Janhvi Kapoor: ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡ ಜಾನ್ವಿ ಕಪೂರ್? ಸ್ಟಾರ್ ಕಿಡ್​ಗೆ ಜೊತೆಯಾದ ನಟಿ

|

Updated on: May 03, 2023 | 8:14 AM

ಜಾನ್ವಿ ಕಪೂರ್ ಸ್ಟಾರ್ ಕಿಡ್. ಆದರೆ, ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಈಗ ಜಾನ್ವಿ ಕಪೂರ್ ಅವರು ದಕ್ಷಿಣ ಭಾರತದಲ್ಲಿ ತಮ್ಮ ಅದೃಷ್ಟಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.

Janhvi Kapoor: ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡ ಜಾನ್ವಿ ಕಪೂರ್? ಸ್ಟಾರ್ ಕಿಡ್​ಗೆ ಜೊತೆಯಾದ ನಟಿ
ಜಾನ್ವಿ ಕಪೂರ್
Follow us on

ನಟಿ ಜಾನ್ವಿ ಕಪೂರ್​ಗೆ (Janhvi Kapoor) ಟಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಿದೆ. ಇತ್ತೀಚೆಗಷ್ಟೇ ಅವರು ಜೂನಿಯರ್ ಎನ್​ಟಿಆರ್ 30ನೇ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆದರು. ಈಗ ಅವರ ಪಾಲಿಗೆ ಮತ್ತೊಂದು ಸಿನಿಮಾ ಅವಕಾಶ ಒಲಿದಿದೆ ಎನ್ನಲಾಗುತ್ತಿದೆ. ಸ್ಟಾರ್ ಕಿಡ್ ಅಖಿಲ್ ಅಕ್ಕಿನೇನಿ (Akhil Akkineni) ಮುಂದಿನ ಚಿತ್ರದಲ್ಲಿ ಜಾನ್ವಿ ಕಪೂರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಜಾನ್ವಿಗೆ ತೆಲುಗಿನಿಂದ ಸಾಲು ಸಾಲು ಆಫರ್​ಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಅವರು ದಕ್ಷಿಣ ಭಾರತದಲ್ಲೇ ಬ್ಯುಸಿ ಆದರೂ ಅಚ್ಚರಿ ಏನಿಲ್ಲ.

ಜಾನ್ವಿ ಕಪೂರ್ ಸ್ಟಾರ್ ಕಿಡ್. ಆದರೆ, ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಈಗ ಜಾನ್ವಿ ಕಪೂರ್ ಅವರು ದಕ್ಷಿಣ ಭಾರತದಲ್ಲಿ ತಮ್ಮ ಅದೃಷ್ಟಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರ ಮಗ ಅಖಿಲ್ ಅಕ್ಕಿನೇನಿ​ ಮುಂದಿನ ಚಿತ್ರದಲ್ಲಿ ಜಾನ್ವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಅಖಿಲ್ ಅಕ್ಕಿನೇನಿ ನಟನೆಯ ‘ಏಜೆಂಟ್​’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಆದರೆ, ಸಿನಿಮಾ ಹೀನಾಯವಾಗಿ ಸೋತಿದೆ. ಇದನ್ನು ಸ್ವತಃ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ ಮತ್ತು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ಈ ಬೆನ್ನಲ್ಲೇ ಅಖಿಲ್ ಅವರು ಸೋಲು ಮರೆತು ಹೊಸ ಸಿನಿಮಾ ಕಡೆ ಗಮನ ಹರಿಸುತ್ತಿದ್ದಾರೆ.

ಅಖಿಲ್ ಅಕ್ಕಿನೇನಿ ಮುಂದಿನ ಚಿತ್ರಕ್ಕೆ ಯುವಿ ಕ್ರಿಯೇಷನ್ಸ್ ಬಂಡವಾಳ ಹೂಡುತ್ತಿದೆ. ಈ ಮೊದಲು ‘ಸಾಹೋ’ ಮೊದಲಾದ ಚಿತ್ರಗಳ ಡೈರೆಕ್ಷನ್ ಡಿಪಾರ್ಟ್​​ಮೆಂಟ್​ನಲ್ಲಿ ಕೆಲಸ ಮಾಡಿದ ಅನಿಲ್ ಕುಮಾರ್ ಅವರು ಹೊಸ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ ಆದರೆ ಉತ್ತಮ ಎನ್ನುವ ಆಲೋಚನೆ ನಿರ್ದೇಶಕರದ್ದು. ಈ ಕುರಿತು ಅವರು ಜಾನ್ವಿ ಕಪೂರ್ ಜೊತೆ ಒಂದು ಹಂತದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜಾನ್ವಿ ಕಪೂರ್​ ಫೋಟೋ ಕಂಡು ಕಣ್ಣರಳಿಸಿದ ಪಡ್ಡೆಗಳು; ಶ್ರೀದೇವಿ ಪುತ್ರಿಯ ಗ್ಲಾಮರಸ್​ ಗೆಟಪ್​

ಜಾನ್ವಿ ಕಪೂರ್ ಅವರು ‘ಧಡಕ್​’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಟಿ ಶ್ರೀದೇವಿ ಹಾಗೂ ಖ್ಯಾತ ನಿರ್ಮಾಪಕ ಬೋನಿ ಕಪೂರ್ ದಂಪತಿಯ ಮಗಳು ಎನ್ನುವ ಕಾರಣಕ್ಕೆ ಜಾನ್ವಿ ಕಪೂರ್​ಗೆ ಬಹುಬೇಗ ಅವಕಾಶ ಸಿಕ್ಕಿತು. ಆದರೆ, ಈವರೆಗೆ ಅವರಿಗೆ ಯಶಸ್ಸು ಸಿಕ್ಕಿಲ್ಲ. ಜೂನಿಯರ್ ಎನ್​ಟಿಆರ್​ 30ನೇ ಸಿನಿಮಾ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ