AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್ ಅವಾರ್ಡ್​ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ‘ಲಾಪತಾ ಲೇಡಿಸ್’

Laapataa Ladies Movie: ‘ಲಾಪತಾ ಲೇಡಿಸ್​’ ‘ಅತ್ಯುತ್ತಮ ವಿದೇಶಿ ಸಿನಿಮಾ’ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಚೆನ್ನೈನ್​ನಲ್ಲಿ ‘ಭಾರತ ಫಿಲ್ಮ್​ ಫೆಡರೇಷನ್’ ಸದಸ್ಯರು ಈ ಘೋಷಣೆ ಮಾಡಿದ್ದಾರೆ. ಈಗ ನಡೆಯಲಿರುವುದು 97ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಆಗಿದೆ.

ಆಸ್ಕರ್ ಅವಾರ್ಡ್​ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ‘ಲಾಪತಾ ಲೇಡಿಸ್’
ಲಾಪತಾ ಲೇಡಿಸ್
ರಾಜೇಶ್ ದುಗ್ಗುಮನೆ
|

Updated on: Sep 23, 2024 | 2:23 PM

Share

‘ಲಾಪತಾ ಲೇಡಿಸ್’ ಸಿನಿಮಾ ‘ಆಸ್ಕರ್ 2025’ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಕಿರಣ್ ರಾವ್ ನಿರ್ದೇಶನದ ಈ ಚಿತ್ರವನ್ನು ಆಮಿರ್ ಖಾನ್ ಅವರು ನಿರ್ಮಾಣ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ಮತ್ತೊಂದಷ್ಟು ಮಂದಿ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

‘ಲಾಪತಾ ಲೇಡಿಸ್’ ಸಿನಿಮಾ ಮಹಿಳೆಯರ ಸಬಲೀಕರಣದ ಬಗ್ಗೆ ಇದೆ. ಈ ಸಿನಿಮಾದಲ್ಲಿ ನಿಶಾಂಶಿ ಗೋಯಲ್, ಪ್ರತಿಭಾ ರಾಂತಾ, ಸ್ಪರ್ಶ್ ಶ್ರೀವಾಸ್ತವ, ಚಾಯಾ ಕದಮ್, ರವಿ ಕಿಶನ್ ನಟಿಸಿದ್ದಾರೆ. ‘ಲಾಪತಾ ಲೇಡಿಸ್’ ಸಿನಿಮಾ ಆಸ್ಕರ್ ಗೆಲ್ಲಬೇಕು ಎಂಬುದು ಕಿರಣ್ ರಾವ್ ಅವರ ಕನಸಾಗಿದೆ. ಈ ಕನಸಿನ ಒಂದು ಹಂತವನ್ನು ಅವರು ಏರಿದ್ದಾರೆ.

‘ಲಾಪತಾ ಲೇಡಿಸ್​’ ‘ಅತ್ಯುತ್ತಮ ವಿದೇಶಿ ಸಿನಿಮಾ’ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಚೆನ್ನೈನ್​ನಲ್ಲಿ ‘ಭಾರತ ಫಿಲ್ಮ್​ ಫೆಡರೇಷನ್’ ಸದಸ್ಯರು ಈ ಘೋಷಣೆ ಮಾಡಿದ್ದಾರೆ. ಈಗ ನಡೆಯಲಿರುವುದು 97ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಆಗಿದೆ.

ಕಳೆದ ವಾರ ಕಿರಣ್ ರಾವ್ ಅವರು ಈ ಬಗ್ಗೆ ಮಾತನಾಡಿದ್ದರು. ‘ಆಸ್ಕರ್​ಗೆ ನಮ್ಮ ಸಿನಿಮಾ ಆಯ್ಕೆ ಆದರೆ ನನ್ನ ಕನಸು ಈಡೇರಿದಂತೆ. ಅದು ಒಂದು ಪ್ರಕ್ರಿಯೆ. ಲಾಪತಾ ಲೇಡಿಸ್ ಸಿನಿಮಾನ ಅವರು ಪರಿಗಣಿಸುತ್ತಾರೆ ಎಂದು ಭಾವಿಸಿದ್ದೇನೆ. ಅತ್ಯುತ್ತಮ ಸಿನಿಮಾ ಆಯ್ಕೆ ಆಗಲಿದೆ’ ಎಂದು ಅವರು ಭರವಸೆ ಹೊರಹಾಕಿದ್ದರು.

‘ಲಾಪತಾ ಲೇಡಿಸ್’ ಸಿನಿಮಾ 2001ರಲ್ಲಿ ನಡೆಯುವ ಗ್ರಾಮೀಣ ಭಾರತದ ಕಥೆಯನ್ನು ಹೊಂದಿದೆ. ಎರಡು ನವ ವಿವಾಹಿತರ ಕಥೆಯನ್ನು ಹೊಂದಿದೆ. ರೈಲ್ವೆ ಪ್ರಯಾಣದಲ್ಲಿ ವಧುವಿಬ್ಬರೂ ಬದಲಾಗುತ್ತಾರೆ. ಆ ಬಳಿಕ ಅನೇಕರ ಕಣ್ಣು ತೆಗೆಸುವ ಕೆಲಸವನ್ನು ಮಾಡುತ್ತದೆ.

ಆಮಿರ್ ಖಾನ್ ಅವರು ‘ಲಾಪತಾ ಲೇಡಿಸ್’ ಚಿತ್ರ ನಿರ್ಮಾಣ ಮಾಡಿದ್ದಾರೆ. ‘ಧೋಬಿ ಘಾಟ್’ ಬಳಿಕ ಅವರು ನಿರ್ದೇಶನ ಮಾಡಿದ ಸಿನಿಮಾ ಇದು. ‘ಲಾಪತಾ ಲೇಡಿಸ್’ ಈ ಮೊದಲು ಟೊರೆಂಟೋ ಇಂಟರ್​ನ್ಯಾಷನಲ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಸಾರ ಕಂಡಿದೆ.

ಇದನ್ನೂ ಓದಿ: ‘ಚಿರಂಜೀವಿ ಡ್ಯಾನ್ಸ್ ಮಾಡುತ್ತಿದ್ದರೆ ನಮ್ಮ ಕಣ್ಣು ಬೇರೆಲ್ಲೂ ಹೋಗಲ್ಲ’; ಹೊಗಳಿದ ಆಮಿರ್ ಖಾನ್

96ನೇ ಸಾಲಿ ಆಸ್ಕರ್​ಗೆ ಟುವಿನೋ ಥಾಮಸ್ ನಟನೆಯ ‘2018’ ಸಿನಿಮಾ ಆಯ್ಕೆ ಆಗಿತ್ತು. ಆದರೆ, ಸಿನಿಮಾ ಶಾರ್ಟ್​ಲಿಸ್ಟ್ ಆಗಿಲ್ಲ. 95ನೇ ಸಾಲಿನಲ್ಲಿ ಭಾರತದ ‘ನಾಟು ನಾಟು..’ ಹಾಡು ಅವಾರ್ಡ್ ಗೆದ್ದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.