ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಇಂದು (ಅಕ್ಟೋಬರ್ 08) ಮುಂಬೈನ ನ್ಯಾಯಾಲಯದಲ್ಲಿ ನಡೆಯಿತು. 23 ವರ್ಷದ ಆರ್ಯನ್ ಪರ ಸತೀಶ್ ಮಾನೆಶಿಂಧೆ ವಾದ ಮಂಡಿಸಿದರು. ಈ ಕುರಿತು ತೀರ್ಪು ನೀಡಿರುವ ನ್ಯಾಯಾಲಯವು ಆರ್ಯನ್ಗೇ ಜಾಮೀನು ನೀಡಿಲ್ಲ.
ಗುರುವಾರ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಾಲಯವು ಆರ್ಯನ್ ಖಾನ್ಗೆ ಎನ್ಸಿಬಿ ಕಸ್ಟಡಿಯನ್ನು ವಿಸ್ತರಿಸಲು ನಿರಾಕರಿಸಿತ್ತು. ಈಗಾಗಲೇ ಅಗತ್ಯವಿದ್ದಷ್ಟು ಸಮಯವನ್ನು ಎನ್ಸಿಬಿಗೆ ನೀಡಲಾಗಿದೆ ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಆರ್.ಎಂ.ನಿರ್ಲೇಕರ್ ತಿಳಿಸಿದ್ದರು. ನಂತರ ಅವರು ಆರ್ಯನ್ ಖಾನ್ ಸೇರಿದಂತೆ 8 ಜನರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು. ಈಗ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿ ಊರ್ಜಿತವಲ್ಲವೆಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಪ್ರಕರಣದ 8 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ. ಸೆಷನ್ ಕೋರ್ಟ್ ಮೊರೆ ಹೋಗಲು ಆರ್ಯನ್ ಖಾನ್ ಪರ ವಕೀಲರು ಈಗ ಚಿಂತನೆ ನಡೆಸಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಕೈಲುಪುತ್ತಿದ್ದಂತೆ ಮೇಲ್ಮನವಿ ಸಲ್ಲಿಸಲು ಪ್ಲಾನ್ ರೂಪಿಸಲಾಗಿದೆ.
ನ್ಯಾಯಾಂಗ ಬಂಧನ ವಿಧಿಸಿದ್ದ ಕಾರಣ, ಎನ್ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಇತರ ಆರೋಪಿಗಳನ್ನು ಮೆಡಿಕಲ್ ಟೆಸ್ಟ್ಗೆ ಒಳಪಡಿಸಿ ಆರ್ಥರ್ ಜೈಲಿಗೆ ಕರೆದೊಯ್ದಿದ್ದರು. ಇದೀಗ ನ್ಯಾಯಾಲಯದ ಆದೇಶದ ಅನ್ವಯ ಆರ್ಯನ್ಗೆ ಜಾಮೀನು ಸಿಕ್ಕಿಲ್ಲ. ಹೀಗಾಗಿ, ಅವರು ಜೈಲಿನಲ್ಲೇ ಇರುವುದು ಅನಿವಾರ್ಯ ಆಗಿದೆ.
ಆರ್ಯನ್ ಖಾನ್ ಸೇರಿ ಎಲ್ಲಾ ಆರೋಪಿಗಳು ಆರ್ಥರ್ ರೋಡ್ ಜೈಲಿನಲ್ಲಿ 5 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದೆ. ಬ್ಯಾರಕ್ ನಂಬರ್-1ರಲ್ಲಿ ಆರ್ಯನ್ ಹಾಗೂ ಮತ್ತಿತರರು ಇದ್ದಾರೆ.
ಇದನ್ನೂ ಓದಿ:
‘ಪ್ರೀತಿಯ ಆರ್ಯನ್ ಖಾನ್..’: ಶಾರುಖ್ ಪುತ್ರನಿಗೆ ಹೃತಿಕ್ ರೋಷನ್ ಬಹಿರಂಗ ಪತ್ರ
Published On - 5:10 pm, Fri, 8 October 21