ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇನ್ಸ್ಟಾಗ್ರಾಮ್ನಲ್ಲಿ ಕೋಟ್ಯಂತರ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ವಿರಾಟ್ ಫಿಟ್ನೆಸ್ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಇನ್ನು ಅವರ ಫ್ಯಾಷನ್ ಕೂಡ ಅನೇಕರಿಗೆ ಇಷ್ಟವಾಗುತ್ತದೆ. ವಿರಾಟ್ ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆ ಆದ ನಂತರದಲ್ಲಿ ಬೇಸರ ಮಾಡಿಕೊಂಡವರೆಷ್ಟೋ. ಈಗ ಬಾಲಿವುಡ್ ನಟಿಯೊಬ್ಬರು ವಿರಾಟ್ ಅವರ ಮೇಲಿದ್ದ ಹುಚ್ಚು ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ.
ಮರಾಠಿ ಹಾಗೂ ಹಿಂದಿ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಮೃಣಾಲ್ ಠಾಕೂರ್ ಹೀಗೊಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ವಿರಾಟ್ ಕೊಹ್ಲಿ ಮೇಲಿದ್ದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.
‘ಸೂಪರ್ 30’, ‘ಬಾಟ್ಲಾ ಹೌಸ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ ಮೃಣಾಲ್. ಅವರಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಕೊಹ್ಲಿ ಕಂಡರೆ ಅವರಿಗೆ ಅಚ್ಚುಮೆಚ್ಚು. ‘ನನಗೆ ವಿರಾಟ್ ಮೇಲೆ ಹುಚ್ಚು ಪ್ರೀತಿ ಇತ್ತು. ನನ್ನ ಸಹೋದರನ ಜತೆ ಕ್ರಿಕೆಟ್ ನೋಡೋಕೆ ಸ್ಟೇಡಿಯಮ್ಗೆ ಹೋಗುತ್ತಿದ್ದೆ’ ಎಂದಿದ್ದಾರೆ.
ತೆಲುಗಿನ ‘ಜೆರ್ಸಿ’ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಶಾಹಿದ್ ಕಪೂರ್ ಸಿನಿಮಾದ ಹೀರೋ. ಈ ಚಿತ್ರಕ್ಕೆ ಮೃಣಾಲ್ ನಾಯಕಿ. ಈ ಬಗ್ಗೆಯೂ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ಸ್ಟೇಡಿಯಮ್ನಲ್ಲಿ ನಿಂತು ಕ್ರಿಕೆಟ್ ನೋಡೋದು ಖುಷಿಯ ವಿಚಾರವಾಗಿತ್ತು. ಕ್ರಿಕೆಟ್ ಎಂದರೆ ಎಲ್ಲಿಲ್ಲದ ಪ್ರೀತಿ ಆಗಿತ್ತು. ಈಗ ಕ್ರಿಕೆಟ್ನ ಕಥೆ ಹೊಂದಿರುವ ಸಿನಿಮಾದ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ’ ಎಂದಿದ್ದಾರೆ ಮೃಣಾಲ್.
ಗೌತಮ್ ಅವರು ‘ಜೆರ್ಸಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದೀಪಾವಳಿ ಪ್ರಯುಕ್ತ ನವೆಂಬರ್ 5ರಂದು ಸಿನಿಮಾ ತೆರೆಗೆ ಬರುವ ನಿರಿಕ್ಷೆ ಇದೆ. ಇದಲ್ಲದೆ, ತಮಿಳು ಸಿನಿಮಾ ‘ತಾಡಮ್’ ಹಿಂದಿ ರಿಮೇಕ್ನಲ್ಲೂ ಅವರು ನಟಿಸುತ್ತಿದ್ದಾರೆ.
ಇದನ್ನೂ ಓದಿ: IND vs ENG: ಓಲ್ಡ್ ಟ್ರಾಫರ್ಡ್ ಮೈದಾನವೆಂದರೆ ಕೊಹ್ಲಿ ಬಳಗ ಹೆದರುವುದ್ಯಾಕೆ? ಇಲ್ಲಿ ಗೆಲ್ಲುವುದು ಸುಲಭದ ಮಾತಲ್ಲ!