
ನಟ ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್ನ ಬೇಡಿಕೆಯ ಹೀರೋಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಕೊವಿಡ್ ಸಂದರ್ಭದಲ್ಲಿ ರಿಲೀಸ್ ಆದ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಬೆಳೆ ತೆಗೆಯಲು ವಿಫಲವಾದವು. ಈಗ ಕೊವಿಡ್ ಕಡಿಮೆ ಆಗಿ ಸಿನಿಮಾಗಳು ಒಳ್ಳೆಯ ಬಿಸ್ನೆಸ್ ಮಾಡುತ್ತಿವೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರ ಸಿನಿಮಾ ರಿಲೀಸ್ ಆಗುತ್ತಿದೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರ (Kisi Ka Bhai Kisi Ki Jaan) ಏಪ್ರಿಲ್ 21ರಂದು ತೆರೆಗೆ ಬರಲಿದೆ. ಅದಕ್ಕೂ ಮೊದಲು ಸಿನಿಮಾ ತಂಡ ಟ್ರೇಲರ್ ರಿಲೀಸ್ ಮಾಡಿದೆ. ಇದರಲ್ಲಿ ಸಲ್ಲು ಸಿಕ್ಸ್ ಪ್ಯಾಕ್ನಲ್ಲಿ ಮಿಂಚಿದ್ದಾರೆ. ಕೆಲವರು ಇದನ್ನು ವಿಎಫ್ಎಕ್ಸ್ ಎಂದು ಕರೆದಿದ್ದಾರೆ. ಅವರಿಗೆ ಸಲ್ಲು ವೇದಿಕೆ ಮೇಲೆ ಉತ್ತರ ನೀಡಿದ್ದಾರೆ.
ಸಲ್ಮಾನ್ ಖಾನ್ ಅವರು ವರ್ಕೌಟ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ವಯಸ್ಸು 57 ದಾಟಿದರೂ ಅವರು ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಈ ವಯಸ್ಸಿನಲ್ಲೂ ಅವರು ಜಿಮ್ನಲ್ಲಿ ಸಮಯ ಕಳೆಯುತ್ತಾರೆ. ಈ ಕಾರಣಕ್ಕೆ ಅವರು ಬಾಡಿಯನ್ನು ಉತ್ತಮವಾಗಿ ಕಾಯ್ದುಕೊಂಡಿದ್ದಾರೆ. ಆದರೆ, ಕೆಲವರಿಗೆ ಈ ಬಗ್ಗೆ ಅನುಮಾನ ಇದೆ. ವೇದಿಕೆ ಮೇಲೆ ಈ ಅನುಮಾನವನ್ನು ಸಲ್ಮಾನ್ ಖಾನ್ ಬಗೆಹರಿಸಿದ್ದಾರೆ.
ಏಪ್ರಿಲ್ 10 ರಂದು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನು ಮುಂಬೈನಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಸಲ್ಮಾನ್ ಖಾನ್, ಚಿತ್ರದ ನಾಯಕಿ ಪೂಜಾ ಹೆಗ್ಡೆ ಮೊದಲಾದವರು ವೇದಿಕೆ ಏರಿದರು. ಸಿನಿಮಾದಲ್ಲಿ ಬರುವ ಸಲ್ಲು ಸಿಕ್ಸ್ ಪ್ಯಾಕ್ ಉದ್ದೇಶಿಸಿ ಕೆಲವರು ಇದನ್ನು ವಿಎಫ್ಎಕ್ಸ್ ಎಂದು ಕರೆದರು. ಹೀಗಾಗಿ ಸಲ್ಲು ವೇದಿಕೆ ಮೇಲೆ ಶರ್ಟ್ ಓಪನ್ ಮಾಡಿ ತೋರಿಸಿದ್ದಾರೆ. ಈ ಮೂಲಕ ಶ್ರಮವಹಿಸಿ ಮಾಡಿದ ದೇಹ ಎಂಬುದನ್ನು ಸಾಬೀತು ಮಾಡಿದ್ದಾರೆ.
ಇದನ್ನೂ ಓದಿ: Salman Khan: ಈದ್ಗೆ ಸಲ್ಮಾನ್ ಖಾನ್ ಕಡೆಯಿಂದ ಮನರಂಜನೆಯ ರಸದೌತಣ; ಇಲ್ಲಿದೆ ನೋಡಿ ಸ್ಯಾಂಪಲ್
‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ದಕ್ಷಿಣ ಭಾರತದ ಪ್ರೇಕ್ಷಕರನ್ನೂ ಸೆಳೆಯುವ ಪ್ರಯತ್ನ ಕೂಡ ಆಗಿದೆ. ತೆಲುಗಿನ ಸ್ಟಾರ್ ನಟ ದಗ್ಗುಬಾಟಿ ವೆಂಕಟೇಶ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ, ಜಗಪತಿ ಬಾಬು ಅವರು ಖಳನಾಯಕನಾಗಿ ಅಬ್ಬರಿಸಿದ್ದಾರೆ. ತೆಲುಗು ಹುಡುಗಿ ಪಾತ್ರದಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ‘ಯೆಂಟಮ್ಮಾ..’ ಹಾಡಿನಲ್ಲಿ ರಾಮ್ ಚರಣ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಈ ಸಿನಿಮಾ ಹೈಪ್ ಪಡೆದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:15 am, Tue, 11 April 23