Sara Ali Khan: ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರಕ್ಕೆ 30 ಕೋಟಿ ರೂಪಾಯಿ ಕಮಾಯಿ; ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸಾರಾ ಅಲಿ ಖಾನ್ ಭೇಟಿ
Zara Hatke Zara Bachke: ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರಕ್ಕೆ ಐದನೇ ದಿನವಾದ ಜೂನ್ 6ರಂದು 3.87 ಕೋಟಿ ರೂಪಾಗಿ ಕಲೆಕ್ಷನ್ ಆಗಿದೆ. ಈ ಖುಷಿಗೆ ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಅವರು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಸಾರಾ ಅಲಿ ಖಾನ್ (Sara Ali Khan) ಮತ್ತು ವಿಕ್ಕಿ ಕೌಶಲ್ ಅವರು ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ದಿನೇಶ್ ವಿಜನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿತು. ಜೂನ್ 2ರಂದು ತೆರೆಕಂಡ ‘ಜರಾ ಹಟ್ಕೆ ಜರಾ ಬಚ್ಕೆ’ (Zara Hatke Zara Bachke) ಚಿತ್ರಕ್ಕೆ ಮೊದಲ ದಿನ ಸಂಗ್ರಹ ಆಗಿದ್ದು 5.49 ಕೋಟಿ ರೂಪಾಯಿ. ಆದರೆ ಎರಡನೇ ದಿನವಾದ ಶನಿವಾರ (ಜೂನ್ 3) ಕೊಂಚ ಚೇತರಿಕೆ ಕಂಡು, 7.20 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಮೂರನೇ ದಿನ 9.90 ಕೋಟಿ ರೂಪಾಯಿ ಸಂಗ್ರಹವಾಯಿತು. ನಾಲ್ಕನೇ ದಿನದ ಕಲೆಕ್ಷನ್ 4.14 ಕೋಟಿ ರೂಪಾಯಿ. ಐದನೇ ದಿನವಾದ ಜೂನ್ 6ರಂದು 3.87 ಕೋಟಿ ರೂಪಾಗಿ ಕಲೆಕ್ಷನ್ ಆಗಿದೆ. ಒಟ್ಟು ಕಲೆಕ್ಷನ್ 30.60 ಕೋಟಿ ರೂಪಾಯಿ ತಲುಪಿದೆ. ಈ ಖುಷಿಗೆ ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಅವರು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ (Siddhivinayak temple) ಭೇಟಿ ನೀಡಿದ್ದಾರೆ.
ಹಿಂದಿ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿಲ್ಲ. ಹಾಗಾಗಿ ಸಾಧಾರಣೆ ಗಳಿಕೆ ಆದರೂ ಕೂಡ ಸಮಾಧಾನಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ಸಾರಾ ಅಲಿ ಖಾನ್ ಅವರು ಬಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸೈಫ್ ಅಲಿ ಖಾನ್ರ ಮಗಳು ಎಂಬ ಕಾರಣಕ್ಕೆ ಅವರಿಗೆ ಅವಕಾಶಗಳು ಸುಲಭವಾಗಿ ಸಿಗುತ್ತಿವೆ. ಆದರೆ ಅಷ್ಟು ಸುಲಭಕ್ಕೆ ಗೆಲುವು ದಕ್ಕುತ್ತಿಲ್ಲ. ಇನ್ನು, ವಿಕ್ಕಿ ಕೌಶಲ್ ಹಲವು ರೀತಿಯ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ.
View this post on Instagram
ಸಾರಾ ಅಲಿ ಖಾನ್ ಅವರು ಇತ್ತೀಚೆಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ತಮ್ಮನ್ನು ಟ್ರೋಲ್ ಮಾಡಿದವರಿಗೆ ಸಾರಾ ಅಲಿ ಖಾನ್ ಅವರು ತಿರುಗೇಟು ನೀಡಿದ್ದರು. ಎಲ್ಲ ಧರ್ಮದ ಪೂಜಾ ಸ್ಥಳಗಳಿಗೆ ತಾವು ಇಷ್ಟೇ ಶ್ರದ್ಧೆ ಮತ್ತು ಭಕ್ತಿಯಿಂದ ಹೋಗುವುದಾಗಿ ಅವರು ಹೇಳಿದ್ದರು.
ಇದನ್ನೂ ಓದಿ: Sara Ali Khan: ಮಹಾಕಾಳೇಶ್ವರ ದೇವಸ್ಥಾನಕ್ಕೆ ಸಾರಾ ಅಲಿ ಖಾನ್ ಭೇಟಿ; ಸೈಫ್ ಪುತ್ರಿಯ ಟೆಂಪಲ್ ರನ್ ಬಗ್ಗೆ ಕೆಲವರ ತಕರಾರು
‘ನಾನು ನನ್ನ ಕೆಲಸವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ನಾನು ಜನರಿಗಾಗಿ ಮತ್ತು ನಿಮಗಾಗಿ ಕೆಲಸ ಮಾಡುತ್ತೇನೆ. ನನ್ನ ಕೆಲಸ ನಿಮಗೆ ಇಷ್ಟವಾಗದಿದ್ದರೆ ನನಗೆ ಬೇಸರ ಆಗುತ್ತದೆ. ಆದರೆ ನನ್ನ ವೈಯಕ್ತಿಕ ನಂಬಿಕೆಗಳು ನನಗೆ ಸಂಬಂಧಿಸಿದ್ದು. ನಾನು ಅಜ್ಮೇರ್ ಶರೀಫ್ ದರ್ಗಾಗೆ ಹೋಗುವಷ್ಟೇ ಶ್ರದ್ಧೆಯಿಂದ ಬಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಹೋಗುತ್ತೇನೆ. ಅಷ್ಟೇ ಶ್ರದ್ಧೆಯಿಂದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಇದನ್ನು ನಾನು ಮುಂದುವರಿಸುತ್ತೇನೆ. ಜನರು ಏನು ಬೇಕಾದರೂ ಹೇಳಲಿ. ನನಗೆ ತೊಂದರೆ ಇಲ್ಲ. ನಿಮಗೆ ಆ ಕ್ಷೇತ್ರದ ಶಕ್ತಿ ಇಷ್ಟವಾಗಬೇಕು. ನಾನು ಆ ಶಕ್ತಿಯನ್ನು ನಂಬುತ್ತೇನೆ’ ಎಂದು ಸಾರಾ ಅಲಿ ಖಾನ್ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.