AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಿಗೂ ಕಥೆ ಹೇಳಬೇಡಿ: ‘ವಾರ್ 2’ ಬಿಡುಗಡೆಗೂ ಮುನ್ನ ತಾರಕ್, ಹೃತಿಕ್ ಮನವಿ

ಬಹುನಿರೀಕ್ಷಿತ ‘ವಾರ್ 2’ ಸಿನಿಮಾ ಆಗಸ್ಟ್ 14ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ಮತ್ತು ಹೃತಿಕ್ ರೋಷನ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್​ಗಳು ಇವೆ ಎಂದು ಚಿತ್ರತಂಡ ಹೇಳಿದೆ. ಅವುಗಳನ್ನು ಬಹಿರಂಗ ಮಾಡದಂತೆ ಮನವಿ ಮಾಡಲಾಗಿದೆ.

ಯಾರಿಗೂ ಕಥೆ ಹೇಳಬೇಡಿ: ‘ವಾರ್ 2’ ಬಿಡುಗಡೆಗೂ ಮುನ್ನ ತಾರಕ್, ಹೃತಿಕ್ ಮನವಿ
Jr Ntr, Hrithik Roshan
ಮದನ್​ ಕುಮಾರ್​
|

Updated on: Aug 13, 2025 | 6:13 PM

Share

ಟಾಲಿವುಡ್ ಮತ್ತು ಬಾಲಿವುಡ್ ಸಿನಿಪ್ರಿಯರು ‘ವಾರ್ 2’ (War 2) ಸಿನಿಮಾವನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರದ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಅದ್ದೂರಿಯಾಗಿ ಸಿನಿಮಾವನ್ನು ಸ್ವಾಗತಿಸಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಜೂನಿಯರ್ ಎನ್​ಟಿಆರ್ ಮತ್ತು ಹೃತಿಕ್ ರೋಷನ್ (Hrithik Roshan) ಅವರು ಈ ಸಿನಿಮಾದಲ್ಲಿ ತೆರೆಹಂಚಿಕೊಂಡಿರುವುದರಿಂದ ನಿರೀಕ್ಷೆ ಜೋರಾಗಿದೆ. ಆಗಸ್ಟ್ 14ರಂದು ‘ವಾರ್ 2’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಬಿಡುಗಡೆಗೂ ಮುನ್ನ ಅಭಿಮಾನಿಗಳಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್​ಟಿಆರ್ (Jr NTR) ಅವರು ಒಂದು ಮನವಿ ಮಾಡಿಕೊಂಡಿದ್ದಾರೆ.

‘ವಾರ್ 2’ ಸಿನಿಮಾದ ಕಥೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆ ವಿಚಾರದಲ್ಲಿ ಸಖತ್ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದೆ. ಈ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್​ಗಳು ಇವೆ ಎನ್ನಲಾಗಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ಅದನ್ನೆಲ್ಲ ಬಹಿರಂಗ ಮಾಡಿಬಿಟ್ಟರೆ, ನಂತರದಲ್ಲಿ ಸಿನಿಮಾ ನೋಡುವವರಿಗೆ ಸಸ್ಪೆನ್ಸ್ ಉಳಿಯುವುದಿಲ್ಲ. ಹಾಗಾಗಿ ಜೂನಿಯರ್ ಎನ್​ಟಿಆರ್ ಮತ್ತು ಹೃತಿಕ್ ರೋಷನ್ ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

‘ಸಾಕಷ್ಟು ಸಮಯ ತೆಗೆದುಕೊಂಡು, ತುಂಬಾ ಪ್ರೀತಿಯಿಂದ ವಾರ್ 2 ಸಿನಿಮಾವನ್ನು ಮಾಡಿದ್ದೇವೆ. ನಿಮ್ಮ ಕಣ್ಣೆದುರಿನಲ್ಲಿ ಹಲವು ಟ್ವಿಸ್ಟ್​ಗಳು ಬರುವುದರಿಂದ ಚಿತ್ರಮಂದಿರದಲ್ಲಿ ದೃಶ್ಯವೈಭವದ ಅನುಭವ ಆಗಲಿದೆ. ಮಾಧ್ಯಮದವರು, ಪ್ರೇಕ್ಷಕರು ಮತ್ತು ಅಭಿಮಾನಿಗಳು ಯಾವುದೇ ಕಾರಣಕ್ಕೂ ಕಥೆಯನ್ನು ಬಹಿರಂಗಪಡಿಸಬೇಡಿ ಎಂದು ವಿನಂತಿಸಿಕೊಳ್ಳುತ್ತೇನೆ’ ಎಂದಿದ್ದಾರೆ ಹೃತಿಕ್ ರೋಷನ್.

ಇದನ್ನೂ ಓದಿ
Image
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
Image
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
Image
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
Image
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

‘ನೀವು ಮೊದಲ ಬಾರಿ ವಾರ್ 2 ನೋಡಿದಾಗ ಸಿಕ್ಕ ಮನರಂಜನೆಯೇ ನಂತರದಲ್ಲಿ ನೋಡುವವರಿಗೂ ಸಿಗಬೇಕು. ಕಥೆ ಬಹಿರಂಗ ಮಾಡುವುದು ಸರಿಯಲ್ಲ. ಆದ್ದರಿಂದ ಸಿನಿಮಾ ನೋಡುವ ಅನುಭವದ ಮೇಲೆ ಪರಿಣಾಮ ಬೀರುತ್ತದೆ. ವಾರ್ 2 ಸಿನಿಮಾದ ರಹಸ್ಯ ಹಾಗೆಯೇ ಇರಲಿ. ನಮಗೆ ಪ್ರೀತಿ ತೋರಿಸಿ. ನಿಮ್ಮನ್ನು ನಾವು ನಂಬಿದ್ದೇವೆ’ ಎಂದು ಜೂನಿಯರ್ ಎನ್​ಟಿಆರ್ ಹೇಳಿದ್ದಾರೆ.

ಇದನ್ನೂ ಓದಿ: ಮೊದಲ ದಿನ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ‘ವಾರ್ 2’ ಸಿನಿಮಾ?

‘ವಾರ್ 2’ ಚಿತ್ರಕ್ಕೆ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಬಂಡವಾಳ ಹೂಡಿದೆ. 400 ಕೋಟಿ ರೂಪಾಯಿಗೂ ಅಧಿಕ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡಿದ್ದಾರೆ. ಬಾಬಿ ಡಿಯೋಲ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ವಾರ್ 2’ ಚಿತ್ರಕ್ಕೆ ‘ಕೂಲಿ’ ಸಿನಿಮಾ ಸಖತ್ ಪೈಪೋಟಿ ನೀಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.