Nawazuddin Siddiqui: ಮಗಳ ವಯಸ್ಸಿನ ಹುಡುಗಿ ಜೊತೆ ನವಾಜುದ್ದೀನ್ ಸಿದ್ಧಿಕಿ ಲಿಪ್ ಲಾಕ್​; ವೈರಲ್ ವಿಡಿಯೋ ಬಗ್ಗೆ ಟೀಕೆ

ನವಾಜುದ್ದೀನ್ ವಯಸ್ಸು 49. ಅವ್ನೀತ್​ಗೆ 21 ವರ್ಷ. ಮಗಳ ವಯಸ್ಸಿನ ಹುಡುಗಿಯ ಜೊತೆ ನವಾಜುದ್ದೀನ್ ಲಿಪ್ ಲಾಕ್ ಮಾಡಿದ್ದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ.

Nawazuddin Siddiqui: ಮಗಳ ವಯಸ್ಸಿನ ಹುಡುಗಿ ಜೊತೆ ನವಾಜುದ್ದೀನ್ ಸಿದ್ಧಿಕಿ ಲಿಪ್ ಲಾಕ್​; ವೈರಲ್ ವಿಡಿಯೋ ಬಗ್ಗೆ ಟೀಕೆ
ನವಾಜುದ್ದೀನ್​-ಅವ್ನೀತ್

Updated on: Jun 15, 2023 | 10:34 AM

ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಅವರ ಸಿನಿಮಾ ಆಯ್ಕೆ ಬಗ್ಗೆ ಅನೇಕರಿಗೆ ಮೆಚ್ಚುಗೆ ಇದೆ. ಕೆಲವು ವಿವಾದಗಳ ಮೂಲಕವೂ ಅವರು ಸುದ್ದಿ ಆಗಿದ್ದಿದೆ. ಈಗ ‘ಟೀಕು ವೆಡ್ಸ್​ ಶೇರು’ ಸಿನಿಮಾ (Tiku Weds Sheru) ಟ್ರೇಲರ್ ಮೂಲಕ ಅವರು ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಸಿನಿಮಾ ಟ್ರೇಲರ್​ನಲ್ಲಿ ಅವರು 21 ವರ್ಷದ ಅವ್ನೀತ್ ಕೌರ್ ಜೊತೆ ಲಿಪ್​ ಕಿಸ್ ಮಾಡುವ ದೃಶ್ಯ ಇದೆ. ಇದಕ್ಕೆ ಅನೇಕರಿಂದ ಟೀಕೆಗಳು ವ್ಯಕ್ತವಾಗಿದೆ.

‘ಟೀಕು ವೆಡ್ಸ್ ಶೇರು’ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನವಾಜುದ್ದೀನ್ ಅವರು ಶೇರು ಎಂಬ ಜ್ಯೂನಿಯರ್ ಆರ್ಟಿಸ್ಟ್​ ಪಾತ್ರ ಮಾಡಿದ್ದಾರೆ. ಬಾಲಿವುಡ್​ನಲ್ಲಿ ಸೆಟ್ಲ್​ ಆಗಬೇಕು ಎಂಬುದು ಶೇರು ಕನಸಾಗಿರುತ್ತದೆ. ಟೀಕು (ಅವ್ನೀತ್) ಕೂಡ ಹೀರೋಯಿನ್ ಆಗಬೇಕು ಎಂದು ಕನಸು ಕಂಡವಳು. ಶೇರುನ ಮದುವೆ ಆದರೆ ಭೋಪಾಲ್ ಬಿಟ್ಟು ಮುಂಬೈ ಸೇರಬಹುದು, ಸಿನಿಮಾ ಆಫರ್ ಪಡೆಯಬಹುದು ಎಂಬುದು ಟೀಕು ಆಲೋಚನೆ. ಈ ಕಾರಣಕ್ಕೆ ಆಕೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಇದಿಷ್ಟು ವಿಚಾರವನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ.

ಟ್ರೇಲರ್​ನಲ್ಲಿ ನವಾಜುದ್ದೀನ್ ಹಾಗೂ ಅವ್ನೀತ್​ ಕೌರ್ ಲಿಪ್​​ ಲಾಕ್ ದೃಶ್ಯ ಇದೆ. ನವಾಜುದ್ದೀನ್ ವಯಸ್ಸು 49. ಅವ್ನೀತ್​ಗೆ 21 ವರ್ಷ. ಮಗಳ ವಯಸ್ಸಿನ ಹುಡುಗಿಯ ಜೊತೆ ನವಾಜುದ್ದೀನ್ ಲಿಪ್ ಲಾಕ್ ಮಾಡಿದ್ದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ. ಈ ಬಗ್ಗೆ ಸಾಕಷ್ಟು ಟೀಕೆ ಕೇಳಿ ಬಂದಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ಸಿನಿಮಾ ಜೂನ್ 23ರಂದು ರಿಲೀಸ್ ಆಗಲಿದೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ನವಾಜುದ್ದೀನ್ ಸಿದ್ಧಿಕಿ ಮಾಜಿ ಪತ್ನಿ ರೆಡಿ; ಬಾಯ್​ಫ್ರೆಂಡ್ ವಿಚಾರದಲ್ಲಿ ಸಿಗಲಿದೆ ಸ್ಪಷ್ಟನೆ?

ಈ ಟ್ರೇಲರ್​ಗೆ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಕಂಗನಾ ರಣಾವತ್ ಅವರು ಈ ರೀತಿಯ ವಿಚಾರಗಳ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಈಗ ಅವರದೇ ನಿರ್ಮಾಣದ ಸಿನಿಮಾದಲ್ಲಿ ಈ ರೀತಿಯ ವಿಚಾರಗಳು ಇವೆಯಲ್ಲ’ ಎಂದು ಕೆಲವರು ಟೀಕೆ ಮಾಡಿದ್ದಾರೆ. ‘ಸಿನಿಮಾ ಶೂಟಿಂಗ್ ನಡೆಯುವಾಗ ಅವ್ನೀತ್​ಗೆ 20 ವರ್ಷ ವಯಸ್ಸು ಇರಬಹುದು. ನವಾಜುದ್ದೀನ್ ಅವರ ಪರ ಮಾತನಾಡಲು ಸಾಧ್ಯವಿಲ್ಲ’ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:30 am, Thu, 15 June 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us