
ನಟ ಆಮಿರ್ ಖಾನ್ (Aamir Khan) ಅವರು ಬಾಲಿವುಡ್ನಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅವರು ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳ ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರತಿ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕುತ್ತಾರೆ. ಈಗ ಅವರ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ತೆರೆಗೆ ಬರಲು ರೆಡಿ ಇದೆ. ಹಾಲಿವುಡ್ನ ‘ಫಾರೆಸ್ಟ್ ಗಂಪ್’ (Forrest Gump) ಚಿತ್ರದ ರಿಮೇಕ್ ಇದಾಗಿದೆ. ತುಂಬಾನೇ ಇಷ್ಟಪಟ್ಟು ಆಮಿರ್ ಖಾನ್ ಅವರು ಈ ಚಿತ್ರವನ್ನು ರಿಮೇಕ್ ಮಾಡಿದ್ದಾರೆ. ಈಗ ಈ ಚಿತ್ರ ತೆರೆಗೆ ಬರುವುದಕ್ಕೂ ಮೊದಲು ಸೆಲೆಬ್ರಿಟಿಗಳಿಗೋಸ್ಕರ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಸ್ಟಾರ್ಗಳು ನೀಡಿದ ಪ್ರತಿಕ್ರಿಯೆ ನೋಡಿ ಆಮಿರ್ ಖಾನ್ ಅತ್ತಿದ್ದಾರೆ.
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಟಾಲಿವುಡ್ ನಟ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಆಮಿರ್ ಖಾನ್ಗೂ ದಕ್ಷಿಣದ ಚಿತ್ರರಂಗಕ್ಕೂ ಇರುವ ನಂಟು ಮತ್ತಷ್ಟು ಗಟ್ಟಿ ಆಗಿದೆ. ನಾಗ ಚೈತನ್ಯ ಅವರ ‘ಲವ್ ಸ್ಟೋರಿ’ ಸಿನಿಮಾ ರಿಲೀಸ್ಗೂ ಮೊದಲು ಆಯೋಜಿಸಿದ ಪ್ರೀ-ರಿಲೀಸ್ ಇವೆಂಟ್ಗೆ ಆಮಿರ್ ಖಾನ್ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಈಗ ದಕ್ಷಿಣದ ಸ್ಟಾರ್ಗಳಿಗೆ ಆಮಿರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಪ್ರದರ್ಶನ ಮಾಡಿದ್ದಾರೆ.
ನಾಗ ಚೈತನ್ಯ, ನಾಗಾರ್ಜುನ, ನಿರ್ದೇಶಕ ಎಸ್.ಎಸ್. ರಾಜಮೌಳಿ, ಚಿರಂಜೀವಿ, ‘ಪುಷ್ಪ’ ನಿರ್ದೇಶಕ ಸುಕುಮಾರ್ ಅವರು ಈ ಸ್ಪೆಷಲ್ ಶೋನಲ್ಲಿ ಪಾಲ್ಗೊಂಡಿದ್ದರು. ಈ ಸಿನಿಮಾ ನೋಡಿದ ನಂತರದಲ್ಲಿ ಚಿರಂಜೀವಿ ಅವರು ಆಮಿರ್ ಖಾನ್ ಅವರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಆಮಿರ್ ಖಾನ್ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ಮಗಳಿಗೆ ನಿರಂತರವಾಗಿ ಕಾಡುತ್ತಿದೆ ಈ ಸಮಸ್ಯೆ; ಹೊರ ಬರಲು ದಾರಿ ಕಾಣದೆ ಒದ್ದಾಡುತ್ತಿದ್ದಾರೆ ಇರಾ
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಕೆಲಸ ಆರಂಭಗೊಂಡು ಹಲವು ವರ್ಷಗಳೇ ಕಳೆದಿವೆ. ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ಸಾಕಷ್ಟು ಬಾರಿ ಮುಂದೂಡಲ್ಪಟ್ಟಿದೆ. ಈಗ ಆಗಸ್ಟ್ 11ರಂದು ಈ ಚಿತ್ರ ಬಿಡುಗಡೆ ಆಗುತ್ತಿದೆ. ಕರೀನಾ ಕಪೂರ್ ಅವರು ಈ ಚಿತ್ರಕ್ಕೆ ನಾಯಕಿ. ಇದೇ ದಿನ ಅಕ್ಷಯ್ ಕುಮಾರ್ ನಟನೆಯ ‘ರಕ್ಷಾ ಬಂಧನ್’ ಸಿನಿಮಾ ತೆರೆಗೆ ಬರುತ್ತಿದೆ. ಹೀಗಾಗಿ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕ್ಲ್ಯಾಶ್ ಏರ್ಪಡುತ್ತಿದೆ.