‘ಮಿಸ್ಸಿಂಗ್ ಲೇಡಿಸ್’ (ಲಾಪತಾ ಲೇಡೀಸ್) ಸಿನಿಮಾ ಆಸ್ಕರ್ ರೇಸ್ನಿಂದ ಹೊರ ಬಿದ್ದಿದೆ. ಈ ಮೂಲಕ 2025ರಲ್ಲಿ ಆಸ್ಕರ್ ಗೆಲ್ಲಬೇಕು ಎಂಬ ಭಾರತೀಯರ ಕನಸು ನುಚ್ಚು ನೂರಾಗಿದೆ. ‘ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್’ ಈ ಬಗ್ಗೆ ಘೋಷಣೆ ಮಾಡಿದೆ. ಈ ಚಿತ್ರದ ನಿರ್ಮಾಪಕ ಆಮಿರ್ ಖಾನ್ ಈ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.
‘ಲಾಪತಾ ಲೇಡೀಸ್’ ಸಿನಿಮಾ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಇಷ್ಟ ಪಟ್ಟ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ನೋಡಿ ಜನರು ಮೆಚ್ಚಿಕೊಂಡರು. ಈ ಚಿತ್ರ ಭಾರತದಿಂದ ಅಧಿಕೃತವಾಗಿ ಆಸ್ಕರ್ಗೆ ನಾಮಿನೇಟ್ ಆಯಿತು. ‘ವಿದೇಶಿ ಸಿನಿಮಾ’ ವಿಭಾಗಕ್ಕೆ ಈ ಚಿತ್ರ ಕಳುಹಿಸಲಾಯಿತು. ಬುಧವಾರ (ಡಿಸೆಂಬರ್ 18) ಈ ಬಗ್ಗೆ ಘೋಷಣೆ ಆಗಿದ್ದು, ಸಿನಿಮಾ ಟಾಪ್ 15ರಲ್ಲಿ ಬರಲೂ ಅನರ್ಹವಾಗಿದೆ.
ಮಾರ್ಚ್ 2ರಂದು ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದಲ್ಲಿ ನಡೆಯಲಿದೆ. ‘ಆಸ್ಕರ್ ಅವಾರ್ಡ್’ ನಾಮಿನೇಷನ್ ಜನವರಿ 17ರಂದು ಘೋಷಣೆ ಆಗಲಿದೆ. ಮಾರ್ಚ್ 2ರಂದು ಅದ್ದೂರಿ ಈವೆಂಟ್ನಲ್ಲಿ ವಿನ್ನರ್ಗಳ ಹೆಸರು ಘೋಷಣೆ ಆಗಲಿದೆ.
ಆಸ್ಕರ್ ಇತಿಹಾಸದಲ್ಲಿ ಈ ವರೆಗೆ ‘ಮದರ್ ಇಂಡಿಯಾ’, ‘ಸಲಾಮ್ ಬಾಂಬೆ’ ಹಾಗೂ ‘ಲಗಾನ್’ ಸಿನಿಮಾಗಳು ‘ವಿದೇಶಿ ಸಿನಿಮಾ’ ವಿಭಾಗದಲ್ಲಿ ನಾಮಿನೇಟ್ ಆಗಿದ್ದವು. ಆದರೆ, ಅವುಗಳಿಗೆ ಅವಾರ್ಡ್ ಸಿಕ್ಕಿಲ್ಲ. ಈಗ ‘ಮಿಸ್ಸಿಂಗ್ ಲೇಡಿಸ್’ ಚಿತ್ರಕ್ಕೂ ಅವಕಾಶ ಕೈ ತಪ್ಪಿದೆ.
ಇದನ್ನೂ ಓದಿ: ಆಸ್ಕರ್ ಅವಾರ್ಡ್ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ‘ಲಾಪತಾ ಲೇಡಿಸ್’
ಈ ಬಗ್ಗೆ ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕ್ಕಿ ಕೇಜ್ ಪ್ರತಿಕ್ರಿಯೆ ನೀಡಿದ್ದಾರೆ. ‘ಆಸ್ಕರ್ನ ಶಾರ್ಟ್ಲಿಸ್ಟ್ ರಿಲೀಸ್ ಆಗಿದೆ. ಇದರಲ್ಲಿ ಲಾಪತಾ ಲೇಡೀಸ್ ಚಿತ್ರ ಸ್ಥಾನ ಪಡೆದಿಲ್ಲ. ನಾನು ಈ ಚಿತ್ರವನ್ನು ಎಂಜಾಯ್ ಮಾಡಿದ್ದೇನೆ. ಆದರೆ, ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವರ್ಗಕ್ಕೆ ಭಾರತವನ್ನು ಪ್ರತಿನಿಧಿಸಲು ಇದು ಒಳ್ಳೆಯ ಆಯ್ಕೆ ಅಲ್ಲ. ನಿರೀಕ್ಷೆಯಂತೆ ಸಿನಿಮಾ ಸೋತಿದೆ. ವರ್ಷ ಕಳೆದಂತೆ ನಾವು ತಪ್ಪಾದ ಚಿತ್ರಗಳನ್ನು ಆಯ್ಕೆ ಮಾಡುತ್ತಲೇ ಇದ್ದೇವೆ. ನಾವು ಯಾವಾಗ ಅರಿತುಕೊಳ್ಳುತ್ತೇವೆ? ಹಲವಾರು ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದೇವೆ. ನಾವು ಪ್ರತಿ ವರ್ಷ ಇಂಟರ್ನ್ಯಾಷನಲ್ ಫೀಚರ್ ಫಿಲ್ಮ್ ವರ್ಗದಲ್ಲಿ ಗೆಲ್ಲಬೇಕು’ ಎಂದು ರಿಕ್ಕಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:56 am, Wed, 18 December 24