ಅದರಿಂದಾದ ಆಘಾತ ಜೀವಮಾನವಿಡೀ ಇರುತ್ತದೆ; ಖಾಸಗಿ ಚಿತ್ರಗಳು ಲೀಕ್ ಆಗಿದ್ದ ಕುರಿತಂತೆ ನೋವು ಹೊರಹಾಕಿದ‌ ಆಸ್ಕರ್ ವಿಜೇತ ನಟಿ

Jennifer Lawrence: ತಮ್ಮ ಖಾಸಗಿ ಫೋಟೋ ಲೀಕ್ ಆಗಿದ್ದ ಘಟನೆಯ ಕರಾಳ ನೆನಪುಗಳನ್ನು ನಟಿ ಜೆನ್ನಿಫರ್ ಲಾರೆನ್ಸ್ ಹಂಚಿಕೊಂಡಿದ್ದಾರೆ. ಆ ಆಘಾತ ಜೀವಮಾನವಿಡೀ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಅದರಿಂದಾದ ಆಘಾತ ಜೀವಮಾನವಿಡೀ ಇರುತ್ತದೆ; ಖಾಸಗಿ ಚಿತ್ರಗಳು ಲೀಕ್ ಆಗಿದ್ದ ಕುರಿತಂತೆ ನೋವು ಹೊರಹಾಕಿದ‌ ಆಸ್ಕರ್ ವಿಜೇತ ನಟಿ
ಜೆನ್ನಿಫರ್ ಲಾರೆನ್ಸ್

ಆಸ್ಕರ್ ಪ್ರಶಸ್ತಿ ವಿಜೇತ ನಟಿ ಜೆನ್ನಿಫರ್ ಲಾರೆನ್ಸ್ ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಘಟನೆಗಳ ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ಕೆಲವೊಂದು ಘಟನೆಗಳು ಜೀವನುದುದ್ದಕ್ಕೂ ಚುಚ್ಚುತ್ತಲೇ ಇರುತ್ತವೆ, ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ‘ಹಂಗರ್ ಗೇಮ್ಸ್’ ಮೂಲಕ ಅಪಾರ ಖ್ಯಾತಿ ಗಳಿಸಿರುವ ಈ ನಟಿಯ ಖಾಸಗಿ ಚಿತ್ರಗಳು 2014ರಲ್ಲಿ ಲೀಕ್ ಆಗಿತ್ತು. ಅದೇ ಸಂದರ್ಭದಲ್ಲಿ ಖ್ಯಾತ ಹಾಲಿವುಡ್ ತಾರೆಯರಾದ ರಿಹಾನ್ನ ಮತ್ತು ಸೆಲೆನಾ ಗೊಮೆಜ್ ಸೇರಿದಂತೆ ಹಲವರ ಖಾಸಗಿ ಚಿತ್ರಗಳು ಅಂತರ್ಜಾಲದಲ್ಲಿ ಲೀಕ್ ಆಗಿದ್ದವು. ಹ್ಯಾಕರ್​ಗಳ ಈ ದುಷ್ಕೃತ್ಯ ದೊಡ್ಡ ಹಗರಣವಾಗಿ ಚರ್ಚೆಯಾಗಿತ್ತು. ಈ ಕುರಿತು ಜೆನ್ನಿಫರ್ ಮೌನ ಮುರಿದಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ಅವರು ನೀಡಿರುವ ಸಂದರ್ಶನದಲ್ಲಿ ಆ ಕರಾಳ ಘಟನೆ ಹಾಗೂ ಅದರ ಪರಿಣಾಮಗಳನ್ನು ಜೆನ್ನಿಫರ್ ವಿವರಿಸಿದ್ದಾರೆ. ‘‘ಖಾಸಗಿ ಚಿತ್ರಗಳು ಸೋರಿಕೆಯಾಗಿದ್ದರಿಂದ ಅಂತರ್ಜಾಲದಲ್ಲಿ ಯಾರು ಬೇಕಾದರೂ, ದಿನದ ಯಾವುದೇ ಸಮಯದಲ್ಲಾದರೂ ನನ್ನ ಅನುಮತಿಯಿಲ್ಲದೇ ನಗ್ನ ದೇಹವನ್ನು ನೋಡಬಹುದು’’ ಎಂದು ದುಃಖ ಹಂಚಿಕೊಂಡಿದ್ದಾರೆ. ‘‘ಅಲ್ಲದೇ ಫ್ರಾನ್ಸ್​ನಲ್ಲಿ ಯಾರೋ ಅದನ್ನು ಪ್ರಕಟಿಸಿಯೂ ಬಿಟ್ಟರು. ಈ ಆಘಾತಗಳು ನನ್ನ ಜೀವನದುದ್ದಕ್ಕೂ ಉಳಿದು ಚುಚ್ಚುತ್ತಲೇ ಇರುತ್ತದೆ’’ ಎಂದು ಜೆನ್ನಿಫರ್ ಬೇಸರ ಹೊರಹಾಕಿದ್ದಾರೆ.

ಜೆನ್ನಿಫರ್ ಪ್ರಸ್ತುತ ಪೊಲಿಟಿಕಲ್ ಡಾರ್ಕ್ ಕಾಮಿಡಿ ಚಿತ್ರವಾದ ‘ಡೋನ್ಟ್ ಲುಕ್ ಅಪ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೋ ಬಣ್ಣ ಹಚ್ಚಿದ್ದಾರೆ. ಇದರಲ್ಲಿ ರಾಬ್ ಮೋರ್ಗನ್, ಜೋನಾ ಹಿಲ್, ಮಾರ್ಕ್ ರೈಲಾನ್ಸ್, ಟೈಲರ್ ಪೆರ್ರಿ, ತಿಮೊಥಿ ಚಾಲ್​ಮೆಟ್, ರಾನ್ ಪರ್ಲ್‌ಮನ್, ಅರಿಯಾನಾ ಗ್ರಾಂಡೆ, ಸ್ಕಾಟ್ ಮೆಸ್ಕುಡಿ, ಹಿಮೇಶ್ ಪಟೇಲ್ ಮೊದಲಾದವರು ನಟಿಸಿದ್ದಾರೆ.

ನಟಿ ಜೆನ್ನಿಫರ್ ಪ್ರಸ್ತುತ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಇತ್ತೀಚೆಗೆ ಅವರು ಚಿತ್ರ ಪ್ರದರ್ಶನವೊಂದರಲ್ಲಿ ಕಾಣಿಸಿಕೊಂಡಾಗಿನ ದೃಶ್ಯಗಳು ವೈರಲ್ ಆಗಿದ್ದವು.

ಇದನ್ನೂ ಓದಿ:

Kangana Ranaut: ‘ಕಂಗನಾ ಸ್ವಾತಂತ್ರ್ಯದ ಕುರಿತ ಹೇಳಿಕೆ ಪದ್ಮ ಪ್ರಶಸ್ತಿಯ ಫಲವೇ?’- ಖಡಕ್ ಆಗಿ ಪ್ರಶ್ನಿಸಿದ ಶಕ್ತಿಮ್ಯಾನ್ ಖ್ಯಾತಿಯ ನಟ ಮುಕೇಶ್

ಒಟಿಟಿಯಲ್ಲಿ ಕೋಟಿಗೊಬ್ಬ 3 ಬಿಡುಗಡೆ ಯಾವಾಗ?; ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಇಲ್ಲಿದೆ

Click on your DTH Provider to Add TV9 Kannada