‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ: ನಮಿತ್ ಮಲ್ಹೋತ್ರಾ ಅಧಿಕೃತ ಘೋಷಣೆ

ಅಭಿಮಾನಿಗಳ ಕಾಯುವಿಕೆಗೆ ತೆರೆಬಿದ್ದಿದೆ. ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ನಿರ್ಮಾಪಕ ನಮಿತ್ ಮಲ್ಹೋತ್ರ ಅವರು ದಿನಾಂಕ ನಿಗದಿ ಮಾಡಿದ್ದಾರೆ. ಜುಲೈ 30ರಂದು ಈ ಸಿನಿಮಾದ ಟ್ರೇಲರ್ ಅನಾವರಣ ಆಗಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಅಭಿಮಾನಿಗಳ ಕಾತರ ಹೆಚ್ಚಾಗಿದೆ.

‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ: ನಮಿತ್ ಮಲ್ಹೋತ್ರಾ ಅಧಿಕೃತ ಘೋಷಣೆ
Ramayana Movie Poster

Updated on: Jul 28, 2026 | 10:52 PM

ಮುಖ್ಯಾಂಶಗಳು

  • ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆ ಆಗಲಿದೆ ‘ರಾಮಾಯಣ’ ಸಿನಿಮಾದ ಟ್ರೇಲರ್.
  • ಅಧಿಕೃತವಾಗಿ ಟ್ರೇಲರ್ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಿದ ಚಿತ್ರತಂಡ.
  • ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ.

ಭಾರತೀಯ ಚಿತ್ರರಂಗದದಲ್ಲಿ ಅತ್ಯಂತ ನಿರೀಕ್ಷೆ ಮೂಡಿಸಿರುವ ಪೌರಾಣಿಕ ಕಥಾಹಂದರದ ‘ರಾಮಾಯಣ’ ಸಿನಿಮಾದ ಟ್ರೇಲರ್ (Ramayana Movie Trailer) ಬಿಡುಗಡೆಗೆ ಕೊನೆಗೂ ದಿನಗಣನೆ ಶುರುವಾಗಿದೆ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟರ್ ಹಂಚಿಕೊಳ್ಳುವ ಮೂಲಕ ‘ರಾಮಾಯಣ’ (Ramayana) ಚಿತ್ರದ ಟ್ರೇಲರ್ ಅನಾವರಣಗೊಳ್ಳುವ ದಿನಾಂಕ ಮತ್ತು ಸಮಯವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜುಲೈ 30ರ ಗುರುವಾರದಂದು ಬೆಳಗಿನ ಜಾವ 4.15ಕ್ಕೆ ಈ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ನಮಿತ್ ಮಲ್ಹೋತ್ರಾ (Namit Malhotra) ಅವರು ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಬಿಸ್ನೆಸ್ ದೃಷ್ಟಿಯಿಂದ ಕೆಲವು ಹೊಸ ಬೆಳವಣಿಗೆಗಳು ನಡೆದಿದ್ದರಿಂದ ಟ್ರೇಲರ್ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಗಿತ್ತು. ಈಗ ಸ್ವತಃ ನಿರ್ಮಾಪಕರೇ ಅಧಿಕೃತ ಪೋಸ್ಟರ್ ಮೂಲಕ ಟ್ರೇಲರ್ ಬಿಡುಗಡೆಯ ಡೇಟ್ ಮತ್ತು ಟೈಮ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ಮುಹೂರ್ತದಲ್ಲಿ ಬರಲಿದೆ ಟ್ರೇಲರ್:

ಚಿತ್ರತಂಡ ಹಂಚಿಕೊಂಡಿರುವ ಹೊಸ ಪೋಸ್ಟರ್‌ನಲ್ಲಿ ಬ್ರಹ್ಮ ಮುಹೂರ್ತದ ವಿಶೇಷತೆಯನ್ನು ಎತ್ತಿಹಿಡಿಯಲಾಗಿದೆ. ‘ಅತ್ಯಂತ ಪವಿತ್ರವಾದ ಬ್ರಹ್ಮ ಮುಹೂರ್ತದಲ್ಲಿ, ಅಂದರೆ 2026ರ ಜುಲೈ 30 (ಗುರುವಾರ) ಬೆಳಗಿನ ಜಾವ 4.15ಕ್ಕೆ ವಿಶ್ವದಾದ್ಯಂತ ‘ದಿ ಡಾನ್ ಆಫ್ ರಾಮಾಯಣ’ ಟ್ರೇಲರ್ ಅನ್ನು ನಾವು ಅನಾವರಣಗೊಳಿಸುತ್ತಿದ್ದೇವೆ’ ಎಂಬ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಬ್ರಹ್ಮ ಮುಹೂರ್ತಕ್ಕೆ ಅತ್ಯಂತ ಆಧ್ಯಾತ್ಮಿಕ ಹಾಗೂ ಪವಿತ್ರ ಸ್ಥಾನವಿರುವುದರಿಂದ, ಅದೇ ಸಮಯದಲ್ಲಿ ಟ್ರೇಲರ್ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಟ್ರೇಲರ್ ನೋಡಲು ಕಾದಿರುವ ಫ್ಯಾನ್ಸ್:

ಕಳೆದ ಹಲವು ತಿಂಗಳುಗಳಿಂದ ಈ ಬಿಗ್ ಬಜೆಟ್ ಸಿನಿಮಾದ ಪ್ರಥಮ ದೃಶ್ಯಾವಳಿಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕರಲ್ಲಿ ಈ ಪ್ರಕಟಣೆ ಹೊಸ ಸಂಚಲನ ಮೂಡಿಸಿದೆ. ಪ್ರಸ್ತುತ ಹಂಚಿಕೊಳ್ಳಲಾದ ಪೋಸ್ಟರ್‌ನಲ್ಲಿ ಸಿನಿಮಾದ ಯಾವುದೇ ಹೊಸ ದೃಶ್ಯಗಳನ್ನು ತೋರಿಸದಿದ್ದರೂ, ಇನ್ನು ಕೆಲವೇ ದಿನಗಳಲ್ಲಿ ಸಿನಿಮಾದ ಅಧಿಕೃತ ಟ್ರೇಲರ್ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ಖಾತರಿ ಸಿಕ್ಕಂತಾಗಿದೆ.

ಇದನ್ನೂ ಓದಿ: ರಾಮಾಯಣ: ಯಶ್ ಜತೆಗಿನ ಕ್ಲೈಮ್ಯಾಕ್ಸ್ ಶೂಟಿಂಗ್ ಇನ್ನೂ ಬಾಕಿಯಿದೆ ಎಂದ ರಣಬೀರ್ ಕಪೂರ್

‘ರಾಮಾಯಣ’ ಸಿನಿಮಾದ ಪಾತ್ರವರ್ಗ:

‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದರೊಂದಿಗೆ ರವಿ ದುಬೆ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್ ಮುಂತಾದ ತಾರೆಯರು ಇತರ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ದೀಪಾವಳಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ವಿಶ್ವದಾದ್ಯಂತ ‘ರಾಮಾಯಣ’ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us