AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಬಗ್ಗೆ ಜಾವೇದ್ ಟ್ವೀಟ್: ಉದ್ದೇಶ ಒಳ್ಳೆಯದು ಆದರೆ ಮಾಹಿತಿ ತಪ್ಪು

ರಶ್ಮಿಕಾ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರಾದರೂ ಅವರ ದಕ್ಷಿಣ ಭಾರತದ ಆಕ್ಸೆಂಟ್ ಕಾರಣಕ್ಕೆ ಬಾಲಿವುಡ್​​ನಲ್ಲಿ ಟ್ರೋಲ್ ಆಗಿದ್ದಾರೆ. ಆಗುತ್ತಲೇ ಇರುತ್ತಾರೆ. ಈ ಬಗ್ಗೆ ಇತ್ತೇಚೆಗೆ ಕಾಫಿ ವಿತ್ ಕರಣ್​​ನಲ್ಲಿಯೂ ಅವರು ಮಾತನಾಡಿದ್ದರು. ಇದೀಗ ಬಾಲಿವುಡ್​​ನ ಹಿರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರು ರಶ್ಮಿಕಾರ ಬೆಂಬಲಕ್ಕೆ ನಿಂತಿದ್ದಾರೆ.

ರಶ್ಮಿಕಾ ಬಗ್ಗೆ ಜಾವೇದ್ ಟ್ವೀಟ್: ಉದ್ದೇಶ ಒಳ್ಳೆಯದು ಆದರೆ ಮಾಹಿತಿ ತಪ್ಪು
Rashmika Javed
ಮಂಜುನಾಥ ಸಿ.
|

Updated on: Oct 25, 2026 | 7:00 PM

Share

ಮುಖ್ಯಾಂಶಗಳು

  • ರಶ್ಮಿಕಾ ಮಂದಣ್ಣ ಬಗ್ಗೆ ಜಾವೇದ್ ಅಖ್ತರ್ ಟ್ವೀಟ್
  • ರಶ್ಮಿಕಾ ಬೆಂಬಲಿಸಿ ಟ್ವೀಟ್ ಮಾಡಿರುವ ಸಾಹಿತಿ
  • ರಶ್ಮಿಕಾ ಮೂಲದ ಬಗ್ಗೆ ತಪ್ಪು ಮಾಹಿತಿ

ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ದಕ್ಷಿಣದ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್​​ನಲ್ಲೂ ದೊಡ್ಡ ಯಶಸ್ಸನ್ನು ಅವರು ಗಳಿಸಿದ್ದಾರೆ. ಮಾತ್ರವಲ್ಲದೆ ಸ್ಟಾರ್ ನಟ, ನಿರ್ದೇಶಕರುಗಳೊಟ್ಟಿಗೆ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ರಶ್ಮಿಕಾ ಎಷ್ಟೇ ಯಶಸ್ಸು ಗಳಿಸಿದ್ದರೂ ಸಹ ಪದೇ ಪದೇ ಟ್ರೋಲಿಂಗ್​​ಗೆ ಗುರಿ ಆಗುತ್ತಲೇ ಇರುತ್ತಾರೆ. ಅದರಲ್ಲೂ ಅವರು ಮಾತನಾಡುವ ರೀತಿಯ ಕಾರಣಕ್ಕೆ ಟ್ರೋಲ್ ಆಗುವುದು ಹೆಚ್ಚು. ರಶ್ಮಿಕಾ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರಾದರೂ ಅವರ ದಕ್ಷಿಣ ಭಾರತದ ಆಕ್ಸೆಂಟ್ ಕಾರಣಕ್ಕೆ ಬಾಲಿವುಡ್​​ನಲ್ಲಿ ಟ್ರೋಲ್ ಆಗಿದ್ದಾರೆ. ಆಗುತ್ತಲೇ ಇರುತ್ತಾರೆ. ಈ ಬಗ್ಗೆ ಇತ್ತೇಚೆಗೆ ಕಾಫಿ ವಿತ್ ಕರಣ್​​ನಲ್ಲಿಯೂ ಅವರು ಮಾತನಾಡಿದ್ದರು. ಇದೀಗ ಬಾಲಿವುಡ್​​ನ ಹಿರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರು ರಶ್ಮಿಕಾರ ಬೆಂಬಲಕ್ಕೆ ನಿಂತಿದ್ದಾರೆ.

ರಶ್ಮಿಕಾ ಮಂದಣ್ಣ ಪರವಾಗಿ ಕಾಳಜಿಯಿಂದ ಜಾವೇದ್ ಅಖ್ತರ್ ಅವರು ಟ್ವೀಟ್ ಮಾಡಿದ್ದಾರೆ. ಅವರ ಉದ್ದೇಶ, ನೀಡಿರುವ ಹೇಳಿಕೆ ಎಲ್ಲವೂ ಸರಿ ಇದೆ ಆದರೆ ರಶ್ಮಿಕಾರ ಮೂಲದ ಬಗ್ಗೆ ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೇ ಕಾರಣವಾಗಿಟ್ಟುಕೊಂಡು ಈಗ ಮತ್ತಷ್ಟು ಟ್ರೋಲಿಂಗ್ ಆರಂಭವಾಗಿದೆ.

ರಶ್ಮಿಕಾ ಅವರು ತಮ್ಮ ಸೌಥ್ ಇಂಡಿಯನ್ ಆಕ್ಸೆಂಟ್ ಬಗ್ಗೆ ಬಾಲಿವುಡ್​​ನಲ್ಲಿ ಟ್ರೋಲ್ ಮಾಡುವ ಬಗ್ಗೆ ಕಾಫಿ ವಿತ್ ಕರಣ್​​ನಲ್ಲಿ ಮಾತನಾಡಿದ ಬೆನ್ನಲ್ಲೆ ಜಾವೇದ್ ಅಖ್ತರ್ ಅವರು ಆ ಬಗ್ಗೆ ಟ್ವೀಟ್ ಮಾಡಿದ್ದು, ‘ತಮಿಳು ನಟಿ ರಶ್ಮಿಕಾ ಅವರ ಉಚ್ಚಾರಣೆಯ ಬಗ್ಗೆ ಯಾರಿಗೆ ಸಮಸ್ಯೆ ಇದೆಯೋ, ಅವರಿಗೆ ಜಗತ್ತಿನ ಅತ್ಯಂತ ಹಳೆಯ ಆಡುಭಾಷೆಯಾದ ತಮಿಳಿನ ಕೆಲವು ಸಾಲುಗಳನ್ನು ಓದಲು ನೀಡೋಣ; ಆಗ ಅವರು ತಮಿಳನ್ನು ಎಷ್ಟು ಚೆನ್ನಾಗಿ ಉಚ್ಚರಿಸುತ್ತಾರೆ ಎಂದು ನೋಡೋಣ. ಇಂತಹ ಕಪಟ ಮತ್ತು ಆಧಾರರಹಿತ ಭಾಷಾ ಶ್ರೇಷ್ಠತೆಯ ಭಾವನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ ಜಾವೇದ್ ಅಖ್ತರ್.

ಇದನ್ನೂ ಓದಿ:ದಕ್ಷಿಣ ಭಾರತದ ಉಚ್ಚಾರಣೆ ಟೀಕೆಗಳಿಗೆ ನಟಿ ರಶ್ಮಿಕಾ ಮಂದಣ್ಣ ಖಡಕ್ ತಿರುಗೇಟು

ಜಾವೇದ್ ಅಖ್ತರ್ ಅವರು ರಶ್ಮಿಕಾರನ್ನು ಟ್ರೋಲ್ ಮಾಡುವುದನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ. ರಶ್ಮಿಕಾ ಅವರಿಗೆ ಬೆಂಬಲ ನೀಡಿದ್ದಾರೆ. ಆದರೆ ಅವರು ತಮ್ಮ ಟ್ವೀಟ್​​ನಲ್ಲಿ ರಶ್ಮಿಕಾ ಅವರನ್ನು ತಮಿಳು ನಟಿ ಎಂದು ಕರೆದಿದ್ದಾರೆ. ರಶ್ಮಿಕಾ ಅವರ ಮಾತೃಭಾಷೆ ತಮಿಳು ಎಂಬರ್ಥ ಬರುವಂತೆ ಟ್ವೀಟ್ ಮಾಡಿದ್ದಾರೆ. ಆದರೆ ರಶ್ಮಿಕಾರ ಮೂಲ ಕರ್ನಾಟಕ ಆಗಿದ್ದು ಅವರ ಮಾತೃಭಾಷೆ ಕೊಡವ ತಕ್ ಆಗಿದೆ. ಈ ಬಗ್ಗೆ ಹಲವು ಜಾವೇದ್ ಅವರ ಟ್ವೀಟ್​​ಗೆ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ.

ರಶ್ಮಿಕಾ ಅವರೇ ಕೆಲ ವರ್ಷಗಳ ಹಿಂದೆ ಖುದ್ದು ಹೇಳಿಕೊಂಡಿದ್ದಂತೆ, ಅವರಿಗೆ ಭಾಷೆಯ ಸಮಸ್ಯೆ ಇದೆ. ಯಾವ ಭಾಷೆಯೂ ಸಹ ಅವರಿಗೆ ಸರಿಯಾಗಿ ಬಾರದು. ಇಂಗ್ಲೀಷ್ ಹಾಗೂ ಮಾತೃಭಾಷೆ ಬಿಟ್ಟು ಕನ್ನಡವೂ ಸಹ ನನಗೆ ಸರಿಯಾಗಿ ಬರುವುದಿಲ್ಲ ಎಂದು ತೆಲುಗಿನ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಅವರ ಭಾಷೆಯ ಕಾರಣಕ್ಕೆ ಡೈಲಾಗ್​​ಗಳ ಉಚ್ಛಾರಣೆಯ ಕಾರಣಕ್ಕೆ ಹಲವಾರು ಬಾರಿ ಅವರು ಟೀಕೆಗೆ ಗುರಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ
ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ
'ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ'; ಖರ್ಗೆ
'ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ'; ಖರ್ಗೆ
ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ