ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ರಿಲೇಶನ್ಶಿಪ್ನಲ್ಲಿದ್ದಾರೆ ಎನ್ನುವ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಈ ವದಂತಿಯನ್ನು ನಂಬುವ ರೀತಿಯಲ್ಲಿ ಸಾಕಷ್ಟು ಘಟನೆಗಳು ನಡೆದವು. ಹೀಗಾಗಿ, ಅಭಿಮಾನಿಗಳು ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಭಾವಿಸಿದ್ದರು. ಇದಕ್ಕೆ ಕಿಯಾರಾ ಈಗ ಸ್ಪಷ್ಟನೆ ನೀಡಿದ್ದಾರೆ.
ಕಿಯಾರಾ ಹಾಗೂ ಸಿದ್ಧಾರ್ಥ್ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇನ್ನು, ಕಿಯಾರಾ ಅವರು ಸಿದ್ಧಾರ್ಥ್ ಪಾಲಕರನ್ನು ಭೇಟಿ ಮಾಡಿದ್ದರು. ಈ ಭೇಟಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಈ ಘಟನೆ ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹುಟ್ಟಿಕೊಳ್ಳಲು ಆರಂಭಿಸಿದವು. ಆದರೆ, ಈ ಬಗ್ಗೆ ಕಿಯಾರಾ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ, ಈಗ ಈ ವಿಚಾರದಲ್ಲಿ ಅವರಿಗೆ ಮೌನ ವಹಿಸೋಕೆ ಸಾಧ್ಯವಾಗಿಲ್ಲ.
ಇತ್ತೀಚೆಗೆ ಕಿಯಾರಾ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಈ ವಿಚಾರದ ಬಗ್ಗೆ ಮತ್ತೆ ಪ್ರಶ್ನಿಸಲಾಯಿತು. ಇದಕ್ಕೆ ಕಿಯಾರಾ ಉತ್ತರ ನೀಡಿದ್ದಾರೆ. ನಾವಿಬ್ಬರೂ ಉತ್ತಮ ಗೆಳೆಯರಷ್ಟೇ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮದುವೆ ಬಗ್ಗೆ ಕಿಯಾರಾ ತಮ್ಮದೇ ಆದ ಕಲ್ಪನೆ ಇಟ್ಟುಕೊಂಡಿದ್ದಾರೆ. ‘ನಾನು ಅರೇಂಜ್ ಮ್ಯಾರೇಜ್ ಆಗುವುದಿಲ್ಲ. ನಾನು ಆಗುವುದಾದರೆ ಅದು ಲವ್ ಮ್ಯಾರೇಜ್ ಮಾತ್ರ’ ಎಂದಿದ್ದಾರೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಬಾಲಿವುಡ್ನ ಬಹುಬೇಡಿಕೆಯ ನಟಿಯರಲ್ಲಿ ಕಿಯಾರಾ ಅಡ್ವಾಣಿ ಕೂಡ ಪ್ರಮುಖರು. ಹಲವು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಎಂ.ಎಸ್. ಧೋನಿ: ಅನ್ಟೋಲ್ಡ್ ಸ್ಟೋರಿ, ಕಬೀರ್ ಸಿಂಗ್, ಗುಡ್ ನ್ಯೂಸ್, ಲಕ್ಷ್ಮೀ ಮುಂತಾದ ಚಿತ್ರಗಳಿಂದ ಅವರಿಗೆ ಭಾರಿ ಯಶಸ್ಸು ಸಿಕ್ಕಿದೆ. ಲಸ್ಟ್ ಸ್ಟೋರೀಸ್ ವೆಬ್ ಸರಣಿ ಮೂಲಕವೂ ಅವರ ಜನಪ್ರಿಯತೆ ಹೆಚ್ಚಿತು. ಈ ಬಾಲಿವುಡ್ ಬೆಡಗಿಗೆ ದಕ್ಷಿಣ ಭಾರತದಲ್ಲೂ ಸಖತ್ ಡಿಮ್ಯಾಂಡ್ ಇದೆ. ತೆಲುಗಿನ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಅವರಿಗೆ ಇತ್ತೀಚೆಗೆ ಬಂಪರ್ ಆಫರ್ ಸಿಕ್ಕಿತ್ತು. ನಟ ರಾಮ್ ಚರಣ್ ಮತ್ತು ನಿರ್ದೇಶಕ ಶಂಕರ್ ಕಾಂಬಿನೇಷನ್ನ ಹೊಸ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಬಗ್ಗೆ ಅಪ್ಸೆಟ್ ಆದ ಕುಟುಂಬದವರು; ಸಂದರ್ಶನದಲ್ಲಿ ಅಳಲು ತೋಡಿಕೊಂಡ ನಟಿ