ಫಿಟ್ನೆಸ್ ಕಾಯ್ದುಕೊಳ್ಳಲು ಸೆಲೆಬ್ರಿಟಿಗಳು ನಾನಾ ಕಸರತ್ತು ಮಾಡಬೇಕಾಗುತ್ತದೆ, ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಜಾನ್ ಅಬ್ರಹಾಂ (Johan Abraham). ಅವರು ಕಳೆದ 25 ವರ್ಷಗಳಿಂದ ಸಿಹಿಯನ್ನೇ ತಿಂದಿಲ್ಲ. ಸಿಹಿ ದೇಹಕ್ಕೆ ಹಾಳು ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಫಿಟ್ನೆಸ್ ಕಾಯ್ದುಕೊಂಡು ಹೊಗುತ್ತೇನೆ ಎನ್ನುವವರು ಸಿಹಿಯಿಂದ ಆದಷ್ಟು ದೂರ ಇರಬೇಕು. ಅಚ್ಚರಿ ಎಂದರೆ ಜಾನ್ ಅಬ್ರಹಾಂ ಅವರು ಸಂಪೂರ್ಣವಾಗಿ ಸಿಹಿಯಿಂದ ದೂರ ಇದ್ದಾರೆ. ಈ ಬಗ್ಗೆ ಬ್ರಿಟನ್-ಪಾಕ್ ನಟ ಆ್ಯಲಿ ಖಾನ್ ಅಚ್ಚರಿ ಹೊಹಾಕಿದ್ದಾರೆ. ‘ಅವರು ಸನ್ಯಾಸಿ ರೀತಿ ಬದುಕುತ್ತಿದ್ದಾರೆ. ಇದು ಅನೇಕರಿಗೆ ಮಾದರಿ’ ಎಂದಿದ್ದಾರೆ ಅವರು.
ಜೋಯಾ ಅಖ್ತರ್ ನಿರ್ದೇಶನದ ‘ಲಕ್ ಬೈ ಚಾನ್ಸ್’ ಸಿನಿಮಾದಲ್ಲಿ ಆ್ಯಲಿ ಖಾನ್ ನಟಿಸಿದ್ದರು. ಈ ಚಿತ್ರದಲ್ಲಿ ಜಾನ್ ಅಬ್ರಹಾಂ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ‘ತೆಹ್ರಾನ್’ ಸಿನಿಮಾದಲ್ಲಿ ಜಾನ್ ಜೊತೆ ಕೆಲಸ ಮಾಡೋ ಅವಕಾಶ ಆ್ಯಲಿಗೆ ಸಿಕ್ಕಿದೆ. ಅವರು ಜಾನ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಪಾಕ್ ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಆ್ಯಲಿ ಮಾತನಾಡಿದ್ದಾರೆ. ‘ನಿಮ್ಮಲ್ಲಿ ಟ್ಯಾಲೆಂಟ್ ಇಲ್ಲ ಎಂದರೆ ಚಿತ್ರರಂಗದಲ್ಲಿ ಹೆಚ್ಚು ವರ್ಷ ಬದುಕೋಕೆ ಆಗಲ್ಲ. ಜಾನ್ ಅವರು ಈ ವಯಸ್ಸಲ್ಲೂ ಶರ್ಟ್ ತೆಗೆದು ಪೋಸ್ ಕೊಡುತ್ತಾರೆ ಎಂದರೆ ಅದಕ್ಕೆ ಕಾರಣ ಕಳೆದ 25 ವರ್ಷಗಳಲ್ಲಿ ಅವರು ಸಿಹಿಯನ್ನೇ ಟೇಸ್ಟ್ ಮಾಡಿಲ್ಲ’ ಎಂದಿದ್ದಾರೆ.
‘ಜಾನ್ಗೆ ಸಿಹಿ ತಿನ್ನೋ ಬಗ್ಗೆ ಪ್ರಶ್ನೆ ಮಾಡಿದೆ. ಅವರು 25 ವರ್ಷಗಳಿಂದ ಸಿಹಿಯನ್ನೇ ತಿಂದಿಲ್ಲ ಎಂದರು. ಮದ್ಯದ ರುಚಿ ನೋಡಿಲ್ಲ. ಅವರು ಸಿಗರೇಟ್ ಸೇದಲ್ಲ. ನೀವು ಪ್ರೋಟಿನ್ಗೆ ಚಿಕನ್ ತಿನ್ನುತ್ತೀರಾ ಎಂದು ಕೇಳಿದೆ. ಅವರು ನಾನು ಸಸ್ಯಾಹಾರಿ ಎಂದರು. ಒಳ್ಳೆಯ ಆಹಾರ, ಒಳ್ಳೆಯ ವ್ಯಾಯಾಮ, ಒಳ್ಳೆಯ ನಿದ್ದೆಯಿಂದ ಮಾತ್ರ ದೇಹದ ಫಿಟ್ನೆಸ್ ಕಾಯ್ದುಕೊಳ್ಳಬಹುದು. ಯಾವುದೇ ಒಂದು ಇಲ್ಲದಿದ್ದರೂ ಫಿಟ್ನೆಸ್ ಹಾಳಾಗುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ: ಜಾನ್ ಅಬ್ರಹಾಂನ ಭೇಟಿ ಮಾಡಿದ ‘777 ಚಾರ್ಲಿ’ ನಿರ್ದೇಶಕ; ಸಿಗಲಿದೆ ಹೊಸ ಅಪ್ಡೇಟ್?
ಜಾನ್ ಅಬ್ರಹಾಂ ಅವರು ದಿನನಿತ್ಯ ಮುಂಜಾನೆ 4:30ಕ್ಕೆ ಎದ್ದೇಳುತ್ತಾರೆ. ಅವರು ತಮ್ಮಿಷ್ಟದ ಕಾಜು ಕಟ್ಲಿಯನ್ನು 27 ವರ್ಷಗಳಿಂದ ತಿಂದೇ ಇಲ್ಲ. ಅವರು ಯಾವುದೇ ತಂಪು ಪಾನೀಯ ಸೇವಿಸುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.