AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃತಿಕ್ ಆಯ್ತು ಈಗ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ಜೂ ಎನ್​​ಟಿಆರ್?

Shah Rukh Khan movie: ಜೂ ಎನ್​​ಟಿಆರ್ ಸ್ಟಾರ್ ಪ್ಯಾನ್ ಇಂಡಿಯಾ ನಟ. ದಕ್ಷಿಣ ಭಾರತದಲ್ಲಿ ಅವರಿಗೆ ಭಾರಿ ದೊಡ್ಡ ಅಭಿಮಾನಿ ವರ್ಗವೇ ಇದೆ. ‘ವಾರ್ 2’ ಸಿನಿಮಾ ಮೂಲಕ ಜೂ ಎನ್​​ಟಿಆರ್ ಬಾಲಿವುಡ್​ಗೂ ಪ್ರವೇಶ ಮಾಡಿದ್ದಾರೆ. ಆದರೆ ನಿರೀಕ್ಷಿತ ಯಶಸ್ಸು ಅವರಿಗೆ ಸಿಕ್ಕಿಲ್ಲ. ಆದರೆ ಇದೀಗ ಅವರು ಮತ್ತೊಂದು ಹಿಂದಿ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದೂ ಈ ಬಾರಿ ಶಾರುಖ್ ಖಾನ್ ಜೊತೆಗಂತೆ...

ಹೃತಿಕ್ ಆಯ್ತು ಈಗ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ಜೂ ಎನ್​​ಟಿಆರ್?
Jr Ntr Srk
ಮಂಜುನಾಥ ಸಿ.
|

Updated on: Dec 16, 2025 | 3:25 PM

Share

‘ಆರ್​​ಆರ್​​ಆರ್’ (RRR) ಸಿನಿಮಾದ ಬಳಿಕ ಜೂ ಎನ್​​ಟಿಆರ್ (Jr NTR) ಪ್ಯಾನ್ ಇಂಡಿಯಾ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಈಗಾಗಲೇ ‘ವಾರ್ 2’ ಸಿನಿಮಾ ಮೂಲಕ ಬಾಲಿವುಡ್​​ಗೂ ಪ್ರವೇಶ ಪಡೆದಿರುವ ಜೂ ಎನ್​​ಟಿಆರ್, ಅಲ್ಲಿಯೂ ಸಹ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ. ಆದರೆ ಅವರು ನಟಿಸಿದ ಮೊದಲ ಬಾಲಿವುಡ್ ಸಿನಿಮಾ ‘ವಾರ್ 2’ ಫ್ಲಾಪ್ ಆಗಿತ್ತು. ಆದರೆ ಇದೀಗ ಬಾಲಿವುಡ್​ನ ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ನಟಿಸಲು ಜೂ ಎನ್​​ಟಿಆರ್ ಮುಂದಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಶಾರುಖ್ ಖಾನ್ ಜೊತೆಗೆ ಜೂ ಎನ್​​ಟಿಆರ್ ನಟಿಸಲಿದ್ದಾರೆ ಎಂಬ ಮಾತುಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ. ‘ವಾರ್ 2’ ನಿರ್ಮಿಸಿದ್ದ ಯಶ್ ರಾಜ್ ಫಿಲಮ್ಸ್​​ನವರ ಮತ್ತೊಂದು ಸ್ಪೈ ಸಿನಿಮಾ ‘ಪಠಾಣ್’ನಲ್ಲಿ ಶಾರುಖ್ ಖಾನ್ ನಟಿಸಿದ್ದು, ಇದೀಗ ‘ಪಠಾಣ್’ ಸಿನಿಮಾದ ಸೀಕ್ವೆಲ್ ಮಾಡಲು ವೈಆರ್​​ಎಫ್ ಮುಂದಾಗಿದೆ. ‘ಪಠಾಣ್’ ಸಿನಿಮಾದ ಸೀಕ್ವೆಲ್​​ನಲ್ಲಿ ಶಾರುಖ್ ಖಾನ್ ಜೊತೆಗೆ ಜೂ ಎನ್​​ಟಿಆರ್ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ:ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಜೂ ಎನ್​​ಟಿಆರ್: ಕಾರಣವೇನು?

‘ವಾರ್ 2’ ಸಿನಿಮಾನಲ್ಲಿ ಜೂ ಎನ್​ಟಿಆರ್ ಮೇಜರ್ ರಘು ವಿಕ್ರಂ ಛಲಪತಿ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ‘ವಾರ್ 2’ ಸಿನಿಮಾನಲ್ಲಿ ಹೃತಿಕ್ ರೋಷನ್​​ಗೆ ಸಖತ್ ಟಕ್ಕರ್ ನೀಡಿದ್ದರು. ಸಿನಿಮಾನಲ್ಲಿ ಜೂ ಎನ್​​ಟಿಆರ್ ಪಾತ್ರಕ್ಕೂ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಅದೇ ಪಾತ್ರ ‘ಪಠಾಣ್ 2’ ಸಿನಿಮಾನಲ್ಲಿಯೂ ಇರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವೈಆರ್​​ಎಫ್ ಹಲವು ಸ್ಪೈ ಸಿನಿಮಾಗಳನ್ನು ನಿರ್ಮಿಸಿದ್ದು, ಒಂದಕ್ಕೊಂದು ಲಿಂಕ್ ಇಡುತ್ತಲೇ ಬಂದಿದೆ. ‘ಪಠಾಣ್’ ಸಿನಿಮಾನಲ್ಲಿ ‘ಟೈಗರ್’ ಸಿನಿಮಾದ ಪಾತ್ರಧಾರಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಬಂದು ಹೋಗಿದ್ದಾರೆ, ಈಗ ಜೂ ಎನ್​ಟಿಆರ್ ಸಹ ಎಂಟ್ರಿ ನೀಡುತ್ತಿದ್ದಾರೆ.

‘ಪಠಾಣ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿತ್ತು. ಶಾರುಖ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸಿದ್ದ ಆ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 1000 ಕೋಟಿಗೂ ಹೆಚ್ಚು ಗಳಿಸಿತ್ತು. ಇದೀಗ ಸಿನಿಮಾದ ಸೀಕ್ವೆಲ್​​ ನಿರ್ಮಿಸಲು ವೇದಿಕೆ ಸಜ್ಜಾಗಿದೆ. ಆದರೆ ಜೂ ಎನ್​​ಟಿಆರ್ ನಿಜಕ್ಕೂ ಈ ಸಿನಿಮಾ ಸೇರಿಕೊಳ್ಳುತ್ತಾರಾ ಎಂಬ ಅನುಮಾನ ಇದೆ. ‘ವಾರ್ 2’ ಸಿನಿಮಾ ನಿರೀಕ್ಷಿತ ಹಿಟ್ ಆಗಲಿಲ್ಲವಾದ್ದರಿಂದ ಜೂ ಎನ್​​ಟಿಆರ್ ಹಿಂದೇಟು ಹಾಕುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ