‘ಧುರಂಧರ್ 2‘, ‘ಕೆಜಿಎಫ್ 2’ ಚಿತ್ರ ಟೀಕಿಸಿದ ಬಾಲಿವುಡ್ ನಟ

ಬಾಲಿವುಡ್ ನಟ ಇಮ್ರಾನ್ ಖಾನ್, 'KGF 2', 'ಅನಿಮಲ್' ಹಾಗೂ 'ಧುರಂಧರ್ 2' ನಂತಹ ಚಿತ್ರಗಳಲ್ಲಿನ 'ಮ್ಯಾಚೋ' ಪಾತ್ರಗಳನ್ನು ಟೀಕಿಸಿದ್ದಾರೆ. ಉದ್ದ ಕೂದಲು, ರಕ್ತಸಿಕ್ತ ಮುಖದ ಪಾತ್ರಗಳು ನನಗೆ ಇಷ್ಟವಿಲ್ಲ ಎಂದ ಇಮ್ರಾನ್, ವಿಷಕಾರಿ ಪುರುಷತ್ವ ಮತ್ತು ಸ್ತ್ರೀದ್ವೇಷದ ಪ್ರಚಾರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

‘ಧುರಂಧರ್ 2‘, ‘ಕೆಜಿಎಫ್ 2’ ಚಿತ್ರ ಟೀಕಿಸಿದ ಬಾಲಿವುಡ್ ನಟ
ಯಶ್​, ರಣಬೀರ್, ರಣವೀರ್

Updated on: Mar 26, 2026 | 9:00 AM

ಯಾವುದೇ ಸಿನಿಮಾ ರಿಲೀಸ್ ಆದರೂ ಪರ ವಿರೋಧ ಚರ್ಚೆ ಇದ್ದೇ ಇರುತ್ತದೆ. ಅದೇ ರೀತಿ ‘ಅನಿಮಲ್’, ‘ಕೆಜಿಎಫ್’ ಹಾಗೂ ‘ಧುರಂಧರ್ 2’ (Dhurandhar 2) ರೀತಿಯ ಚಿತ್ರಗಳನ್ನು ಟೀಕೆ ಮಾಡಿದವರು ಅನೇಕರಿದ್ದಾರೆ. ಈಗ ಬಾಲಿವುಡ್ ನಟ ಇಮ್ರಾನ್ ಖಾನ್ ಕೂಡ ಈ ಸಾಲಿಗೆ ಸೇರಿದ್ದಾರೆ. ‘ಉದ್ದ ಕೂದಲು ಬಿಟ್ಟುಕೊಂಡು, ಕೋಪ ಮಾಡಿಕೊಂಡು, ಮುಖವೆಲ್ಲ ರಕ್ತ ಮಾಡಿಕೊಳ್ಳುವ ಪಾತ್ರ ನನಗೆ ಇಷ್ಟ ಇಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ. ಅಲ್ಲದೆ, ಅವರು ಈ ರೀತಿಯ ಪಾತ್ರಗಳನ್ನು ವೈಭವೀಕರಿಸುತ್ತಿರುವ ವಿಷಯದ ಬಗ್ಗೆ ಆತಂಕ ಹೊರಹಾಕಿದ್ದಾರೆ.

ಇಮ್ರಾನ್ ಖಾನ್ ಅವರು ‘ಆಸ್ಕ್​ ಮಿ ಎನಿಥಿಂಗ್’ ಸೆಷನ್ ನಡೆಸಿದ್ದಾರೆ. ಈ ವೇಳೆ ಅವರಿಗೆ ‘ಮ್ಯಾಚೋ   ಪಾತ್ರಗಳನ್ನು ಮಾಡಬೇಡಿ’ ಎಂದು ಕೋರಿದರು. ಇದಕ್ಕೆ ಉತ್ತರಿಸಿದ ಇಮ್ರಾನ್ ಖಾನ್, ‘ಉದ್ದ ಕೂದಲು ಬಿಟ್ಟುಕೊಂಡು, ಸಿಟ್ಟಾಗಿ ಕಾಣಿಸಿಕೊಳ್ಳುವುದು, ದೇಹವೆಲ್ಲ ರಕ್ತ ಮಾಡಿಕೊಳ್ಳುವ ಪಾತ್ರದ ಬಗ್ಗೆ ಆಸಕ್ತಿ ಇಲ್ಲ’ ಎಂದು ಅವರು ಹೇಳಿದ್ದಾರೆ.

ಆಲ್ಫಾ ಮೇಲ್ ಅಂದರೆ ಪುರುಷರೇ ಗ್ರೇಟ್ ಎಂಬ ರೀತಿಯ ಸಿನಿಮಾಗಳು ಕೆಲವು ಬರುತ್ತಿವೆ. ಈ ಸಂದರ್ಭದಲ್ಲಿ ಪುರುಷತ್ವವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಎಂದು ಅವರಿಗೆ ಕೇಳಲಾಯಿತು. ‘ನಮ್ಮ ಚಲನಚಿತ್ರಗಳಲ್ಲಿ ಮತ್ತು ಒಟ್ಟಾರೆಯಾಗಿ ಪ್ರಪಂಚದಲ್ಲಿ ಸ್ತ್ರೀದ್ವೇಷ ಮತ್ತು ವಿಷಕಾರಿ ಪುರುಷತ್ವವನ್ನು ಹೇಗೆ ಪ್ರಚಾರ ಮಾಡಲಾಗುತ್ತದೆ ಎಂಬುದನ್ನು ನೋಡಿ ನಾನು ವಿಚಲಿತನಾಗಿದ್ದೇನೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಧುರಂಧರ್ 2’ ಚಿತ್ರದಲ್ಲಿ ಹೇಳಿದ್ದು ತಪ್ಪೆನಿಸಿದರೆ, ಅದರ ವಿರುದ್ಧ ನೀವು ಸಿನಿಮಾ ಮಾಡಿ’; ಆರ್​​ಜಿವಿ

ಅನೇಕರು ಇಮ್ರಾನ್ ಹೇಳಿಕೆಯನ್ನು ನಾನಾ ಸಿನಿಮಾಗಳಿಗೆ ಕನೆಕ್ಟ್ ಮಾಡುತ್ತಿದ್ದಾರೆ. ಕೆಲವರು ‘ಕೆಜಿಎಫ್ 2’ ಎಂದು ಹೇಳಿದ್ದಾರೆ. ಇದರಲ್ಲಿ ಯಶ್ ಉದ್ದ ಕೂದಲು ಬಿಟ್ಟಿದ್ದಾರೆ. ಅವರ ಮುಖ ರಕ್ತಸಿಕ್ತವಾಗಿದೆ. ‘ಅನಿಮಲ್’, ‘ಧುರಂಧರ್, ‘ಧುರಂಧರ್ 2’ ಸಿನಿಮಾಗಳು ಕೂಡ ಇದೇ ರೀತಿಯಲ್ಲಿ ಇವೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಷಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us