Ileana D’cruz: ತಾಯಿ ಆಗುತ್ತಿರುವ ನಟಿ ಇಲಿಯಾನಾ ಡಿಕ್ರೂಸ್​​ಗೆ ಖುಷಿಯೋ ಖುಷಿ; ತಂದೆ ಯಾರೆಂಬ ಸುಳಿವು ಇನ್ನೂ ಸಿಕ್ಕಿಲ್ಲ

|

Updated on: May 26, 2023 | 1:34 PM

Ileana D'cruz Viral Photo: ಇಲಿಯಾನಾ ಡಿಕ್ರೂಸ್ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಮದುವೆ ಆಗಿಲ್ಲ. ಮಗುವಿನ ತಂದೆ ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

Ileana Dcruz: ತಾಯಿ ಆಗುತ್ತಿರುವ ನಟಿ ಇಲಿಯಾನಾ ಡಿಕ್ರೂಸ್​​ಗೆ ಖುಷಿಯೋ ಖುಷಿ; ತಂದೆ ಯಾರೆಂಬ ಸುಳಿವು ಇನ್ನೂ ಸಿಕ್ಕಿಲ್ಲ
ಇಲಿಯಾನಾ ಡಿಕ್ರೂಜ್​
Follow us on

ನಟಿ ಇಲಿಯಾನಾ ಡಿಕ್ರೂಸ್ (Ileana D’cruz) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಮದುವೆ ಆಗಿಲ್ಲ. ತಾವು ಪ್ರೆಗ್ನೆಂಟ್​​ (Pregnant) ಎಂಬ ವಿಚಾರವನ್ನು ಅವರು ಕೆಲವು ದಿನಗಳ ಹಿಂದೆ ತಿಳಿಸಿದರು. ಆದರೆ ಆ ಮಗುವಿನ ತಂದೆ ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಈಗ ಅವರು ಬೇಬಿ ಬಂಪ್ (baby bump)​ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಾಯಿ ಆಗುತ್ತಿರುವ ಅವರು ಬಹಳ ಖುಷಿಯಲ್ಲಿದ್ದಾರೆ. ಅದಕ್ಕೆ ಅವರು ಹಂಚಿಕೊಳ್ಳುತ್ತಿರುವ ಫೋಟೋಗಳೇ ಸಾಕ್ಷಿ. ಮದುವೆ ಆಗದೇ ಮಗು ಪಡೆಯುತ್ತಿರುವ ಇಲಿಯಾನಾ ಡಿಕ್ರೂಸ್​ ಅವರ ನಿರ್ಧಾರಕ್ಕೆ ಅವರ ಕುಟುಂಬದವರ ಒಪ್ಪಿಗೆ ಕೂಡ ಇದೆ. ಈಗ ಇಲಿಯಾನಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹೊಸ ಫೋಟೋಸ್​ ಶೇರ್​ ಮಾಡಿಕೊಂಡಿದ್ದಾರೆ. ಅವರ ಫ್ಯಾನ್ಸ್​ ಪೇಜ್​ಗಳಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಬಹುಭಾಷೆಯಲ್ಲಿ ನಟಿಸಿರುವ ಇಲಿಯಾನಾ ಡಿಕ್ರೂಸ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಸದ್ಯ ಅವರು ಪ್ರೆಗ್ನೆನ್ಸಿ ಸಲುವಾಗಿ ನಟನೆಯಿಂದ ಬ್ರೇಕ್​ ಪಡೆದುಕೊಂಡಿದ್ದಾರೆ.

ಈ ಮೊದಲು ಕೂಡ ಇಲಿಯಾನಾ ಡಿಕ್ರೂಸ್​ ಅವರು ಒಂದು ಫೋಟೋ ಹಂಚಿಕೊಂಡಿದ್ದರು. ‘ಬಂಪ್​ ಅಲರ್ಟ್​’ ಎಂದು ಅವರು ಅದಕ್ಕೆ ಕ್ಯಾಪ್ಷನ್​ ನೀಡಿದ್ದರು. ಅದನ್ನು ನೋಡಿ ಸಾವಿರಾರು ಜನರು ಕಮೆಂಟ್​ ಮಾಡಿದ್ದರು. ‘ಎಲ್ಲಿಯತನಕ ಈ ವಿಚಾರ ಮುಚ್ಚಿಡುತ್ತೀರಿ ಇಲಿಯಾನಾ? ಈಗ ನೀವು ಆ ವ್ಯಕ್ತಿಯ ಹೆಸರು ಬಹಿರಂಗಪಡಿಸಲು ಸೂಕ್ತ ಸಮಯ ಬಂದಿದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದರು. ಎಷ್ಟೇ ಟ್ರೋಲ್ ಆದರೂ ಕೂಡ ಇಲಿಯಾನಾ ಅವರು ತಮ್ಮ ಪಾರ್ಟ್ನರ್​ ಹೆಸರು ಬಹಿರಂಗಪಡಿಸಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಕುತೂಹಲ ಮುಂದುವರಿದಿದೆ.

ಬಿಕಿನಿಯಲ್ಲಿ ಮಿಂಚಿದ ಇಲಿಯಾನಾ ಡಿಕ್ರೂಜ್

ಇಲಿಯಾನಾ ಡಿಕ್ರೂಸ್​​ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೋಗ್ರಾಫರ್​ ಆ್ಯಂಡ್ರ್ಯೂ ನೀಬೋನ್​ ಜೊತೆ ಡೇಟಿಂಗ್​ ನಡೆಸುತ್ತಿದ್ದರು. ಇಬ್ಬರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್​ ಮಾಡಿಕೊಂಡಿತು ಎಂದು ವರದಿ ಆಯಿತು. ಇತ್ತೀಚೆಗೆ ಇಲಿಯಾನಾ ಡಿಕ್ರೂಸ್​​ ಅವರು ನಟಿ ಕತ್ರಿನಾ ಕೈಫ್​ ಸಹೋದರ ಸೆಬ್ಬಾಸ್ಟಿಯನ್​ ಲೊರಾನ್​ ಮಿಶಾಲ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು.

ನಟಿ ಇಲಿಯಾನ‌ ಪತಿ ಆ್ಯಂಡ್ಯೂ ನೀಬೋನ್ ಬ್ರೇಕಪ್ ಆಗಿದ್ಯಾಕೆ?

2006ರಿಂದಲೂ ಇಲಿಯಾನಾ ಡಿಕ್ರೂಸ್​​ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸೂಪರ್​ ಹಿಟ್​ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಏಪ್ರಿಲ್​ 24ರಂದು ಅವರ ಹೊಸ ಸಾಂಗ್​ ಬಿಡುಗಡೆ ಆಗಿದೆ. ಇಲಿಯಾನಾ ಡಿಕ್ರೂಜ್​ ಅವರು ಏಪ್ರಿಲ್​ 14ರಂದು ತಾವು ಪ್ರೆಗ್ನೆಂಟ್​ ಎಂಬ ವಿಷಯ ಬಹಿರಂಗಪಡಿಸಿದ್ದರು. ‘ಕಮಿಂಗ್​ ಸೂನ್​.. ನಿನ್ನನ್ನು ನೋಡಲು ಕಾದಿದ್ದೇನೆ ಲಿಟ್ಲ್​ ಡಾರ್ಲಿಂಗ್​’ ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು. ಅದರ ಜೊತೆ ಮಗುವಿನ ಬಟ್ಟೆ ಮತ್ತು ಅಮ್ಮ ಎಂಬ ಡಾಲರ್​ ಇರುವ ಸರದ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಇದಕ್ಕೆ ಇಲಿಯಾನಾ ಅವರ ತಾಯಿ ಸಮೀರಾ ಡಿಕ್ರೂಸ್​​ ಕೂಡ ಕಮೆಂಟ್​ ಮಾಡಿದ್ದರು. ‘ನನ್ನ ಮೊಮ್ಮಗುವಿಗೆ ಶೀಘ್ರದಲ್ಲೇ ಈ ಪ್ರಪಂಚಕ್ಕೆ ಸ್ವಾಗತ ಕೋರುವೆ’ ಎಂದು ಅವರು ಬರೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.