
ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಏಪ್ರಿಲ್ 12ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ vs ಆರ್ಸಿಬಿ ಮ್ಯಾಚ್ ನೋಡಲು ಬಂದಿದ್ದರು. ಈ ವೇಳೆ ಅವರ ಮಕ್ಕಳು ಕೂಡ ಇದ್ದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವೇಳೆ ಕರೀನಾ ಕಪೂರ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿದೆ.
ಮುಂಬೈನಲ್ಲಿ ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳು ವಾಸವಾಗಿದ್ದಾರೆ. ಅಲ್ಲಿ ಪಂದ್ಯ ನಡೆದರೆ ಸಾಕಷ್ಟು ಸೆಲೆಬ್ರಿಟಿಗಳು ಭಾಗಿ ಆಗುತ್ತಾರೆ. ಭಾನುವಾರದ ಪಂದ್ಯದಲ್ಲೂ ಚಿತ್ರರಂಗದ ಅನೇಕ ಗಣ್ಯರು ಇದ್ದರು. ನಟಿ ಪೂಜಾ ಹೆಗ್ಡೆ, ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮ್ಯಾಚ್ ವೀಕ್ಷಣೆಗೆ ಬಂದಿದ್ದರು. ಅದೇ ರೀತಿ ಕರೀನಾ ಕೂಡ ತಮ್ಮ ಮಕ್ಕಳ ಜೊತೆ ಆಗಮಿಸಿದ್ದರು.
ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಕರೀನಾ ಅವರು ಮೊಬೈಲ್ ಬಳಕೆ ಮಾಡುತ್ತಿದ್ದರು. ಅತ್ತ ಮಕ್ಕಳು ಜ್ಯೂಸ್ ಬಾಟಲಿಗಳನ್ನು ತಂದುಕೊಂಡು ಕುಡಿಯುತ್ತಿದ್ದರು. ಈ ಬಗ್ಗೆ ಕರೀನಾ ಕಪೂರ್ಗೆ ಗಮನವೇ ಇರಲಿಲ್ಲ. ಅವರ ಗಮನ ಸಂಪೂರ್ಣವಾಗಿ ಮೊಬೈಲ್ ಮೇಲೆ ಇತ್ತು. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ಧುರಂಧರ್ ರಣವೀರ್ ಸಿಂಗ್ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲ; ಕರೀನಾ ಕಪೂರ್
ಮೈದಾನದಲ್ಲಿ ಪಂದ್ಯ ನೋಡಬೇಕು ಎಂಬುದು ಅನೇಕರ ಆಸೆ ಆಗಿರುತ್ತದೆ. ಕರೀನಾಗೆ ಅಂತಹ ಅವಕಾಶ ಸಿಕ್ಕಿದೆ. ಆದರೂ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಚಿಯರ್ಸ್ ಮಾಡೋದು ಬಿಟ್ಟು ಮೊಬೈಲ್ ನೋಡುತ್ತಾ ಕುಳಿತಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ. ಇನ್ನು ಮೈದಾನದಲ್ಲಿ ಇರುವಾಗ ಕರೀನಾ ಮುಂಬೈ ಇಂಡಿಯನ್ಸ್ ಜರ್ಸಿ ಧರಿಸಿದ್ದರು. ಹೊರ ಹೋಗುವಾಗ ಅವರು ಶರ್ಟ್ ಬದಲಿಸಿದ್ದರು. ಇದು ಚರ್ಚೆಗೆ ಕಾರಣ ಆಗಿದೆ.ಅವಮಾನ ತಪ್ಪಿಸಿಕೊಳ್ಳಲು ಹೀಗೆ ಮಾಡಿರಬಹುದು ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.