Kiara Advani: ಬದಲಾಗಿ ಹೋಯಿತು ಕಿಯಾರಾ ಅಡ್ವಾಣಿ ವೃತ್ತಿ ಬದುಕು; ದಕ್ಷಿಣದ ಸ್ಟಾರ್​ ಹೀರೋಗೆ ನಾಯಕಿ

‘ಬ್ರಹ್ಮಾಸ್ತ್ರ’ ಮೂಲಕ ಫೇಮಸ್ ಆದ ಅಯಾನ್​ ಮುಖರ್ಜಿ ಅವರು ‘ವಾರ್ 2’ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈಗ ಚಿತ್ರಕ್ಕೆ ನಾಯಕಿ ಫೈನಲ್ ಆಗಿದ್ದಾರೆ.

Kiara Advani: ಬದಲಾಗಿ ಹೋಯಿತು ಕಿಯಾರಾ ಅಡ್ವಾಣಿ ವೃತ್ತಿ ಬದುಕು; ದಕ್ಷಿಣದ ಸ್ಟಾರ್​ ಹೀರೋಗೆ ನಾಯಕಿ
ಕಿಯಾರಾ

Updated on: Jun 17, 2023 | 7:11 AM

ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ದಕ್ಷಿಣ ಭಾರತದ ಚಿತ್ರರಂಗ ಹಾಗೂ ಬಾಲಿವುಡ್ ಎರಡೂ ಕಡೆಗಳಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಕಾದು ನಿಲ್ಲುತ್ತಾರೆ. ಆದರೆ, ಅಷ್ಟು ಸುಲಭಕ್ಕೆ ಅವರು ಡೇಟ್ಸ್​ ಕೊಡುವುದಿಲ್ಲ. ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಈಗ ಕಿಯಾರಾಗೆ ಬಂಪರ್ ಆಫರ್ ಸಿಕ್ಕಿದೆ ಎನ್ನಲಾಗುತ್ತಿದೆ. ಜೂ.ಎನ್​ಟಿಆರ್ (JR.Ntr) ಹಾಗೂ ಹೃತಿಕ್ ರೋಷನ್ ನಟಿಸುತ್ತಿರುವ ‘ವಾರ್ 2’ ಚಿತ್ರಕ್ಕೆ ಕಿಯಾರಾ ನಾಯಕಿ ಆಗಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಸಿದ್ದಾರ್ಥ್ ಆನಂದ್ ನಟನೆಯ ‘ವಾರ್​’ ಸಿನಿಮಾ ಸೂಪರ್ ಹಿಟ್ ಆಯಿತು. ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಯಶ್ ರಾಜ್ ಫಿಲ್ಮ್ಸ್​ನ ಸ್ಪೈ ಯೂನಿವರ್ಸ್​ ಅಡಿಯಲ್ಲಿ ಈ ಸಿನಿಮಾ ಮೂಡಿಬಂದಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ‘ಬ್ರಹ್ಮಾಸ್ತ್ರ’ ಮೂಲಕ ಫೇಮಸ್ ಆದ ಅಯಾನ್​ ಮುಖರ್ಜಿ ಅವರು ‘ವಾರ್ 2’ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈಗ ಚಿತ್ರಕ್ಕೆ ನಾಯಕಿ ಫೈನಲ್ ಆಗಿದ್ದಾರೆ.

ಸಾಮಾನ್ಯವಾಗಿ ಮಲ್ಟಿ ಸ್ಟಾರರ್ ಸಿನಿಮಾ ಆದಾಗ ಒಂದಕ್ಕಿಂತ ಹೆಚ್ಚು ಹೀರೋಯಿನ್​ಗಳು ಸಿನಿಮಾ ತಂಡ ಸೇರಿಕೊಳ್ಳುತ್ತಾರೆ. ಹೀಗಾಗಿ, ಕಿಯಾರಾ ಜೊತೆ ಮತ್ತೋರ್ವ ನಾಯಕಿ ಸಿನಿಮಾ ತಂಡ ಸೇರಿಕೊಳ್ಳಬಹುದು ಎಂಬುದು ಕೆಲವರ ಊಹೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ.

ಕಿಯಾರಾ ಅಡ್ವಾಣಿಗೆ ಇತ್ತೀಚಿನ ವರ್ಷಗಳಲ್ಲಿ ಅದೃಷ್ಟ ಕೈ ಹಿಡಿದಿದೆ. ಬ್ಯಾಕ್​ ಟು ಬ್ಯಾಕ್ ಯಶಸ್ಸು ಕಾಣುತ್ತಿದ್ದಾರೆ. 2021ರ ‘ಶೇರ್ಷಾ’, ನಂತರ ರಿಲೀಸ್ ಆದ ‘ಭೂಲ್​ ಭುಲಯ್ಯ 2’, ‘ಜುಗ್​ಜುಗ್ ಜಿಯೋ’ ಸಿನಿಮಾಗಳು ಯಶಸ್ಸು ಕಂಡವು. ಕಾರ್ತಿಕ್ ಆರ್ಯನ್ ನಟನೆಯ ‘ಸತ್ಯಪ್ರೇಮ್​ ಕಿ ಕಥಾ’ ಹಾಗೂ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾಗಳಲ್ಲಿ ಕಿಯಾರಾ ನಟಿಸುತ್ತಿದ್ದಾರೆ. ಈ ಚಿತ್ರಗಳು ಯಶಸ್ಸು ಕಾಣಲಿ ಎಂಬುದು ಫ್ಯಾನ್ಸ್ ಬಯಕೆ.

ಇದನ್ನೂ ಓದಿ: ಮದುವೆ ಬಳಿಕ ಐಷಾರಾಮಿ ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾಣಿ; ಇದರ ಬೆಲೆ ಇಷ್ಟೊಂದಾ?

‘ವಾರ್ 2’ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ‘ಬ್ರಹ್ಮಾಸ್ತ್ರ 2’ ಶೂಟಿಂಗ್​ಗೂ ಮೊದಲು ಅಯಾನ್ ಅವರು ‘ವಾರ್ 2’ ಚಿತ್ರ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರದಲ್ಲಿ ನಿರ್ಮಾಪಕ ಕರಣ್ ಜೋಹರ್ ಹಾಗೂ ಅಯಾನ್ ಮಧ್ಯೆ ಮನಸ್ತಾಪ ಉಂಟಾಗಿತ್ತು ಎನ್ನುವ ಮಾತು ಕೇಳಿ ಬಂದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us