ಅನುರಾಗ್ ಕಶ್ಯಪ್ (Anurag Kashyap) ಅವರು ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಲವು ಚಿತ್ರಗಳನ್ನು ನಿರ್ದೇಶಿಸಿ ಅವರು ಹೆಸರು ಮಾಡಿದ್ದಾರೆ. ಅವರ ನಿರ್ದೇಶನದ ‘ದೊಬಾರಾ’ ಸಿನಿಮಾ ಆಗಸ್ಟ್ 19ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ತಾಪ್ಸಿ ಪನ್ನು (Taapsee Pannu) ಅವರು ನಾಯಕಿ . ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅನುರಾಗ್ ಹಾಗೂ ತಾಪ್ಸಿ ಬ್ಯುಸಿ ಆಗಿದ್ದಾರೆ. ಈ ವೇಳೆ ಅನುರಾಗ್ ಹೇಳಿದ ಒಂದು ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಿದೆ.
2018ರಲ್ಲಿ ತೆರೆಗೆ ಬಂದ ಸ್ಪ್ಯಾನಿಶ್ ಭಾಷೆಯಲ್ಲಿ ರಿಲೀಸ್ ಆದ ‘ಮೈರೇಜ್’ ಚಿತ್ರದ ರಿಮೇಕ್ ‘ದೊಬಾರಾ’. ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜತೆಗೆ ಅನುರಾಗ್ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಅವರು ಸಿನಿಮಾ ಪ್ರಚಾರದಲ್ಲಿ ಭಾಗಿ ಆದ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ರಣವೀರ್ ಸಿಂಗ್ ಅವರ ನ್ಯೂಡ್ ಫೋಟೋಶೂಟ್ ಬಗ್ಗೆಯೂ ಅನುರಾಗ್ ಕಶ್ಯಪ್ ಕಮೆಂಟ್ ಮಾಡಿದ್ದಾರೆ.
‘ನಾನು ಕೂಡ ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿ ಮಾಡುವ ಫೋಟೋಶೂಟ್ ಮಾಡಬೇಕು ಎಂದುಕೊಂಡಿದ್ದೆ. ಆದರೆ, ನನಗೆ ದೊಡ್ಡ ಹೊಟ್ಟೆ ಇದೆ. ಹೀಗಾಗಿ ಅದು ಸಾಧ್ಯವಿಲ್ಲ’ ಎಂದಿದ್ದಾರೆ ಅನುರಾಗ್ ಕಶ್ಯಪ್. ಈ ವಿಚಾರ ಕೇಳಿ ಪಕ್ಕದಲ್ಲೇ ಕುಳಿತಿದ್ದ ತಾಪ್ಸಿ ಪನ್ನು ಅವರು ‘ಹಾರರ್ ಶೋ’ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಅನುರಾಗ್ ಫನ್ನಿ ಆಗಿ ಉತ್ತರಿಸಿದ್ದಾರೆ. ‘ತಾಪ್ಸಿಗೆ ಅಭದ್ರತೆ ಕಾಡುತ್ತಿದೆ. ಅವರಿಗಿಂತ ನನಗೆ ದೊಡ್ಡ ಸ್ತನ ಇದೆ ಎಂಬ ಕಾರಣಕ್ಕೆ ತಾಪ್ಸಿಗೆ ನನ್ನ ಬಗ್ಗೆ ಅಸೂಯೆ ಭಾವನೆ ಇದೆ’ ಎಂದು ನಕ್ಕಿದ್ದಾರೆ ಅನುರಾಗ್. ಈ ಜೋಕ್ಗೆ ತಾಪ್ಸಿ ಕೂಡ ನಕ್ಕಿದ್ದಾರೆ.
ಇದನ್ನೂ ಓದಿ: Taapsee Pannu: ಎಲ್ಲರ ಎದುರು ತಾಪ್ಸಿ ಪನ್ನು ಕಿರಿಕ್; ನಟಿಯ ಕೋಪಕ್ಕೆ ಕಾರಣವಾಯ್ತು ಫೋಟೋಗ್ರಾಫರ್ ವರ್ತನೆ
‘ರಣವೀರ್ ಸಿಂಗ್ ಅವರು ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದು ಮಾತ್ರವಲ್ಲ, ನನ್ನ ಆತ್ಮಸ್ಥೈರ್ಯವನ್ನು ಅವರು ಬ್ರೇಕ್ ಮಾಡಿದ್ದಾರೆ. ಅದನ್ನು ಮರಳಿ ಪಡೆಯುವುದು ಹೇಗೆ? ಈ ಫೋಟೋ ನೋಡಿ ದೇಶದ ಪ್ರತಿಯೊಬ್ಬ ಪುರುಷನೂ ಫ್ರಸ್ಟ್ರೇಟ್ ಆಗಿದ್ದಾರೆ. ಈ ಕಾರಣಕ್ಕೆ ರಣವೀರ್ ಸಿಂಗ್ ಮೇಲೆ ದಾಳಿ ಮಾಡುತ್ತಿದ್ದಾರೆ’ ಎಂದಿದ್ದಾರೆ ಅನುರಾಗ್.
Published On - 5:29 pm, Tue, 16 August 22