ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸಾಮಾಜಿಕ ಜಾಲತಾಣಗಳ ಮುಖಾಂತರ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ಅವರು ಇನ್ಸ್ಟಾಗ್ರಾಂ ಮುಖಾಂತರ ರೀಲ್ಸ್ ಒಂದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಅದು ಖ್ಯಾತ ಹಾಡು ‘ಏಕ್ ದೋ ತೀನ್’ ಹಾಡಿನ ನೃತ್ಯವನ್ನು ನೆನಪಿಸಿದೆ. ಮೇಘನ್ ಟ್ರೈನರ್ ಅವರ ‘ಮಿ ಟೂ’ ಹಾಡಿಗೆ ಮಾಧುರಿ ಹೆಜ್ಜೆ ಹಾಕಿದ್ದು, ಅವರ ಸ್ಟೆಪ್ಸ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಇಂಟರ್ನೆಟ್ನಲ್ಲಿ ಮಾಧುರಿ ನೃತ್ಯ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಇಷ್ಟವಾಗಿದೆ. ತಮ್ಮ ಪೋಸ್ಟ್ಗೆ ಮಾಧುರಿ ‘ಇಫ್ ಐ ವಾಸ್ ಯೂ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಸದ್ಯ ಈ ರೀಲ್ ಬಾಲಿವುಡ್ ಸೆಲೆಬ್ರಿಟಿಗಳ ಮನಸ್ಸನ್ನೂ ಗೆದ್ದಿದ್ದು, ಅವರೂ ಕಾಮೆಂಟ್ಸ್ ಮಾಡುತ್ತಿದ್ದಾರೆ. ಸದ್ಯ ವಿಡಿಯೋ 2 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿದೆ.
ಮಾಧುರಿ ಹಂಚಿಕೊಂಡ ವಿಡಿಯೋ ಇಲ್ಲಿದೆ:
ನಟಿ ಮಾಧುರಿ ವಿಡಿಯೋ ರೀಲ್ಸ್ ಮುಖಾಂತರ ಅಭಿಮಾನಿಗಲ ಮನಗೆಲ್ಲುವುದು ಇದೇ ಮೊದಲೇನೂ ಅಲ್ಲ. ಇತ್ತೀಚೆಗಷ್ಟೇ ಅವರು, ಗುಜರಾತಿ ಖಾದ್ಯಗಳ ಎದುರು ಕುಳಿತು ಒಂದು ವಿಡಿಯೋ ಹಂಚಿಕೊಂಡಿದ್ದರು. ಅದೂ ಕೂಡ, ಆಹಾರ ಪ್ರಿಯರ ಮನಗೆದ್ದಿತ್ತು.
ಆ ವಿಡಿಯೋ ಇಲ್ಲಿದೆ:
ಚಿತ್ರಗಳ ವಿಷಯಕ್ಕೆ ಬಂದರೆ ಮಾಧುರಿ ಕೊನೆಯದಾಗಿ ಕಾಣಿಸಿಕೊಂಡಿದ್ದು, 2019ರಲ್ಲಿ ತೆರೆಗೆ ಬಂದ ‘ಕಳಂಕ್’ ಚಿತ್ರದಲ್ಲಿ. ಆ ಚಿತ್ರದಲ್ಲಿ ವರುಣ್ ಧವನ್, ಸೊನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಸಂಜಯ್ ದತ್ ಮೊದಲಾದವರು ಬಣ್ಣ ಹಚ್ಚಿದ್ದರು.
ಇದನ್ನೂ ಓದಿ:
‘ಈ ಬಾರಿ ನಿಮ್ಮಿಂದ ಸ್ವಲ್ಪ ದೂರ, ಆದರೆ ಬೇಗ ಮರಳುವೆ’ ಎಂದು ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ