Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ಗೆ ನವಾಜುದ್ದೀನ್ ಸಿದ್ಧಿಕಿ ಮಾಜಿ ಪತ್ನಿ ರೆಡಿ; ಬಾಯ್​ಫ್ರೆಂಡ್ ವಿಚಾರದಲ್ಲಿ ಸಿಗಲಿದೆ ಸ್ಪಷ್ಟನೆ?

ಈ ಬಾರಿ ವೀಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಟಿಆರ್​ಪಿ ಇರೋ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈ ಪೈಕಿ ಆಲಿಯಾ ಕೂಡ ಇದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್​ಗೆ ನವಾಜುದ್ದೀನ್ ಸಿದ್ಧಿಕಿ ಮಾಜಿ ಪತ್ನಿ ರೆಡಿ; ಬಾಯ್​ಫ್ರೆಂಡ್ ವಿಚಾರದಲ್ಲಿ ಸಿಗಲಿದೆ ಸ್ಪಷ್ಟನೆ?
ನವಾಜುದ್ದೀನ್​-ಆಲಿಯಾ
Follow us
ರಾಜೇಶ್ ದುಗ್ಗುಮನೆ
|

Updated on:Jun 14, 2023 | 10:00 AM

ಬಾಲಿವುಡ್​ ನಟ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಹಾಗೂ ಪತ್ನಿ ಆಲಿಯಾ ಸಿದ್ಧಿಕಿ ನಡುವೆ ಕಿತ್ತಾಟ ನಡೆಯಿತು. ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಹೀಗಿರುವಾಗಲೇ ಹೊಸ ವ್ಯಕ್ತಿ ಜೊತೆ ಆಲಿಯಾ (Aaliya Siddiqui) ಸುತ್ತಾಟ ಆರಂಭಿಸಿದ್ದಾರೆ. ಈಗ ಅವರು ‘ಬಿಗ್ ಬಾಸ್ ಹಿಂದಿ ಒಟಿಟಿ ಸೀಸನ್ 2’ಗೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈ ವಿಚಾರದ ಬಗ್ಗೆ ಸಾಕಷ್ಟು ಮಂದಿಗೆ ಕುತೂಹಲ ಮೂಡಿದೆ. ಫೇಮಸ್ ಆಗುವ ಉದ್ದೇಶದಿಂದಲೇ ಆಲಿಯಾ ಇಷ್ಟೊಂದು ಡ್ರಾಮಾ ಮಾಡಿದರಾ ಎನ್ನುವ ಪ್ರಶ್ನೆಯೂ ಎದುರಾಗಿದೆ.

‘ಬಿಗ್ ಬಾಸ್ ಒಟಿಟಿ’ ಮೊದಲ ಸೀಸನ್ ಯಶಸ್ಸು ಕಂಡಿತ್ತು. ನೇರವಾಗಿ ಒಟಿಟಿ ಮೂಲಕ ಈ ಶೋ ಪ್ರಸಾರ ಆಯಿತು. ಕರಣ್ ಜೋಹರ್ ಇದನ್ನು ನಡೆಸಿಕೊಟ್ಟಿದ್ದರು. ಈ ಬಾರಿ ಒಟಿಟಿ ಶೋನ ಸಲ್ಮಾನ್ ಖಾನ್ ಅವರೇ ನಡೆಸಿಕೊಡುತ್ತಿದ್ದಾರೆ. ಈ ಬಾರಿ ವೀಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಟಿಆರ್​ಪಿ ಇರೋ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈ ಪೈಕಿ ಆಲಿಯಾ ಕೂಡ ಇದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಪ್ರೋಮೋ ಒಂದನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಸ್ಪರ್ಧಿಗಳ ಮುಖ ಸ್ಪಷ್ಟವಾಗಿಲ್ಲ. ಆದರೆ, ಇದು ಆಲಿಯಾ ಸಿದ್ಧಿಕಿ ಎಂದು ಹೇಳೋಕೆ ಸಾಕಷ್ಟು ಪುರಾವೆಗಳಿವೆ. ‘ನಾನು ಸ್ಟಾರ್ ನಟನ ಪತ್ನಿ ಎಂದು ಯಾವಾಗಲೂ ಕರೆಯಲ್ಪಟ್ಟಿದ್ದೆ. ಸಂಬಂಧದಲ್ಲಿ ಗೌರವವಿಲ್ಲದಿದ್ದರೆ ಆ ಸಂಬಂಧವು ತಾನಾಗಿಯೇ ದುರ್ಬಲಗೊಳ್ಳುತ್ತದೆ. 19 ವರ್ಷಗಳಲ್ಲಿ ನಾನು ಎದುರಿಸಿದ ಕಷ್ಟಗಳು ನನಗೆ ತಿಳಿದಿದೆ. ಪತಿಯಿಂದ ತೊಂದರೆಗೀಡಾದ ವೈವಾಹಿಕ ಜೀವನದಿಂದ ಹೊರಬರಲು ನಾನು ಬಯಸಿದೆ. ನಾನು ಬಿಗ್ ಬಾಸ್‌ನಲ್ಲಿ ಇರುವುದಕ್ಕೆ ಇದೇ ಕಾರಣ’ ಎಂದು ಮಹಿಳೆ ಒಬ್ಬರು ಹೇಳಿಕೊಂಡಿದ್ದಾರೆ. ಇದು ಆಲಿಯಾ ಎಂದು ಎಲ್ಲರೂ ಭಾವಿಸಿದ್ದಾರೆ.

ಇದನ್ನೂ ಓದಿ: Aaliya Siddiqui: ಹೊಸ ಬಾಯ್​ಫ್ರೆಂಡ್​ ಫೋಟೋ ಹಂಚಿಕೊಂಡ ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ; ಶೀಘ್ರದಲ್ಲೇ ಹೆಸರು ಬದಲಾವಣೆ

ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ ಸಿದ್ಧಿಕಿ ಅವರು ಹೊಸ ರಿಲೇಷನ್​ಶಿಪ್​ನಲ್ಲಿ ಮುಳುಗಿದ್ದಾರೆ. ತಮ್ಮ ಹೊಸ ಬಾಯ್​ಫ್ರೆಂಡ್​ ಫೋಟೋ ಹಂಚಿಕೊಂಡಿದ್ದರು. ಅವರ ಈ ನಿರ್ಧಾರ ಅನೇಕರಿಗೆ ಅಚ್ಚರಿ ಮೂಡಿಸಿತ್ತು. ನವಾಜುದ್ದೀನ್​ ಸಿದ್ಧಿಕಿ ಮೇಲೆ ಆಲಿಯಾ ಹೊರಿಸಿರುವ ಆರೋಪಗಳು ಒಂದೆರಡಲ್ಲ. ಕೋರ್ಟ್​ನಲ್ಲಿ ಆ ಎಲ್ಲ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಅದರ ನಡುವೆಯೇ ಆಲಿಯಾಗೆ ಬೇರೆ ವ್ಯಕ್ತಿಯ ಜೊತೆ ಪ್ರೀತಿ ಚಿಗುರಿದೆ. ಈ ಬಗ್ಗೆ ಅವರು ಮಾತನಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:59 am, Wed, 14 June 23