ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸದ್ಯ ‘ರಾಮ್ ಸೇತು’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಚಿತ್ರ ಈಗಾಗಲೇ ಪೋಸ್ಟರ್ ಮೂಲಕ ಗಮನ ಸೆಳೆದಿದೆ. ಚಿತ್ರತಂಡ ಈಗಾಗಲೇ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದು, ಮುಂದಿನ ಹಂತದ ಚಿತ್ರಗಳನ್ನು ದಾಮನ್ನಲ್ಲಿ ಚಿತ್ರೀಕರಿಸಲು ಮುಂದಾಗಿದೆ. ಈ ಮೊದಲು ಶ್ರೀಲಂಕಾದಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದ್ದ ಚಿತ್ರತಂಡಕ್ಕೆ, ಅನುಮತಿಯ ಸಮಸ್ಯೆಗಳು ಎದುರಾದ ನಂತರ ನಿರ್ಧಾರ ಬದಲಿಸಲಾಗಿದೆ. ಇಂದು (ಮಂಗಳವಾರ) ಜಾಕ್ವೆಲಿನ್ ಹಾಗೂ ಅಕ್ಷಯ್ ಕುಮಾರ್ ಚಿತ್ರೀಕರಣಕ್ಕೆಂದು ತೆರಳಿದ್ದಾರೆ. ಈ ಸಂದರ್ಭದಲ್ಲಿ ವಿಮಾನದಲ್ಲಿ ಕುಳಿತ ಅಕ್ಷಯ್ ಕುಮಾರ್, ಜಾಕ್ವೆಲಿನ್ ಅವರ ಮಜವಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ‘ಆಗಸದಲ್ಲಿ ತೇಲುತ್ತಿರುವಾಗ ಹೇಗೆ ಕೂದಲನ್ನು ವಿನ್ಯಾಸ ಮಾಡಬೇಕು ಎಂಬ ಗೊಂದಲವಿದೆಯೇ? ಜಾಕ್ವೆಲಿನ್ ಜುಗಾಡು ಅವರನ್ನು ನೋಡಿ, ಕಲಿಯಿರಿ’ ಎಂದು ತಮಾಷೆಯಾಗಿ ಬರೆದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಸದ್ಯ ಅಕ್ಷಯ್ ಕುಮಾರ್ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಖತರ್ನಾಕ್ ಐಡಿಯಾಕ್ಕೆ ನೆಟ್ಟಿಗರು ಮನದುಂಬಿ ನಕ್ಕಿದ್ದಾರೆ. ಈ ಕುರಿತು ಜಾಕ್ವೆಲಿನ್ ತಮ್ಮ ಸ್ಟೋರಿಯಲ್ಲಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಅಕ್ಷಯ್, ‘‘ನಾವು ಏನನ್ನು ಚಿತ್ರೀಕರಿಸಲಿದ್ದೇವೆ’’ ಎಂದು ಕೇಳಿದ್ದಾರೆ. ಇವುಗಳನ್ನು ನೋಡಿರುವ ಅಭಿಮಾನಿಗಳು, ಸಖತ್ ಎಂಜಾಯ್ ಮಾಡಿದ್ದು, ಸ್ಟಾರ್ ಕಲಾವಿದರ ತರಲೆಗೆ ಮಾರುಹೋಗಿದ್ದಾರೆ.
ಅಕ್ಷಯ್ ಕುಮಾರ್ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:
‘ರಾಮ್ ಸೇತು’ ಚಿತ್ರದ ಕೆಲವು ಭಾಗಗಳನ್ನು ಈ ಹಿಂದೆ ಊಟಿಯಲ್ಲಿ ಚಿತ್ರೀಕರಿಸಲಾಗಿತ್ತು. ಅಭಿಷೇಕ್ ಶರ್ಮಾ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಅರುಣ್ ಭಾಟಿಯಾ ಹಾಗೂ ವಿಕ್ರಮ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. 2022ರ ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಚಿತ್ರದಲ್ಲಿ ಅಕ್ಷಯ್ ಹಾಗೂ ಜಾಕ್ವೆಲಿನ್ ಅವರೊಂದಿಗೆ ನುಸ್ರತ್ ಭರೂಚಾ ಕಾಣಿಸಿಕೊಳ್ಳಲಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ ಈ ಚಿತ್ರ ₹ 200 ಕೋಟಿ ಕ್ಲಬ್ ಸೇರಿದೆ. ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಒಟ್ಟಾರೆ ಉತ್ತಮ ಗಳಿಕೆ ಮಾಡಲಾಗಿದೆ. ಅಲ್ಲದೇ, ಒಟಿಟಿಗೂ ಭರ್ಜರಿ ಮೊತ್ತಕ್ಕೆ ಚಿತ್ರ ಸೇಲ್ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:
ಸೌಂದರ್ಯ ಮತ್ತು ದೇಹಸಿರಿಯ ಅಪರೂಪದ ಮಿಶ್ರಣ ಜಾಕ್ವೆಲಿನ್ ಫರ್ನಾಂಡಿಸ್ಗೆ ರೋಮಾನ್ಸ್ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲ!
ರಸ್ತೆ ಅಪಘಾತದಲ್ಲಿ ಸುಶಾಂತ್ ಕುಟುಂಬದ 6 ಮಂದಿ ನಿಧನ; ಇನ್ನೂ 4 ಜನರ ಸ್ಥಿತಿ ಗಂಭೀರ