
ಜೂ ಎನ್ಟಿಆರ್ (Jr NTR) ಮತ್ತು ಹೃತಿಕ್ ರೋಷನ್ (Hritik Roshan) ನಟನೆಯ ‘ವಾರ್ 2’ ಸಿನಿಮಾದ ಟೀಸರ್ ಇಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಆಗಸ್ಟ್ 14 ರಂದು ತೆರೆಗೆ ಬರಲಿದೆ. ಮೊದಲ ಬಾರಿಗೆ ಜೂ ಎನ್ಟಿಆರ್ ಒಂದು ಪರಿಪೂರ್ಣ ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ವಾರ್ 2’ ಮೂಲಕ ಅಧಿಕೃತವಾಗಿ ಬಾಲಿವುಡ್ಗೆ ಎಂಟ್ರಿ ನೀಡಿದ್ದಾರೆ ಜೂ ಎನ್ಟಿಆರ್. ಅಂದಹಾಗೆ ಈ ಸಿನಿಮಾವನ್ನು ಖ್ಯಾತ ನಿರ್ಮಾಣ ಸಂಸ್ಥೆಯಾದ ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದ್ದು, ಹಲವು ವಿಶೇಷತೆಗಳು ಈ ಸಿನಿಮಾನಲ್ಲಿವೆ.
ಕಳೆದ ಎರಡು ವರ್ಷದಿಂದಲೂ ಸಿನಿಮಾದ ಶೂಟಿಂಗ್ ನಡೆಯುತ್ತಿದೆಯಾದರೂ ಚಿತ್ರೀಕರಣ ನಡೆದ ಒಟ್ಟು ದಿನಗಳ ಸಂಖ್ಯೆ 150. ಸಿನಿಮಾದ ಕತೆ ಬರೋಬ್ಬರಿ ಆರು ದೇಶಗಳಲ್ಲಿ ನಡೆಯುತ್ತದೆಯಂತೆ. ಸಿನಿಮಾದ ಚಿತ್ರೀಕರಣಕ್ಕಾಗಿ ಆರು ದೇಶಗಳಲ್ಲಿ ಸುತ್ತಾಡಿದೆ ಚಿತ್ರತಂಡ. ಭಾರತ, ಸ್ಪೇನ್, ಇಟಲಿ, ಅಬುದಾಬಿ, ಜಪಾನ್ ಮತ್ತು ರಷ್ಯಾಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಚಿತ್ರೀಕರಣಕ್ಕಾಗಿ ಭಾರಿ ಬಜೆಟ್ ಅನ್ನು ಹೂಡಲಾಗಿದೆ.
ಸಿನಿಮಾದ ಆಕ್ಷನ್ ಹಾಗೂ ಡ್ಯಾನ್ಸ್ ದೃಶ್ಯಗಳನ್ನು ಪರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶೇಷವೆಂದರೆ ಸಿನಿಮಾನಲ್ಲಿ ಆರು ಆಕ್ಷನ್ ದೃಶ್ಯಗಳಿವೆಯಂತೆ. ಆಕ್ಷನ್ ದೃಶ್ಯಗಳ ಕೆಲ ಝಲಕ್ ಅನ್ನು ಈಗಾಗಲೇ ಟ್ರೈಲರ್ನಲ್ಲಿ ತೋರಿಸಲಾಗಿದ್ದು ಹಾಲಿವುಡ್ ಲೆವೆಲ್ ಚೇಸ್ ದೃಶ್ಯಗಳು ಸಿನಿಮಾನಲ್ಲಿರುವುದು ತಿಳಿಯುತ್ತಿದೆ. ಸಿನಿಮಾನಲ್ಲಿ ಹ್ಯಾಂಡ್ ಟು ಹ್ಯಾಂಡ್ ಕಾಂಬಾಟ್, ಸಮುದ್ರದ ನಡುವೆ ಯುದ್ಧ, ಕತ್ತಿ ಫೈಟ್, ಕಾರು ಚೇಸ್, ಬಂದೂಕು ಫೈಟ್ ಹೀಗೆ ಹಲವು ರೀತಿಯ ಆಕ್ಷನ್ ದೃಶ್ಯಗಳು ಇವೆ. ಜೊತೆಗೆ ಸಿನಿಮಾನಲ್ಲಿ ಡ್ಯಾನ್ಸ್ ಫೇಸ್ ಆಫ್ ಸಹ ಇದ್ದು, ಇದು ಹೃತಿಕ ಹಾಗೂ ಜೂ ಎನ್ಟಿಆರ್ ನಡುವೆ ನಡೆಯಲಿದೆಯಂತೆ.
ಇದನ್ನೂ ಓದಿ:ಜೂ ಎನ್ಟಿಆರ್ ದೇಹತೂಕ ಇಳಿಸಿಕೊಳ್ಳಲು ಕಾರಣ ಯಾರು?
ಆರು ವರ್ಷಗಳ ಹಿಂದೆ ‘ವಾರ್’ ಸಿನಿಮಾ ಬಂದಿತ್ತು. ಆ ಸಿನಿಮಾನಲ್ಲಿ ಟೈಗರ್ ಶ್ರಾಫ್ ಮತ್ತು ಹೃತಿಕ್ ರೋಷನ್ ನಟಿಸಿದ್ದರು. ಇದೀಗ ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ನಟಿಸುತ್ತಿದ್ದಾರೆ. ಟ್ರೈಲರ್ ನೋಡಿದರೆ ಜೂ ಎನ್ಟಿಆರ್ ವಿಲನ್ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನಿಸುತ್ತಿದೆ. ಸಿನಿಮಾ ಆಗಸ್ಟ್ 14 ಕ್ಕೆ ಬಿಡುಗಡೆ ಆಗಲಿದ್ದು, ಅಂದು ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಒಂದು ಡ್ಯಾನ್ಸ್ ದೃಶ್ಯದ ಚಿತ್ರೀಕರಣ ಮಾತ್ರವೇ ಬಾಕಿ ಇದೆ. ಹೃತಿಕ್ಗೆ ಪೆಟ್ಟಾದ ಕಾರಣ ಚಿತ್ರೀಕರಣವನ್ನು ನಿಲ್ಲಿಸಲಾಗಿದ್ದು, ಜೂನ್ ಅಂತ್ಯಕ್ಕೆ ಚಿತ್ರೀಕರಣ ನಡೆಸಲಾಗುವುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ