ಬಾಕ್ಸ್ ಆಫೀಸ್‌ನಲ್ಲಿ ಪತಿ-ಪತ್ನಿ ಮಧ್ಯೆಯೇ ಬಿಗ್ ಕ್ಲ್ಯಾಶ್? ಕಿಯಾರಾ-ಸಿದ್ದಾರ್ಥ್ ಸಿನಿಮಾಗಳು ಒಟ್ಟಿಗೆ ರಿಲೀಸ್

ಬಾಲಿವುಡ್ ಸ್ಟಾರ್ ಕಪಲ್ ಕಿಯಾರಾ ಅಡ್ವಾಣಿ (ಟಾಕ್ಸಿಕ್) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (ವನ್) ಚಿತ್ರಗಳ ಬಾಕ್ಸ್ ಆಫೀಸ್ ಮುಖಾಮುಖಿ ಕುರಿತು ಭಾರಿ ಕುತೂಹಲವಿತ್ತು. ಯಶ್ ಅಭಿನಯದ 'ಟಾಕ್ಸಿಕ್' ಆಗಸ್ಟ್ 26ಕ್ಕೆ ಬರಲಿದ್ದರೆ, ಸಿದ್ಧಾರ್ಥ್ ಅವರ 'ವನ್' ಆಗಸ್ಟ್ 28ಕ್ಕೆ ನಿಗದಿಯಾಗಿತ್ತು. ಆದರೆ, ಸಿದ್ಧಾರ್ಥ್ ಚಿತ್ರ ಮುಂದೂಡುವ ಸಾಧ್ಯತೆಯಿದ್ದು, 'ಟಾಕ್ಸಿಕ್' ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಸೋಲೋ ರನ್ ಸಿಗುವ ನಿರೀಕ್ಷೆ ಇದೆ.

ಬಾಕ್ಸ್ ಆಫೀಸ್‌ನಲ್ಲಿ ಪತಿ-ಪತ್ನಿ ಮಧ್ಯೆಯೇ ಬಿಗ್ ಕ್ಲ್ಯಾಶ್? ಕಿಯಾರಾ-ಸಿದ್ದಾರ್ಥ್ ಸಿನಿಮಾಗಳು ಒಟ್ಟಿಗೆ ರಿಲೀಸ್
ಕಿಯಾರಾ-ಸಿದ್ದಾರ್ಥ್

Updated on: Jun 22, 2026 | 8:32 AM

ಸಿನಿಮಾ ರಂಗದಲ್ಲಿ ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಮುಖಾಮುಖಿಯಾಗುವುದು ಹೊಸದೇನಲ್ಲ. ಆದರೆ ಈ ಬಾರಿ ಬಾಲಿವುಡ್‌ನ ಕ್ಯೂಟ್ ಕಪಲ್ ಬಾಕ್ಸ್ ಆಫೀಸ್​​ನಲ್ಲಿ ಮುಖಾ ಮುಖಿ ಆಗತ್ತಿದ್ದಾರೆ. ಇಬ್ಬರೂ ನೇರ ಹಣಾಹಣಿಗೆ ಇಳಿಯುವ ಮುನ್ಸೂಚನೆ ಸಿಕ್ಕಿದ್ದು, ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆ ದಂಪತಿ ಬೇರೆ ಯಾರೂ ಅಲ್ಲ, ಕಿಯಾರಾ ಅಡ್ವಾಣಿ (Kiara Advani) ಹಾಗೂ ಸಿದ್ದಾರ್ಥ್ ಮಲ್ಹೋತ್ರ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಅನೌನ್ಸ್ ಆಗಿದೆ. ಈ ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ‘ಟಾಕ್ಸಿಕ್’ ಸಿನಿಮಾ ಇದೇ ಆಗಸ್ಟ್ 26ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಟ್ವಿಸ್ಟ್ ಏನೆಂದರೆ, ಕಿಯಾರಾ ಅಡ್ವಾಣಿ ಅವರ ಪತಿ, ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ‘ವನ್’ ಸಿನಿಮಾ ಕೂಡ ಆಗಸ್ಟ್ 28 ಬಿಡುಗಡೆಯಾಗಲಿದೆ. ಈಗಾಗಲೇ ತಂಡ ದಿನಾಂಕವನ್ನು ಲಾಕ್ ಮಾಡಿಕೊಂಡಿದೆ. ಹೀಗಾಗಿ, ಕೇವಲ ಎರಡು ದಿನಗಳ ಅಂತರದಲ್ಲಿ ಈ ಎರಡೂ ಸಿನಿಮಾಗಳು ತೆರೆಗೆ ಬರುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಪತಿ-ಪತ್ನಿ ಮಧ್ಯೆಯೇ ದೊಡ್ಡ ಫೈಟ್ ನಡೆಯಲಿದೆ ಎಂದು ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದರು.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರವನ್ನು ಹಾಡಿಹೊಗಳಿದ ಕಿಯಾರಾ ಅಡ್ವಾಣಿ; ಹೆಚ್ಚಿತು ನಿರೀಕ್ಷೆ

ಆದರೆ, ಸದ್ಯ ಕೇಳಿಬರುತ್ತಿರುವ ಇತ್ತೀಚಿನ ವರದಿಗಳ ಪ್ರಕಾರ ಈ ಬಾಕ್ಸ್ ಆಫೀಸ್ ಮುಖಾಮುಖಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಸಿದ್ದಾರ್ಥ್ ಮಲ್ಹೋತ್ರಾ ಅವರ ‘ವನ್’ ಸಿನಿಮಾ ನಿಗದಿತ ದಿನಾಂಕಕ್ಕಿಂತ ಕೊಂಚ ಮುಂದಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ. ಒಂದು ವೇಳೆ ‘ವನ್’ ಸಿನಿಮಾ ಪೋಸ್ಟ್‌ಪೋನ್ ಆದಲ್ಲಿ, ಆಗಸ್ಟ್ ಕೊನೆಯ ವಾರದಲ್ಲಿ ಕಿಯಾರಾ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಸೋಲೋ ರನ್ ಸಿಗುವುದು ಪಕ್ಕಾ ಆದಂತಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us