವರೆಗೆ ಸಿನಿಮಾ ಮುಗಿದಿದೆ. ಇಷ್ಟು ದೊಡ್ಡ ಸ್ಕೇಲ್​​ನಲ್ಲಿ ನಿರ್ಮಾಣವಾದ ಯಾವ ಬಾಲಿವುಡ್ ಸಿನಿಮಾ ಅನ್ನೂ ನಾನು ನೋಡಿಲ್ಲ. ಆಕ್ಷನ್ ದೃಶ್ಯಗಳು, ಮಾಸ್ ಸೀಕ್ವೆನ್ಸ್​ಗಳು ಅತ್ಯದ್ಭುತವಾಗಿವೆ. ಯಶ್​ರಾಜ್ ಫಿಲಮ್ಸ್​ನ ಸ್ಪೈ ಸಿನಿಮಾಗಳ ಪಟ್ಟಿಯಲ್ಲಿ ಇದು ಅತ್ಯದ್ಭುತ. ಸಿನಿಮಾದ ಮೊದಲಾರ್ಧದಲ್ಲಿ ಸಾಕಷ್ಟು ಟ್ವಿಸ್ಟ್, ಟರ್ನ್​ಗಳು, ಆಕ್ಷನ್ ದೃಶ್ಯಗಳು ಮತ್ತು ಕುಣಿಯುವಂತೆ ಮಾಡುವ ಹಾಡುಗಳು ಇವೆ’ ಎಂದಿದ್ದಾರೆ.

ಟೈಗರ್ ಪಾತ್ರ ಅತ್ಯದ್ಭುತವಾಗಿದೆ. ನಟರುಗಳ ಎಂಟ್ರಿ, ಆಕ್ಷನ್ ಎಪಿಸೋಡ್, ಕೆಲವು ಎಮೋಷನ್​ಗಳು ಮತ್ತು ಟ್ವಿಸ್ಟ್​ಗಳು ಸೂಪರ್ ಆಗಿವೆ. ಕ್ಲೈಮ್ಯಾಕ್ಸ್​ ಅತ್ಯದ್ಭುತವಾಗಿದೆ. ಸಾಧಾರಣಕ್ಕಿಂತಲೂ ತುಸು ಚೆನ್ನಾಗಿದೆ. ಬಾಲಿವುಡ್ ಸಿನಿಮಾಗಳು ಹೀಗೆಯೇ ಇರುತ್ತಾವೆ ಬಿಡು ಎಂದುಕೊಂಡರೆ ಸಿನಿಮಾ ಪಕ್ಕಾ ಹಿಟ್ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಿದ್ದಾನೆ ಅವಿನಾಶ್ ಚೌಧರಿ ಹೆಸರಿನ ಜೂ ಎನ್​ಟಿಆರ್ ಅಭಿಮಾನಿ.

ದಿ ವೀವ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಮಾಡಲಾಗಿರುವ ಟ್ವೀಟ್ ಹೀಗಿದೆ, ‘ವಾರ್ 2’ ಓಕೆ-ಓಕೆ ಮಾದರಿಯ ಸಿನಿಮಾ. ಅದ್ಭುತ ಅಲ್ಲ, ಹಾಗೆಂದು ಕೆಟ್ಟ ಸಿನಿಮಾ ಅಲ್ಲ. ಮಧ್ಯಮವಾದ ಸಿನಿಮಾ. ಜೂ ಎನ್​ಟಿಆರ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡು ಸಿನಿಮಾಕ್ಕೆ ಬರುವುದು ಒಳ್ಳೆಯದಲ್ಲ. ಜೂ ಎನ್​ಟಿಆರ್ ಅವರಿಗೆ ಕೆಲವು ಅದ್ಭುತವಾದ ಸೀನ್​ಗಳಿವೆ. ಆದರೆ ಕೆಲವು ಬೇಸರ ತರಿಸುವ ಸೀನ್​ಗಳು ಸಹ ಇವೆ. ಆದರೆ ಒಳ್ಳೆಯ ಕ್ಲೈಮ್ಯಾಕ್ಸ್ ಇರುವ ಕಾರಣಕ್ಕೆ ಎಲ್ಲವೂ ಸರಿತೂಗಿಸಿಕೊಂಡುಬಿಡುತ್ತದೆ’ ಎಂದಿದೆ.

ಶ್ರೀಹರ್ಷತ್ ಎಂಬುವರು ಟ್ವೀಟ್ ಮಾಡಿ, ‘ಆಕ್ಷನ್, ಡ್ಯಾನ್ಸ್ ಎಲ್ಲ ವಿಷಯಗಳಲ್ಲಿಯೂ ಜೂ ಎನ್​ಟಿಆರ್ ಬಾಡಿ ಲಾಂಗ್ವೇಜ್ ಅದ್ಭುತವಾಗಿದೆ. ಬಹಳ ಕಾನ್ಫಿಡೆಂಟ್ ಆಗಿ ಅವರು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಹೃತಿಕ್ ಮತ್ತು ಜೂ ಎನ್​ಟಿಆರ್ ಎದುರಾಗುವ ಸೀನ್​ಗಳು ಅದ್ಭುತವಾಗಿವೆ. ಸಿನಿಮಾದ ಮೊದಲಾರ್ಧ ಆಕ್ಷನ್, ಟ್ವಿಸ್ಟ್​, ಒಳ್ಳೆಯ ಲೋಕೇಶನ್, ಹಾಡುಗಳಿಂದ ತುಂಬಿದೆ. ಆದರೆ ದ್ವಿತೀಯಾರ್ಧ ತುಸು ಸ್ಲೋ ಇದೆ. ಆದರೆ ಕ್ಲೈಮ್ಯಾಕ್ಸ್ ಚೆನ್ನಾಗಿದೆ. ಕಿಯಾರಾ ಸ್ಟೈಲ್ ಮತ್ತು ಗ್ಲಾಮರ್ ಅನ್ನು ಚಿತ್ರಕ್ಕೆ ಸೇರಿಸಿದ್ದಾರೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ