AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aaliya Siddiqui: ಹೊಸ ಬಾಯ್​ಫ್ರೆಂಡ್​ ಫೋಟೋ ಹಂಚಿಕೊಂಡ ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ; ಶೀಘ್ರದಲ್ಲೇ ಹೆಸರು ಬದಲಾವಣೆ

Nawazuddin Siddiqui: ‘ಇದರಲ್ಲಿ ನಾನು ಖುಷಿಯಾಗಿದ್ದೇನೆ. ಖುಷಿಯಾಗಿ ಬದುಕುವ ಹಕ್ಕು ನನಗೆ ಇಲ್ಲವೇ’ ಎಂದು ಆಲಿಯಾ ಸಿದ್ಧಿಕಿ ಅವರು ನೆಟ್ಟಿಗರಲ್ಲಿ ಪ್ರಶ್ನೆ ಮಾಡಿದ್ದಾರೆ.

Aaliya Siddiqui: ಹೊಸ ಬಾಯ್​ಫ್ರೆಂಡ್​ ಫೋಟೋ ಹಂಚಿಕೊಂಡ ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ; ಶೀಘ್ರದಲ್ಲೇ ಹೆಸರು ಬದಲಾವಣೆ
ಬಾಯ್​ಫ್ರೆಂಡ್​ ಜೊತೆ ಆಲಿಯಾ ಸಿದ್ಧಿಕಿ, ನವಾಜುದ್ದೀನ್​ ಸಿದ್ಧಕಿ
ಮದನ್​ ಕುಮಾರ್​
|

Updated on: Jun 07, 2023 | 11:09 AM

Share

ಬಾಲಿವುಡ್​ನ ಖ್ಯಾತ ನಟ ನವಾಜುದ್ದೀನ್​ ಸಿದ್ಧಿಕಿ (Nawazuddin Siddiqui) ಸಂಸಾರದಲ್ಲಿ ಬಿರುಗಾಳಿ ಎದ್ದು ಬಹಳ ತಿಂಗಳು ಕಳೆದಿದೆ. ಇನ್ನೇನು ಈ ಜೋಡಿ ವಿಚ್ಛೇದನ (Divorce) ಕೂಡ ಪಡೆಯಲಿದೆ. ಅಷ್ಟರಲ್ಲಾಗಲೇ ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ ಸಿದ್ಧಿಕಿ (Aaliya Siddiqui) ಅವರು ಹೊಸ ರಿಲೇಷನ್​ಶಿಪ್​ನಲ್ಲಿ ಮುಳುಗಿದ್ದಾರೆ. ಈಗ ಅವರು ತಮ್ಮ ಹೊಸ ಬಾಯ್​ಫ್ರೆಂಡ್​ ಫೋಟೋ ಹಂಚಿಕೊಂಡಿದ್ದಾರೆ. ಅವರ ಈ ನಿರ್ಧಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ನವಾಜುದ್ದೀನ್​ ಸಿದ್ಧಿಕಿ ಮೇಲೆ ಆಲಿಯಾ ಹೊರಿಸಿರುವ ಆರೋಪಗಳು ಒಂದೆರಡಲ್ಲ. ಕೋರ್ಟ್​ನಲ್ಲಿ ಆ ಎಲ್ಲ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಅದರ ನಡುವೆಯೇ ಆಲಿಯಾಗೆ ಬೇರೆ ವ್ಯಕ್ತಿಯ ಜೊತೆ ಪ್ರೀತಿ ಚಿಗುರಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

‘ನಾನು ಕಾಪಾಡಿಕೊಂಡಿದ್ದ ಸಂಬಂಧದಿಂದ ಹೊರಬರಲು 19 ವರ್ಷ ಹಿಡಿಯಿತು. ಇಂದು ಮತ್ತು ಎಂದೆಂದಿಗೂ ಬದುಕಿನಲ್ಲಿ ಮಕ್ಕಳೇ ನನ್ನ ಮೊದಲ ಆದ್ಯತೆ. ಜೀವನದಲ್ಲಿನ ಕೆಲವು ಸಂಬಂಧಗಳು ಸ್ನೇಹಕ್ಕಿಂತಲೂ ಮಿಗಿಲಾದವು. ಈ ಸಂಬಂಧ ಕೂಡ ಇದೇ ರೀತಿ ಆಗಿರುವಂಥದ್ದು. ಇದರಲ್ಲಿ ನಾನು ಖುಷಿಯಾಗಿದ್ದೇನೆ. ಹಾಗಾಗಿ ಈ ಖುಷಿಯ ವಿಷಯವನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ಖುಷಿಯಾಗಿ ಬದುಕುವ ಹಕ್ಕು ನನಗೆ ಇಲ್ಲವೇ’ ಎಂದು ಆಲಿಯಾ ಸಿದ್ಧಿಕಿ ಅವರು ನೆಟ್ಟಿಗರಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಆಲಿಯಾ ಸಿದ್ಧಿಕಿ ಮಾಡಿದ ಈ ಪೋಸ್ಟ್​ಗೆ ಅನೇಕ ಬಗೆಯ ಪ್ರತಿಕ್ರಿಯೆಗಳು ಬಂದಿವೆ. ‘ನಿಮ್ಮ ಸರ್​ನೇಮ್​ ಬದಲಾಯಿಸಿಕೊಳ್ಳಿ’ ಎಂದು ಒಬ್ಬರು ಸಲಹೆ ನೀಡಿದ್ದಾರೆ. ಅದಕ್ಕೆ ಉತ್ತರಿಸಿರುವ ಆಲಿಯಾ ಅವರು ‘ಅತಿ ಶೀಘ್ರದಲ್ಲಿ’ ಎಂದು ಕಮೆಂಟ್​ ಮಾಡಿದ್ದಾರೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಕೂಡ ಅವರು ಬರೆದುಕೊಂಡಿದ್ದರು. ಅಧಿಕೃತವಾಗಿ ವಿಚ್ಛೇದನ ಪಡೆದ ಬಳಿಕ ‘ಆಲಿಯಾ ಸಿದ್ಧಿಕಿ’ ಎಂಬ ಹೆಸರನ್ನು ‘ಅಂಜನಾ ಕಿಶೋರ್​ ಪಾಂಡೆ’ ಎಂದು ಬದಲಾಯಿಸಿಕೊಳ್ಳುವುದಾಗಿ ಅವರು ತಿಳಿಸಿದ್ದರು.

ಇದನ್ನೂ ಓದಿ: ಹೆಣ್ಣಿನ ವೇಷದಲ್ಲಿ ಬಂದ ಸ್ಟಾರ್ ನಟ; ಯಾರು ಎಂದು ಗುರುತಿಸುತ್ತೀರಾ?

ಈ ಹಿಂದೆ ಆಲಿಯಾ ಅವರು ನವಾಜುದ್ದೀನ್​ಗೆ ಬಹಿರಂಗ ಪತ್ರ ಬರೆದಿದ್ದರು. ಅದರಲ್ಲಿ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದರು. ‘ನನಗೆ ಗೊತ್ತಿಲ್ಲದಂತೆ ನನ್ನ ಅಪ್ರಾಪ್ತ ಮಗಳನ್ನು ನಿಮ್ಮ ಮ್ಯಾನೇಜರ್​ ಜೊತೆ ಬೇರೆ ದೇಶಕ್ಕೆ ಕಳಿಸಿದ್ರಿ. ಅವರಿಬ್ಬರು ಒಂದೇ ಕಡೆ ಉಳಿದುಕೊಳ್ಳುವಂತೆ ಮಾಡಿದ್ರಿ. ಆ ಸಮಯದಲ್ಲಿ ಆತ ನನ್ನ ಮಗಳನ್ನು ಅನುಚಿತವಾಗಿ ತಬ್ಬಿಕೊಂಡಿದ್ದ. ಮಗಳ ವಿರೋಧದ ನಡುವೆಯೂ ಇದೆಲ್ಲ ನಡೆದಿತ್ತು. ನಾವಿಬ್ಬರೂ ಆಕೆಯ ಜೊತೆಯಲ್ಲಿ ಇಲ್ಲದಿದ್ದಾಗ ನಿಮ್ಮ ಮ್ಯಾನೇಜರ್​ ಇದನ್ನೆಲ್ಲ ಮಾಡಿದ ಎಂಬುದನ್ನು ನೀವು ನಿರಾಕರಿಸಲು ಸಾಧ್ಯವಿಲ್ಲ’ ಎಂದು ಆಲಿಯಾ ಸಿದ್ದಿಕಿ ಬಹಿರಂಗ ಪತ್ರದಲ್ಲಿ ಬರೆದಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ