Karan Johar: ‘ಪಠಾಣ್​’ ಗೆದ್ದಿದ್ದಕ್ಕೆ ಬಾಲಿವುಡ್​ ಮಂದಿಗೆ ಬಂತು ಧೈರ್ಯ; ದೊಡ್ಡ ಓಪನಿಂಗ್​ಗಾಗಿ​ ನಡೆದಿದೆ ಪ್ಲ್ಯಾನ್​

Rocky Aur Rani Ki Prem Kahani: ಪ್ರೇಕ್ಷಕರು ಹಿಂದಿ ಸಿನಿಮಾಗಳನ್ನು ನೋಡಲು ಚಿತ್ರಮಂದಿರಕ್ಕೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ನಿರ್ಮಾಪಕರಿಗೆ ಇತ್ತು. ಆದರೆ ‘ಪಠಾಣ್​’ ಚಿತ್ರದಿಂದ ಆ ಅನುಮಾನ ಬಗೆಹರಿಯಿತು.

Karan Johar: ‘ಪಠಾಣ್​’ ಗೆದ್ದಿದ್ದಕ್ಕೆ ಬಾಲಿವುಡ್​ ಮಂದಿಗೆ ಬಂತು ಧೈರ್ಯ; ದೊಡ್ಡ ಓಪನಿಂಗ್​ಗಾಗಿ​ ನಡೆದಿದೆ ಪ್ಲ್ಯಾನ್​
ಶಾರುಖ್ ಖಾನ್, ಕರಣ್ ಜೋಹರ್

Updated on: Feb 10, 2023 | 7:15 AM

2022ರಲ್ಲಿ ಬಾಲಿವುಡ್​ (Bollywood) ಬಾಕ್ಸ್​ ಆಫೀಸ್​ ಸೊರಗಿತ್ತು. ಘಟಾನುಘಟಿ ಹೀರೋಗಳ ಸಿನಿಮಾಗಳು ಕೂಡ ನೆಲಕಚ್ಚಿದ್ದವು. ಅದರಿಂದ ಹಿಂದಿ ಚಿತ್ರರಂಗದ ಮಂದಿಗೆ ನಿಜಕ್ಕೂ ನಿರಾಸೆ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ. 2023ರ ಆರಂಭದಲ್ಲಿಯೇ ‘ಪಠಾಣ್​’ ಸಿನಿಮಾ (Pathaan Movie) ಅಬ್ಬರಿಸಿದೆ. ಹಾಗಾಗಿ ಬಿ-ಟೌನ್​ನಲ್ಲಿ ಹೊಸ ಕಳೆ ಬಂದಿದೆ. ಮುಂಬರುವ ಸಿನಿಮಾಗಳು ಕೂಡ ಇದೇ ರೀತಿ ಉತ್ತಮ ಕಲೆಕ್ಷನ್​ ಮಾಡಬಹುದು ಎಂಬ ನಿರೀಕ್ಷೆ ಬಲವಾಗಿದೆ. ನಿರ್ಮಾಪಕ ಕರಣ್​ ಜೋಹರ್​ (Karan Johar) ಅವರು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ತುಂಬ ದೊಡ್ಡದಾಗಿ ರಿಲೀಸ್​ ಮಾಡಲು ಅವರು ಸಿದ್ಧರಾಗುತ್ತಿದ್ದಾರೆ. ಆ ಬಗ್ಗೆ ಮಾಹಿತಿ ಕೇಳಿಬಂದಿದೆ.

‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿಯಾಗಿ ನಟಿಸುತ್ತಿದ್ದಾರೆ. ರಣವೀರ್​ ಸಿಂಗ್​ ಅಭಿನಯಿಸಿದ್ದ ‘ಜಯೇಶ್​ ಭಾಯ್​ ಜೋರ್ದಾರ್​’ ಹಾಗೂ ‘ಸರ್ಕಸ್​’ ಸಿನಿಮಾಗಳು ಕಳೆದ ವರ್ಷ ಹೀನಾಯವಾಗಿ ಸೋತಿವೆ. 2023ರಲ್ಲಿ ಅವರಿಗೆ ತುರ್ತಾಗಿ ಒಂದು ಗೆಲುವು ಬೇಕಿದೆ. ಅದನ್ನು ದೊರಕಿಸಿಕೊಡಲು ಕರಣ್​ ಜೋಹರ್​ ಸಕಲ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾವನ್ನು ಬರೋಬ್ಬರಿ 9 ಸಾವಿರ ಪರದೆಗಳಲ್ಲಿ ಬಿಡುಗಡೆ ಮಾಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Shah Rukh Khan: ‘ಪಠಾಣ್​’ ಟಿಕೆಟ್​ ಬೆಲೆ ಇಳಿಕೆ: ಶಾರುಖ್​ ಖಾನ್​ ಅಭಿಮಾನಿಗಳಿಗೆ ಬಂಪರ್​ ಅವಕಾಶ

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಜುಲೈ 28ರಂದು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಜಯಾ ಬಚ್ಚನ್​, ಶಬಾನಾ ಅಜ್ಮಿ, ಧರ್ಮೇಂದ್ರ ಕೂಡ ನಟಿಸಿದ್ದಾರೆ. ಈ ಸಿನಿಮಾ ಮೂಡಿಬರುತ್ತಿರುವ ಬಗ್ಗೆ ಕರಣ್​ ಜೋಹರ್​ ಅವರಿಗೆ ಸಖತ್​ ಕಾನ್ಫಿಡೆನ್ಸ್​ ಇದೆ. ಹಾಗಾಗಿ ಅವರು ದೊಡ್ಡ ಮಟ್ಟದಲ್ಲಿ ರಿಲೀಸ್​ ಮಾಡಲಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: Pathaan Beats KGF 2: ಹಿಂದಿಯಲ್ಲಿ ‘ಕೆಜಿಎಫ್​ 2’ ಚಿತ್ರದ ದಾಖಲೆ ಮುರಿದ ‘ಪಠಾಣ್​’; ಇನ್ನೂ ತಗ್ಗಿಲ್ಲ ಶಾರುಖ್​ ಸಿನಿಮಾ ಹವಾ

ಹಿಂದಿ ಸಿನಿಮಾಗಳ ಬಗ್ಗೆ ಕಳೆದ ವರ್ಷ ಜನರಲ್ಲಿ ಒಂದು ಬಗೆಯ ತಿರಸ್ಕಾರ ಭಾವನೆ ಮೂಡಿತ್ತು. ಕೆಲವೇ ಸಿನಿಮಾಗಳನ್ನು ಹೊರತುಪಡಿಸಿ ಇನ್ನಾವುದೇ ಚಿತ್ರಗಳನ್ನೂ ಜನರು ಗೆಲ್ಲಿಸಲಿಲ್ಲ. ‘ಬಾಯ್ಕಾಟ್​ ಬಾಲಿವುಡ್​’ ಟ್ರೆಂಡ್​ ವರ್ಷ ಪೂರ್ತಿ ಜಾರಿಯಲ್ಲಿತ್ತು. ಅದು ಹಾಗೆಯೇ ಮುಂದುವರಿದಿದ್ದರೆ ಕಷ್ಟವಾಗುತ್ತಿತ್ತು. ಆದರೆ ‘ಪಠಾಣ್​’ ಸಿನಿಮಾದಿಂದ ಲವಲವಿಕೆಯ ವಾತಾವರಣ ನಿರ್ಮಾಣ ಆಗಿದೆ.

ಇದನ್ನೂ ಓದಿ: Pathaan Movie: ‘ಶ್ರೀನಗರದಲ್ಲಿ ದಶಕಗಳ ಬಳಿಕ ಹೌಸ್​ಫುಲ್​ ಆಗಿದೆ’: ‘ಪಠಾಣ್​’ ಗೆಲುವಿನ ಬಳಿಕ ಸಂಸತ್ತಿನಲ್ಲಿ ಮೋದಿ ಭಾಷಣ

ಪ್ರೇಕ್ಷಕರು ಹಿಂದಿ ಸಿನಿಮಾಗಳನ್ನು ನೋಡಲು ಚಿತ್ರಮಂದಿರಕ್ಕೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ನಿರ್ಮಾಪಕರಿಗೆ ಇತ್ತು. ಆದರೆ ‘ಪಠಾಣ್​’ ಚಿತ್ರಕ್ಕೆ ಜನರು ತೋರಿಸಿದ ಪ್ರೀತಿಯ ಬಳಿಕ ಆ ಅನುಮಾನ ದೂರವಾಗಿದೆ. ಹಾಗಾಗಿ ಬೇರೆ ನಿರ್ಮಾಪಕರು ಕೂಡ ತಮ್ಮ ಸಿನಿಮಾಗಳನ್ನು ದೊಡ್ಡದಾಗಿ ಬಿಡುಗಡೆ ಮಾಡಲು ಉತ್ಸಾಹ ತೋರುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us