ಶಾರುಖ್​ ಖಾನ್​ಗೆ ಮುತ್ತಿಗೆ ಹಾಕಿ ಕಿಸ್​ ಮಾಡಿದ ಮಹಿಳಾ ಅಭಿಮಾನಿಗಳ ವಿಡಿಯೋ ವೈರಲ್​; ಇದು ದೌರ್ಜನ್ಯ ಎಂದ ನೆಟ್ಟಿಗರು

ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋವನ್ನು ವೈರಲ್​ ಮಾಡಲಾಗುತ್ತಿದೆ. ಇದರಲ್ಲಿ ಶಾರುಖ್​ ಖಾನ್​ ಅವರನ್ನು ಮಹಿಳಾ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಅನುಮತಿಯೂ ಕೇಳದೇ ಅವರನ್ನು ತಬ್ಬಿಕೊಂಡಿದ್ದಾರೆ. ಅದೂ ಸಾಲದೆಂಬಂತೆ, ಕಿಸ್​ ಮಾಡಿದ್ದಾರೆ ಕೂಡ. ಅಭಿಮಾನಿಗಳ ಈ ವರ್ತನೆಗೆ ನೆಟ್ಟಿಗರಿಂದ ಖಂಡನೆ ವ್ಯಕ್ತವಾಗಿದೆ.

ಶಾರುಖ್​ ಖಾನ್​ಗೆ ಮುತ್ತಿಗೆ ಹಾಕಿ ಕಿಸ್​ ಮಾಡಿದ ಮಹಿಳಾ ಅಭಿಮಾನಿಗಳ ವಿಡಿಯೋ ವೈರಲ್​; ಇದು ದೌರ್ಜನ್ಯ ಎಂದ ನೆಟ್ಟಿಗರು
ಶಾರುಖ್​ ಖಾನ್​ ವೈರಲ್​ ವಿಡಿಯೋದಲ್ಲಿನ ದೃಶ್ಯ

Updated on: Sep 20, 2023 | 9:25 AM

ನಟ ಶಾರುಖ್ ಖಾನ್​ (Shah Rukh Khan) ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಎಲ್ಲೇ ಹೋದರೂ ಕೂಡ ಅವರನ್ನು ನೋಡಲು ಫ್ಯಾನ್ಸ್​ ಜಮಾಯಿಸುತ್ತಾರೆ. ಈಗಂತೂ ‘ಪಠಾಣ್​’, ‘ಜವಾನ್​’ ಸಿನಿಮಾಗಳ ಗೆಲುವಿನ ಬಳಿಕ ಅವರ ಚಾರ್ಮ್​ ಇನ್ನಷ್ಟು ಹೆಚ್ಚಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಶಾರುಖ್​ ಖಾನ್​ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶಾರುಖ್​ ಖಾನ್ ಅವರ ಒಂದು ಹಳೇ ವಿಡಿಯೋ (Shah Rukh Khan Viral Video) ವೈರಲ್​ ಆಗಿದೆ. ಇದರಲ್ಲಿ ಮಹಿಳಾ ಅಭಿಮಾನಿಗಳು (Shah Rukh Khan Fans) ಮುತ್ತಿಗೆ ಹಾಕಿಕೊಂಡು ಕಿಸ್​ ಮಾಡಿದ ದೃಶ್ಯ ಇದೆ. ಮಹಿಳೆಯರು ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಗರಂ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಇದು ದೌರ್ಜನ್ಯ ಎಂದು ಕೂಡ ಅನೇಕರು ಅಭಿಪ್ರಾಯ ತಿಳಿಸಿದ್ದಾರೆ.

ಶಾರುಖ್​ ಖಾನ್​ ಅವರು ತಾಳ್ಮೆ ಕಳೆದುಕೊಳ್ಳುವುದು ಅಪರೂಪ. ಅನೇಕ ಸಂದರ್ಭಗಳಲ್ಲಿ ಅವರು ಕೂಲ್ ಆಗಿಯೇ ನಡೆದುಕೊಳ್ಳುತ್ತಾರೆ. ಅಭಿಮಾನಿಗಳಿಂದ ಕಿರಿಕಿರಿ ಆದರೂ ಕೂಡ ಅವರು ಮಿತಿ ಮೀರಿ ವರ್ತಿಸುವುದಿಲ್ಲ. ಈ ಮಾತಿಗೆ ಸಾಕ್ಷಿ ಒದಗಿಸುತ್ತದೆ ಸದ್ಯ ವೈರಲ್​ ಆಗಿರುವ ಈ ವಿಡಿಯೋ. ಅಂದಹಾಗೆ, ಇದು ಹಳೇ ವಿಡಿಯೋ. ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಈಗ ವೈರಲ್​ ಮಾಡಲಾಗುತ್ತಿದೆ. ಇದರಲ್ಲಿ ಶಾರುಖ್​ ಖಾನ್​ ಅವರನ್ನು ಮಹಿಳಾ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಅನುಮತಿಯೂ ಕೇಳದೇ ಅವರನ್ನು ತಬ್ಬಿಕೊಂಡಿದ್ದಾರೆ. ಅದೂ ಸಾಲದೆಂಬಂತೆ, ಕಿಸ್​ ಮಾಡಿ ಖುಷಿಪಟ್ಟಿದ್ದಾರೆ. ಅಭಿಮಾನಿಗಳ ಈ ವರ್ತನೆಗೆ ನೆಟ್ಟಿಗರಿಂದ ಖಂಡನೆ ವ್ಯಕ್ತವಾಗಿದೆ.

ಶಾರುಖ್​ ಖಾನ್​ ವೈರಲ್​ ವಿಡಿಯೋ:

SRK molested by ladies
byu/DreamBeliveActAchive inBollyBlindsNGossip

‘ಬೇರೆ ಯಾವುದಾದರೂ ನಟಿಯ ಜೊತೆ ಪುರುಷ ಅಭಿಮಾನಿಗಳು ಈ ರೀತಿ ನಡೆದುಕೊಂಡಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ‘ಇದು ಮಹಿಳೆ ಅಥವಾ ಪುರುಷ ಎಂಬ ಪ್ರಶ್ನೆ ಅಲ್ಲ. ಎಲ್ಲರಿಗೂ ಅನ್ವಯ ಆಗುವಂಥದ್ದು. ಅನುಮತಿ ಎಲ್ಲದೇ ಯಾರನ್ನೂ ಮುಟ್ಟಬಾರದು, ಕಿಸ್​ ಮಾಡಬಾರದು’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ‘ತುಂಬ ಮುಜುಗರ ತರುವಂತಹ ದೃಶ್ಯ. ಈ ಅಭಿಮಾನಿಗಳಿಗೆ ಒಪ್ಪಿಗೆ ಎಂಬ ಪದವೇ ತಿಳಿದಿಲ್ಲವೇ’ ಎಂದು ಕೂಡ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಇಂಥ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದ ಶಾರುಖ್​ ಖಾನ್​ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ‘ಜವಾನ್​’ ಸಿನಿಮಾದಲ್ಲಿ ಶಾರುಖ್​ ಜೊತೆ ಆ್ಯಕ್ಷನ್​ ಮೆರೆದ ಪ್ರಿಯಾಮಣಿ

ಸದ್ಯ ಶಾರುಖ್​ ಖಾನ್​ ಅವರು ‘ಜವಾನ್​’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರಕ್ಕೆ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​ ಜೊತೆ ನಯನತಾರಾ, ವಿಜಯ್​ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ದೀಪಿಕಾ ಪಡುಕೋಣೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶ್ವಾದ್ಯಂತ 883 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ‘ಡಂಕಿ’ ಸಿನಿಮಾದ ಕೆಲಸಗಳಲ್ಲೂ ಶಾರುಖ್​ ಖಾನ್​ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:22 am, Wed, 20 September 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us