Jyothika: 25 ವರ್ಷದ ಬಳಿಕ ಬಾಲಿವುಡ್​ಗೆ ಮರಳಿದ ಜ್ಯೋತಿಕಾ; ಯಾವ ಹೀರೋಗೆ ಜೋಡಿ?

Jyothika Hindi Movie: ಸ್ಕ್ರಿಪ್ಟ್​ ಆಯ್ಕೆಯಲ್ಲಿ ಜ್ಯೋತಿಕಾ ಹೆಚ್ಚು ಚ್ಯೂಸಿ ಆಗಿದ್ದಾರೆ. ಬಹಳ ವರ್ಷಗಳ ಕಾಲ ಬಾಲಿವುಡ್​ನಿಂದ ದೂರ ಉಳಿದುಕೊಂಡಿದ್ದ ಅವರು ಈಗ ಹಿಂದಿ ಚಿತ್ರ ಒಪ್ಪಿಕೊಂಡಿದ್ದು ಅಚ್ಚರಿ ಮೂಡಿಸಿದೆ.

Jyothika: 25 ವರ್ಷದ ಬಳಿಕ ಬಾಲಿವುಡ್​ಗೆ ಮರಳಿದ ಜ್ಯೋತಿಕಾ; ಯಾವ ಹೀರೋಗೆ ಜೋಡಿ?
ಜ್ಯೋತಿಕಾ

Updated on: May 15, 2023 | 4:26 PM

ನಟಿ ಜ್ಯೋತಿಕಾ (Jyothika) ಅವರು ದಕ್ಷಿಣ ಭಾರತದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಅವರು ಹೆಚ್ಚಾಗಿ ನಟಿಸಿದ್ದು ತಮಿಳು ಸಿನಿಮಾಗಳಲ್ಲಿ. ಕನ್ನಡ, ಹಿಂದಿ, ಮಲಯಾಳಂ ಮತ್ತು ತೆಲುಗಿನ ಚಿತ್ರಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ಅವರು ಬಣ್ಣದ ಬದುಕು ಆರಂಭಿಸಿದ್ದೇ ಬಾಲಿವುಡ್​ (Bollywood) ಮೂಲಕ. ಆದರೆ ಹೆಚ್ಚಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಲಿಲ್ಲ. ವಿಶೇಷ ಏನೆಂದರೆ, ಬರೋಬ್ಬರಿ 25 ವರ್ಷಗಳ ಬಳಿಕ ಅವರು ಮತ್ತೆ ಬಾಲಿವುಡ್​ಗೆ ಮರಳುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಖ್ಯಾತ ನಟ ಅಜಯ್​ ದೇವಗನ್ (Ajay Devgn)​ ಜೊತೆ ಜ್ಯೋತಿಕಾ ಅಭಿನಯಿಸಲಿದ್ದಾರೆ. ಇದೊಂದು ಹಾರರ್​ ಸಿನಿಮಾ ಆಗಿರಲಿದ್ದು, ಆರ್​. ಮಾಧವನ್​ ಕೂಡ ನಟಿಸಲಿದ್ದಾರೆ. ಚಿತ್ರತಂಡದವರಿಂದಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ಚಿತ್ರದ ಶೀರ್ಷಿಕೆ ಏನು ಎಂಬುದು ಸದ್ಯಕ್ಕೆ ಬಹಿರಂಗ ಆಗಿಲ್ಲ.

ಬಹಳ ವರ್ಷಗಳ ಕಾಲ ಬಾಲಿವುಡ್​ನಿಂದ ದೂರ ಉಳಿದುಕೊಂಡಿದ್ದ ಜ್ಯೋತಿಕಾ ಅವರು ಈಗ ಹಿಂದಿ ಸಿನಿಮಾ ಒಪ್ಪಿಕೊಂಡಿರುವುದರಿಂದ ಅಭಿಮಾನಿಗಳ ಮನದಲ್ಲಿ ನಿರೀಕ್ಷೆ ಮೂಡುವಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅವರು ಸ್ಕ್ರಿಪ್ಟ್​ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಅವರ ಪತಿ ಸೂರ್ಯ ಅವರು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಜ್ಯೋತಿಕಾ ಹೆಚ್ಚು ಸಿನಿಮಾಗಳನ್ನು ಮಾಡಬೇಕು ಎಂಬುದು ಅಭಿಮಾನಿಗಳ ಆಸೆ.

ಅಜಯ್​ ದೇವಗನ್​ ಅವರು ಬಾಲಿವುಡ್​ನಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹಲವು ರೀತಿಯ ಸಿನಿಮಾಗಳನ್ನು ಮಾಡುತ್ತ ಅವರು ಮುನ್ನುಗ್ಗುತ್ತಿದ್ದಾರೆ. ಈ ವರ್ಷ ಅವರು ನಟಿಸಿದ ‘ಭೋಲಾ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಅಂದುಕೊಂಡ ರೀತಿಯಲ್ಲಿ ಆ ಸಿನಿಮಾ ಗೆಲ್ಲಲಿಲ್ಲ. ಸ್ವತಃ ಅಜಯ್​ ದೇವಗನ್​ ಅವರೇ ನಿರ್ದೇಶನ, ನಿರ್ಮಾಣ ಮಾಡಿದ್ದ ‘ಭೋಲಾ’ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಆಗಲಿಲ್ಲ. ಈಗ ಅವರು ‘ಮೈದಾನ್​’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಆ ಚಿತ್ರದ ಭವಿಷ್ಯ ಏನಾಗುತ್ತದೋ ಗೊತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಾದರೂ ಗೆಲ್ಲಬೇಕು ಎಂಬ ಕಾರಣಕ್ಕೆ ಅಜಯ್​ ದೇವಗನ್ ಅವರು ಹಾರರ್​ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: Ajay Devgn: ಪ್ರೀತಿಯಿಂದ ಕೈ ಮುಟ್ಟಲು ಬಂದ ಅಭಿಮಾನಿ; ಸಿಟ್ಟಾದ ಅಜಯ್​ ದೇವಗನ್​ ಮಾಡಿದ್ದೇನು?

ಖ್ಯಾತ ನಿರ್ದೇಶಕ ವಿಕಾಸ್​ ಬಹ್ಲ್​ ಅವರು ಈ ಹಾರರ್​ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಜೂನ್​ ತಿಂಗಳಲ್ಲಿ ಈ ಚಿತ್ರದ ಶೂಟಿಂಗ್​ ಆರಂಭ ಆಗಲಿದೆ. ಮುಂಬೈ ಮತ್ತು ವಿದೇಶದ ಕೆಲವು ಲೊಕೇಷನ್​ಗಳಲ್ಲಿ ಚಿತ್ರೀಕರಣ ನಡೆಯಲಿದೆ. ಅಜಯ್​ ದೇವಗನ್​ ಅವರು ಮಾಸ್​ ಸಿನಿಮಾಗಳಿಂದ ಗುರುತಿಸಿಕೊಂಡಿದ್ದೇ ಹೆಚ್ಚು. ಪೊಲೀಸ್​ ಪಾತ್ರಗಳಲ್ಲೂ ಅವರು ಮಿಂಚಿದ್ದಾರೆ. ಸಾಮಾನ್ಯವಾಗಿ ಮಾಸ್​​ ಹೀರೋಗಳು ಹಾರರ್​ ಸಿನಿಮಾ ಎಂದರೆ ಹಿಂದೇಟು ಹಾಕುತ್ತಾರೆ. ಆದರೂ ಕೂಡ ಅಜಯ್​ ದೇವಗನ್​ ಅವರು ಹಾರರ್​ ಸಿನಿಮಾ ಮಾಡಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us