‘ದೇವರೇ ಕುಸಿದುಬಿದ್ದಂತೆ ಭಾಸವಾಯ್ತು’; ಸದ್ಗುರು ಅನಾರೋಗ್ಯದ ಬಗ್ಗೆ ಕಂಗನಾ ಭಾವುಕ ಮಾತು

|

Updated on: Mar 21, 2024 | 10:44 AM

‘ಸದ್ಗುರು ಅವರು ಆರೋಗ್ಯವಾಗಿ ಇರಲಿದ್ದಾರೆ. ಹಾಗಾಗದೇ ಇದ್ದಲ್ಲಿ ಸೂರ್ಯ ಉದಯಿಸುವುದಿಲ್ಲ, ಭೂಮಿ ಚಲಿಸುವುದಿಲ್ಲ. ಈ ಕ್ಷಣವು ನಿರ್ಜೀವ ಮತ್ತು ನಿಶ್ಚಲ ಎನಿಸುತ್ತದೆ’ ಎಂದಿದ್ದಾರೆ ಕಂಗನಾ.  ಸದ್ಯ ಅವರು ಮಾಡಿರೋ ಪೋಸ್ಟ್ ವೈರಲ್ ಆಗುತ್ತಿದೆ.

‘ದೇವರೇ ಕುಸಿದುಬಿದ್ದಂತೆ ಭಾಸವಾಯ್ತು’; ಸದ್ಗುರು ಅನಾರೋಗ್ಯದ ಬಗ್ಗೆ ಕಂಗನಾ ಭಾವುಕ ಮಾತು
ಕಂಗನಾ-ಸದ್ಗುರು
Follow us on

ನಟಿ ಕಂಗನಾ ರಣಾವತ್ (Kangana Ranaut) ಅವರು ಆಧ್ಯತ್ಮದ ಬಗ್ಗೆ, ಆಧ್ಯಾತ್ಮಿಕ ಆಲೋಚನೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅವರಿಗೆ ಆಧ್ಯಾತ್ಮ ಗುರು ಜಗ್ಗಿ ವಾಸುದೇವ ಅವರ ಬಗ್ಗೆ ವಿಶೇಷ ಗೌರವ ಇದೆ. ಇತ್ತೀಚೆಗೆ ಸದ್ಗುರು ಅವರು ಮಿದುಳಿನ ಸರ್ಜರಿಗೆ ಒಳಗಾದರು. ಮಿದುಳಿನಲ್ಲಿ ರಕ್ತಸಾವ್ರ ಉಂಟಾಗಿದ್ದರಿಂದ ಈ ಆಪರೇಷನ್​ಗೆ ಒಳಗಾಗ ಬೇಕಾಯಿತು. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಕಂಗನಾ ರಣಾವತ್ ಅವರು ಕುಗ್ಗಿ ಹೋದರಂತೆ. ತಾವು ಒಂದು ಕ್ಷಣ ಮಂಕಾಗಿದ್ದಾಗಿ ಹೇಳಿಕೊಂಡಿದ್ದಾರೆ.

‘ಇಂದು ನಾನು ಸದ್ಗುರು ಅವರನ್ನು ಐಸಿಯು ಬೆಡ್ ಮೇಲೆ ಮಲಗಿರುವುದನ್ನು ನೋಡಿದೆ. ಈ ಮೊದಲು ಅವರು ನಮ್ಮಂತೆ ಮೂಳೆಗಳು, ರಕ್ತ, ಮಾಂಸ ಹೊಂದಿದ್ದಾರೆ ಎಂದು ನನಗೆ ಎಂದಿಗೂ ಅನಿಸಿರಲಿಲ್ಲ. ದೇವರೆ ಕುಸಿದಂತೆ ಭಾಸವಾಯಿತು. ಭೂಮಿ ಪಲ್ಲಟಗೊಂಡಿತೇನೋ ಅನಿಸಿತು. ಆಕಾಶವು ನನ್ನನ್ನು ಕೈಬಿಟ್ಟಿದೆ ಎಂದು ಭಾಸವಾಯಿತು. ನನ್ನ ತಲೆ ತಿರುಗುತ್ತಿದೆ ಎಂದು ನನಗೆ ಅನಿಸಿತು. ನಾನು ಈ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎನಿಸಿತು. ಇದನ್ನು ನಂಬಬಾರದು ಎಂದುಕೊಂಡೆ. ನಂತರ ಕಣ್ಣೀರು ಬಂತು’ ಎಂದಿದ್ದಾರೆ ಕಂಗನಾ.

ಕಂಗನಾ ಟ್ವೀಟ್


‘ನನ್ನ ನೋವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಇಂದು ಲಕ್ಷಾಂತರ ಭಕ್ತರು ನನ್ನ ಈ ದುಃಖವನ್ನು ಹಂಚಿಕೊಳ್ಳುತ್ತಾರೆ. ಅದನ್ನು ತಡೆದುಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಅವರು ಆರೋಗ್ಯವಾಗಿ ಇರಲಿದ್ದಾರೆ. ಹಾಗಾಗದೇ ಇದ್ದಲ್ಲಿ ಸೂರ್ಯ ಉದಯಿಸುವುದಿಲ್ಲ, ಭೂಮಿ ಚಲಿಸುವುದಿಲ್ಲ. ಈ ಕ್ಷಣವು ನಿರ್ಜೀವ ಮತ್ತು ನಿಶ್ಚಲ ಎನಿಸುತ್ತದೆ’ ಎಂದಿದ್ದಾರೆ ಕಂಗನಾ.

ಇದನ್ನೂ ಓದಿ:ಮೆದುಳಿನಲ್ಲಿ ರಕ್ತಸ್ರಾವ; ಸದ್ಗುರು ಜಗ್ಗಿ ವಾಸುದೇವ್​​ಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ

ಸದ್ಗುರು ತಂಡದವರು ಬುಧವಾರ (ಮಾರ್ಚ್ 20) ಅವರ ಶಸ್ತ್ರಚಿಕಿತ್ಸೆ ವಿಚಾರವನ್ನು ಶೇರ್​ ಮಾಡಿಕೊಂಡರು. ಅವರಿಗೆ ನಿರಂತರವಾಗಿ ತಲೆನೋವು ಬರುತ್ತಿತ್ತು ಎನ್ನಲಾಗಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ