ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾಗಿರುವ ಫಿಲಂ ಫೇರ್ 69ನೇ ಫಿಲಂ ಪ್ರಶಸ್ತಿ ವಿಜೇತರ ಪಟ್ಟಿ ಘೋಷಣೆ ಮಾಡಿದೆ. 2023 ರಲ್ಲಿ ಬಿಡುಗಡೆ ಆದ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದ್ದು, ಹಲವು ‘ಜನಪ್ರಿಯ’ ಸಿನಿಮಾಗಳು ಮತ್ತು ನಟ-ನಟಿಯರು ಪ್ರಶಸ್ತಿ ಗೆದ್ದಿರುವುದಾಗಿ ಫಿಲಂ ಫೇರ್ ಘೋಷಿಸಿದ್ದು ಪಟ್ಟಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಪತಿ-ಪತ್ನಿಯರಾದ ರಣ್ಬೀರ್ ಹಾಗೂ ಆಲಿಯಾ ಕ್ರಮವಾಗಿ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. 2023ರಲ್ಲಿ ಮೂರು ಹಿಟ್ ದೊಡ್ಡ ಹಿಟ್ ನೀಡಿದ ಶಾರುಖ್ ಖಾನ್ಗೆ ಯಾವುದೇ ಪ್ರಶಸ್ತಿ ಬಂದಿಲ್ಲ. 69ನೇ ಫಿಲಂ ಫೇರ್ ಗೆದ್ದವರ ಪಟ್ಟಿ ಇಂತಿದೆ.
ಅತ್ಯುತ್ತಮ ನಟ- ರಣ್ಬೀರ್ ಕಪೂರ್ (ಅನಿಮಲ್)
ಅತ್ಯುತ್ತಮ ನಟಿ- ಆಲಿಯಾ ಭಟ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಸಿನಿಮಾ- 12ತ್ ಫೇಲ್
ಅತ್ಯುತ್ತಮ ನಿರ್ದೇಶಕ-ವಿದು ವಿನೋದ್ ಚೋಪ್ರಾ
ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ- ವಿಕ್ರಾಂತ್ ಮೆಸ್ಸಿ (12 ಫೇಲ್)
ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ- ರಾಣಿ ಮುಖರ್ಜಿ (ಮಿಸ್ ಚಟರ್ಜಿ vs ನಾರ್ವೆ)
ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ- ಶಫಾಲಿ ಶಾ (ಥ್ರೀ ಆಫ್ ಅಸ್)
ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ- ಜೋರಮ್
ಅತ್ಯುತ್ತಮ ಪೋಷಕ ನಟ- ವಿಕ್ಕಿ ಕೌಶಲ್ (ಡಂಕಿ)
ಅತ್ಯುತ್ತಮ ಪೋಷಕ ನಟಿ- ಶಬಾನಾ ಅಜ್ಮಿ (ರಾಕಿ ಔರ್ ರಾಣಿ ಪ್ರೇಮ್ ಕಹಾನಿ)
ಅತ್ಯುತ್ತಮ ಹೊಸ ನಿರ್ದೇಶಕ- ತರುಣ್ ಡುಡೇಜ (ಧಕ್-ಧಕ್)
ಅತ್ಯುತ್ತಮ ಹೊಸ ನಟಿ- ಅಲಿಜಾ ಅಗ್ನಿಹೋತ್ರಿ (ಫರ್ರಿ)
ಅತ್ಯುತ್ತಮ ಹೊಸ ನಟ- ಆದಿತ್ಯ ರಾವಲ್ (ಫರಾಜ್)
ಅತ್ಯುತ್ತಮ ಹಿನ್ನೆಲೆ ಗಾಯಕ- ಭುಪೀಂದರ್ ಬಾದಲ್ (ಅರ್ಜುನ್ ವೆಲ್ಲೆಯ-ಅನಿಮಲ್)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಶಿಲ್ಪಾ ರಾವ್ (ಬೇಷರಮ್ ರಂಗ್-ಪಠಾಣ್)
ಅತ್ಯುತ್ತಮ ಹಾಡುಗಳ ಗುಚ್ಛ- ಅನಿಮಲ್
ಅತ್ಯುತ್ತಮ ಗೀತ ಸಾಹಿತ್ಯ- ಅಮಿತಾಬ್ ಭಟ್ಟಾಚಾರ್ಯ (ತೇರೆ ವಾಸ್ತೆ)
ಅತ್ಯುತ್ತಮ ಚಿತ್ರಕತೆ- ವಿದು ನಿನೋದ್ ಚೋಪ್ರಾ (12 ಫೇಲ್)
ಅತ್ಯುತ್ತಮ ಸಂಭಾಷಣೆ- ಇಶಾ ಮೋಯಿತ್ರಾ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಕತೆ- ಅಮಿತ್ ರಾಯ್ (ಓಎಂಜಿ 2), ದೇವಶಿಷ್ ಮಖಿಜಾ (ಜೋರಮ್)
ಅತ್ಯುತ್ತಮ ವಿಎಫ್ಎಕ್ಸ್- ರೆಡ್ ಚಿಲ್ಲೀಸ್ (ಜವಾನ್ )
ಅತ್ಯುತ್ತಮ ಶಬ್ದ ವಿನ್ಯಾಸ- ಕುಮಾಲ್ ಶರ್ಮಾ (ಶ್ಯಾಮ್ ಬಹದ್ಧೂರ್), ಸಿಂಕ್ ಸಿನಿಮಾ (ಅನಿಮಲ್)
ಪ್ರೊಡಕ್ಷನ್ ಡಿಸೈನ್- ಸುಬ್ರತಾ ಚಟರ್ಜಿ, ಅಮಿತ್ ರಾಯ್ (ಶ್ಯಾಮ್ ಬಹದ್ಧೂರ್)
ಅತ್ಯುತ್ತಮ ಸಂಕಲನ- ಜಸ್ಕುನಾರ್ ಸಿಂಗ್, ವಿದು ವಿನೋದ್ ಚೋಪ್ರಾ (12 ಫೇಲ್)
ಅತ್ಯುತ್ತಮ ವಸ್ತ್ರವಿನ್ಯಾಸ- ಸಚಿನ್, ದಿವ್ಯಾ, ನಿಧಿ (ಶ್ಯಾಮ್ ಬಹದ್ಧೂರ್)
ಅತ್ಯುತ್ತಮ ಸಿನಿಮಾಟೊಗ್ರಫಿ- ಅವಿನಾಶ್ ಅರುಣ್ (ಥ್ರೀ ಆಫ್ ಅಸ್)
ಅತ್ಯುತ್ತಮ ನೃತ್ಯ- ಗಣೇಶ್ ಆಚಾರ್ಯ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಹಿನ್ನೆಲೆ ಸಂಗೀತ- ಹರ್ಷವರ್ಧನ್ ರಾಮೇಶ್ವರ (ಅನಿಮಲ್)
ಅತ್ಯುತ್ತಮ ಆಕ್ಷನ್- ಜವಾನ್
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ