ಮಲೈಕಾ ಅರೋರಾ (Malaika Arora) ಹಾಗೂ ಅರ್ಜುನ್ ಕಪೂರ್ (Arjun Kapoor) ಅವರದ್ದು ಬಾಲಿವುಡ್ ಹೆಸರಾಂತ ಜೋಡಿಗಳಲ್ಲಿ ಒಂದು. ಅರ್ಜುನ್ ಹಾಗೂ ಮಲೈಕಾ ಜೋಡಿ ವಯಸ್ಸಿನ ಅಂತರದ ಕಾರಣಕ್ಕೆ ಸೇರಿದಂತೆ ಇನ್ನೂ ಕೆಲವು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಜೋಡಿ ಬ್ರೇಕಪ್ ಮಾಡಿಕೊಂಡು ದೂರಾಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಅರ್ಜುನ್ ಹಾಗೂ ಮಲೈಕಾ ಪರಸ್ಪರ ದೂರಾಗಿದ್ದು, ಅರ್ಜುನ್ ಕಪೂರ್ ಬೇರೊಬ್ಬರೊಟ್ಟಿಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗಿತ್ತು, ಆದರೆ ಆ ಎಲ್ಲ ಸುದ್ದಿಗಳಿಗೂ ಪೂರ್ಣ ವಿರಾಮವನ್ನು ಅರ್ಜುನ್-ಮಲೈಕಾ ಇಟ್ಟಿದ್ದಾರೆ.
ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಕಳೆದ ಕೆಲವಾರು ವರ್ಷಗಳಿಂದಲೂ ಸಹಜೀವನ ನಡೆಸುತ್ತಿದ್ದಾರೆ. ಮಲೈಕಾ ಈ ಹಿಂದೆ ಸಲ್ಮಾನ್ ಖಾನ್ರ ಸಹೋದರ ಅರ್ಬಾಜ್ ಖಾನ್ ಅನ್ನು ವಿವಾಹವಾಗಿದ್ದರು. ಅವರಿಂದ ಮಕ್ಕಳನ್ನೂ ಪಡೆದಿದ್ದರು. ಹಾಗಿದ್ದರೂ ಅರ್ಬಾಜ್ಗೆ ವಿಚ್ಛೇದನ ನೀಡಿ ಅರ್ಜುನ್ ಕಪೂರ್ ಅನ್ನು ಮಲೈಕಾ ವಿವಾಹವಾಗಿದ್ದರು.
ಇತ್ತೀಚಿನ ಕೆಲ ದಿನಗಳಿಂದಲೂ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರ ಪರಸ್ಪರ ದೂರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಮಲೈಕಾರಿಂದ ದೂರಾದ ಬಳಿಕ ಅರ್ಜುನ್ ಕಪೂರ್ ಯೂಟ್ಯೂಬರ್ ಒಬ್ಬರೊಟ್ಟಿಗೆ ಪ್ರೀತಿಯಲ್ಲಿದ್ದು, ಅವರೊಟ್ಟಿಗೆ ಸಹಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡಿದ್ದವು. ಆದರೆ ತಮ್ಮ ಬಗ್ಗೆ ಹರಿದಾಡುತ್ತಿರುವ ಎಲ್ಲ ಊಹಾಪೋಹಗಳಿಗೆ ಒಮ್ಮೆಲೆ ಪೂರ್ಣವಿರಾಮ ಇಟ್ಟಿದೆ ಈ ಜೋಡಿ.
ಇದನ್ನೂ ಓದಿ:ಅರ್ಜುನ್ ಕಪೂರ್ ಅರೆಬೆತ್ತಲೆ ಫೋಟೋನ ಮಲೈಕಾ ವೈರಲ್ ಮಾಡಿದ ಪ್ರಕರಣ; ತಿರುಗೇಟು ಕೊಟ್ಟ ನಟ
ಮುಂಬೈನಲ್ಲಿ ಒಟ್ಟಿಗೆ ಓಡಾಡಿದ್ದಾರೆ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್. ಇಬ್ಬರೂ ಒಟ್ಟಿಗೆ ರೆಸ್ಟೋರೆಂಟ್ನಿಂದ ಹೊರಗೆ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಸುದ್ದಿಗಳು ಹರಿದಾಡುತ್ತಿರುವಾಗಲೇ ಪರಸ್ಪರ ಒಟ್ಟಿಗೆ ಕಾಣಿಸಿಕೊಂಡು ತಮ್ಮ ನಡುವೆ ಅಂಥಹದ್ದೇನಿಲ್ಲವೆಂದು, ತಾವಿಬ್ಬರೂ ಒಟ್ಟಿಗೆ ಚೆನ್ನಾಗಿದ್ದೇವೆಂದೂ ಸಾಬೀತುಪಡಿಸಿದ್ದಾರೆ.
ಮಲೈಕಾ ಅರೋರಾಗೆ ಪ್ರಸ್ತುತ 50 ವರ್ಷ ವಯಸ್ಸು, ನಟ ಅರ್ಜುನ್ ಕಪೂರ್ ವಯಸ್ಸು 38 ವರ್ಷ. ಮಲೈಕಾ ಅರೋರಾಗೆ ಹದಿವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ದೂರಾದರು. ಆಗಿನಿಂದಲೂ ಅರ್ಜುನ್ ಕಪೂರ್ ಹಾಗೂ ಮಲೈಕಾ ಒಟ್ಟಿಗೆ ಬಾಳುತ್ತಿದ್ದಾರೆ. ಮಲೈಕಾ ಪ್ರಸ್ತುತ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿದ್ದಾರೆ. ಆಗಾಗ್ಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ