Tiger 3: ಕತ್ರಿನಾ ಕೈಫ್​ ಟವೆಲ್​ ಫೈಟ್​ ಸೀನ್​ ಚೆನ್ನಾಗಿದೆ; ಆದರೆ ಅದರ ಹಿಂದಿನ ಕಷ್ಟ ಅವರಿಗೆ ಮಾತ್ರ ಗೊತ್ತು

Katrina Kaif: ‘ಟೈಗರ್​ 3’ ಸಿನಿಮಾದಲ್ಲಿನ ಜೋಯಾ ಎಂಬ ಪಾತ್ರಕ್ಕಾಗಿ ಕತ್ರಿನಾ ಕೈಫ್​ ಅವರು ಹಲವು ದಿನಗಳ ಕಾಲ ತಯಾರಿ ನಡೆಸಿದ್ದಾರೆ. ಕಷ್ಟ ಆದರೂ ಕೂಡ ಪುರುಷರ ರೀತಿ ಅವರು ಟ್ರೇನಿಂಗ್​ ಪಡೆದುಕೊಂಡಿದ್ದಾರೆ. ಅದರ ತಯಾರಿ ಹೇಗಿತ್ತು ಎಂಬುದನ್ನು ತಿಳಿಸಲು ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾಗೆ ಸಲ್ಮಾನ್​ ಖಾನ್​ ಹೀರೋ.

Tiger 3: ಕತ್ರಿನಾ ಕೈಫ್​ ಟವೆಲ್​ ಫೈಟ್​ ಸೀನ್​ ಚೆನ್ನಾಗಿದೆ; ಆದರೆ ಅದರ ಹಿಂದಿನ ಕಷ್ಟ ಅವರಿಗೆ ಮಾತ್ರ ಗೊತ್ತು
ಕತ್ರಿನಾ ಕೈಫ್​

Updated on: Nov 06, 2023 | 3:11 PM

ನಟಿ ಕತ್ರಿನಾ ಕೈಫ್​ (Katrina Kaif) ಅವರಿಗೆ ಆ್ಯಕ್ಷನ್​ ಸನ್ನಿವೇಶಗಳು ಹೊಸದೇನೂ ಅಲ್ಲ. ಪ್ರತಿ ಬಾರಿ ಅವರು ಸಾಹಸ ದೃಶ್ಯಗಳಲ್ಲಿ ನಟಿಸುವಾಗ ಸಾಕಷ್ಟು ತರಬೇತಿ ಪಡೆಯುತ್ತಾರೆ. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಸುಧಾರಣೆ ಕಾಣಬೇಕು ಎಂಬುದು ಅವರ ಗುರಿ. ಈಗ ಅವರು ‘ಟೈಗರ್​ 3’ (Tiger 3) ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಈ ಸಿನಿಮಾಗೆ ಸಲ್ಮಾನ್​ ಖಾನ್​ (Salman Khan) ಹೀರೋ. ಅವರ ಜೊತೆಗೆ ಕತ್ರಿನಾ ಕೈಫ್​ ಕೂಡ ಭರ್ಜರಿ ಆ್ಯಕ್ಷನ್​ ಮೆರೆದಿದ್ದಾರೆ. ಅದರ ಝಲಕ್​ ಹೇಗಿರಲಿದೆ ಎಂಬುದು ಟ್ರೇಲರ್​ನಲ್ಲಿ ಗೊತ್ತಾಗಿದೆ. ಅದರಲ್ಲೂ ಕತ್ರಿನಾ ಕೈಫ್​ ಮಾಡಿರುವ ಟವೆಲ್​ ಫೈಟ್​ ಭಾರಿ ಕೌತುಕ ಮೂಡಿಸಿದೆ. ಅದರ ಹಿಂದೆ ಎಷ್ಟೆಲ್ಲ ಕಷ್ಟ ಇತ್ತು ಎಂಬುದನ್ನು ಅವರೀಗ ಸೋಶಿಯಲ್​ ಮೀಡಿಯಾದಲ್ಲಿ ವಿವರಿಸಿದ್ದಾರೆ.

ಹೀರೋಗಳು ಪ್ರತಿ ಸಿನಿಮಾದಲ್ಲೂ ಫೈಟಿಂಗ್ ಮಾಡುತ್ತಾರೆ. ಹಾಗಾಗಿ ಅವರಿಗೆ ಪ್ರತಿ ಬಾರಿಯೂ ಹೊಸದಾಗಿ ತರಬೇತಿ ನೀಡುವ ಅವಶ್ಯಕತೆ ಇರುವುದಿಲ್ಲ. ಅದಕ್ಕೆ ಅವರು ಒಗ್ಗಿಕೊಂಡಿರುತ್ತಾರೆ. ಆದರೆ ನಟಿಯರಿಗೆ ಫೈಟ್​ ಮಾಡುವ ಅವಕಾಶ ಸಿಗುವುದು ಅಪರೂಪ. ಆಗ ಅವರು ಹೊಸದಾಗಿ ಟ್ರೇನಿಂಗ್ ಪಡೆಯಬೇಕಾಗುತ್ತದೆ. ‘ಏಕ್​ ಥ ಟೈಗರ್​’, ‘ಟೈಗರ್​ ಜಿಂದಾ ಹೈ’ ಸಿನಿಮಾಗಳ ಯಶಸ್ಸಿನ ಬಳಿಕ ‘ಟೈಗರ್​ 3’ ಬರುತ್ತಿರುವುದರಿಂದ ಜನರಿಗೆ ಸಖತ್​ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆಯೇ ಸಾಹಸ ದೃಶ್ಯಗಳು ಮೂಡಿಬರಬೇಕಾಗುತ್ತದೆ. ಅದಕ್ಕಾಗಿ ಕತ್ರಿನಾ ಕೈಫ್​ ಅವರು ತುಂಬ ಕಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ಕಲರ್​ಫುಲ್​ ಬಟ್ಟೆ ಧರಿಸಿ ‘ಟೈಗರ್​ 3’ ಸಿನಿಮಾದ ರಂಗು ಹೆಚ್ಚಿಸಿದ ಕತ್ರಿನಾ ಕೈಫ್​

‘ಟೈಗರ್​ 3’ ಸಿನಿಮಾದ ಜೋಯಾ ಎಂಬ ಪಾತ್ರಕ್ಕಾಗಿ ಕತ್ರಿನಾ ಕೈಫ್​ ಅವರು ಹಲವು ದಿನಗಳ ಕಾಲ ತಯಾರಿ ನಡೆಸಿದ್ದಾರೆ. ಕಷ್ಟ ಆದರೂ ಕೂಡ ಪುರುಷರ ರೀತಿ ಟ್ರೇನಿಂಗ್​ ಪಡೆದುಕೊಂಡಿದ್ದಾರೆ. ಅದರ ತಯಾರಿ ಹೇಗಿತ್ತು ಎಂಬುದನ್ನು ತಿಳಿಸಲು ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ತೆರೆಹಿಂದೆ ಅವರು ಎಷ್ಟೆಲ್ಲ ಶ್ರಮ ವಹಿಸುತ್ತಾರೆ ಎಂಬುದಕ್ಕೆ ಈ ವಿಡಿಯೋಗಳೇ ಸಾಕ್ಷಿ ಆಗಿವೆ. ಅವರ ಈ ಪರಿಶ್ರಮಕ್ಕೆ ಅಭಿಮಾನಿಗಳಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದುನೋಡಬೇಕು. ಆ ಸಮಯ ಕೂಡ ಹತ್ತಿರವಾಗಿದೆ.

ನವೆಂಬರ್​ 12ರಂದು ‘ಟೈಗರ್​ 3’ ಸಿನಿಮಾ ಬಿಡುಗಡೆ ಆಗಲಿದೆ. ಮುಂಬೈನಲ್ಲಿ ಮುಂಜಾನೆ 6 ಗಂಟೆ ಶೋ ಆರಂಭ ಆಗಲಿದೆ. ಈ ಸಿನಿಮಾದ ಮೂಲಕ ಸಲ್ಮಾನ್​ ಖಾನ್ ಅವರಿಗೆ ಬಹುದೊಡ್ಡ ಗೆಲುವು ಸಿಗುವ ಸಾಧ್ಯತೆ ಇದೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡುತ್ತಾ ಎಂಬ ಕೌತುಕ ಎಲ್ಲರಲ್ಲೂ ಮೂಡಿದೆ. ಈಗಾಗಲೇ ಶಾರುಖ್​ ಖಾನ್​ ನಟನೆಯ ‘ಪಠಾಣ್’, ‘ಜವಾನ್​’ ಸಿನಿಮಾಗಳು ಈ ಸಾಧನೆ ಮಾಡಿರುವುದರಿಂದ ಬಾಲಿವುಡ್​ ಹೀರೋಗಳಿಗೆ ಹೊಸ ಟಾರ್ಗೆಟ್​ ಫಿಕ್ಸ್​ ಆದಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us