
‘ಆರ್ಆರ್ಆರ್’ (RRR) ಸಿನಿಮಾದ ಬಳಿಕ ಜೂ ಎನ್ಟಿಆರ್ (Jr NTR) ಪ್ಯಾನ್ ಇಂಡಿಯಾ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಈಗಾಗಲೇ ‘ವಾರ್ 2’ ಸಿನಿಮಾ ಮೂಲಕ ಬಾಲಿವುಡ್ಗೂ ಪ್ರವೇಶ ಪಡೆದಿರುವ ಜೂ ಎನ್ಟಿಆರ್, ಅಲ್ಲಿಯೂ ಸಹ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ. ಆದರೆ ಅವರು ನಟಿಸಿದ ಮೊದಲ ಬಾಲಿವುಡ್ ಸಿನಿಮಾ ‘ವಾರ್ 2’ ಫ್ಲಾಪ್ ಆಗಿತ್ತು. ಆದರೆ ಇದೀಗ ಬಾಲಿವುಡ್ನ ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ನಟಿಸಲು ಜೂ ಎನ್ಟಿಆರ್ ಮುಂದಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಶಾರುಖ್ ಖಾನ್ ಜೊತೆಗೆ ಜೂ ಎನ್ಟಿಆರ್ ನಟಿಸಲಿದ್ದಾರೆ ಎಂಬ ಮಾತುಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ. ‘ವಾರ್ 2’ ನಿರ್ಮಿಸಿದ್ದ ಯಶ್ ರಾಜ್ ಫಿಲಮ್ಸ್ನವರ ಮತ್ತೊಂದು ಸ್ಪೈ ಸಿನಿಮಾ ‘ಪಠಾಣ್’ನಲ್ಲಿ ಶಾರುಖ್ ಖಾನ್ ನಟಿಸಿದ್ದು, ಇದೀಗ ‘ಪಠಾಣ್’ ಸಿನಿಮಾದ ಸೀಕ್ವೆಲ್ ಮಾಡಲು ವೈಆರ್ಎಫ್ ಮುಂದಾಗಿದೆ. ‘ಪಠಾಣ್’ ಸಿನಿಮಾದ ಸೀಕ್ವೆಲ್ನಲ್ಲಿ ಶಾರುಖ್ ಖಾನ್ ಜೊತೆಗೆ ಜೂ ಎನ್ಟಿಆರ್ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ:ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಜೂ ಎನ್ಟಿಆರ್: ಕಾರಣವೇನು?
‘ವಾರ್ 2’ ಸಿನಿಮಾನಲ್ಲಿ ಜೂ ಎನ್ಟಿಆರ್ ಮೇಜರ್ ರಘು ವಿಕ್ರಂ ಛಲಪತಿ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ‘ವಾರ್ 2’ ಸಿನಿಮಾನಲ್ಲಿ ಹೃತಿಕ್ ರೋಷನ್ಗೆ ಸಖತ್ ಟಕ್ಕರ್ ನೀಡಿದ್ದರು. ಸಿನಿಮಾನಲ್ಲಿ ಜೂ ಎನ್ಟಿಆರ್ ಪಾತ್ರಕ್ಕೂ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಅದೇ ಪಾತ್ರ ‘ಪಠಾಣ್ 2’ ಸಿನಿಮಾನಲ್ಲಿಯೂ ಇರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವೈಆರ್ಎಫ್ ಹಲವು ಸ್ಪೈ ಸಿನಿಮಾಗಳನ್ನು ನಿರ್ಮಿಸಿದ್ದು, ಒಂದಕ್ಕೊಂದು ಲಿಂಕ್ ಇಡುತ್ತಲೇ ಬಂದಿದೆ. ‘ಪಠಾಣ್’ ಸಿನಿಮಾನಲ್ಲಿ ‘ಟೈಗರ್’ ಸಿನಿಮಾದ ಪಾತ್ರಧಾರಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಬಂದು ಹೋಗಿದ್ದಾರೆ, ಈಗ ಜೂ ಎನ್ಟಿಆರ್ ಸಹ ಎಂಟ್ರಿ ನೀಡುತ್ತಿದ್ದಾರೆ.
‘ಪಠಾಣ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿತ್ತು. ಶಾರುಖ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸಿದ್ದ ಆ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿಗೂ ಹೆಚ್ಚು ಗಳಿಸಿತ್ತು. ಇದೀಗ ಸಿನಿಮಾದ ಸೀಕ್ವೆಲ್ ನಿರ್ಮಿಸಲು ವೇದಿಕೆ ಸಜ್ಜಾಗಿದೆ. ಆದರೆ ಜೂ ಎನ್ಟಿಆರ್ ನಿಜಕ್ಕೂ ಈ ಸಿನಿಮಾ ಸೇರಿಕೊಳ್ಳುತ್ತಾರಾ ಎಂಬ ಅನುಮಾನ ಇದೆ. ‘ವಾರ್ 2’ ಸಿನಿಮಾ ನಿರೀಕ್ಷಿತ ಹಿಟ್ ಆಗಲಿಲ್ಲವಾದ್ದರಿಂದ ಜೂ ಎನ್ಟಿಆರ್ ಹಿಂದೇಟು ಹಾಕುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ