Sara Ali Khan: ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರಕ್ಕೆ ಸಾಧಾರಣ ಓಪನಿಂಗ್; ಸಾರಾ ಅಲಿ ಖಾನ್ ಮುಖದಲ್ಲಿ ಮೂಡಿತು ನಗು
Zara Hatke Zara Bachke Collections: ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾಗೆ ಭಾನುವಾರ ಅನೇಕ ಕಡೆಗಳಲ್ಲಿ ಹೌಸ್ಫುಲ್ ಬೋರ್ಡ್ ಕಾಣಿಸಿಕೊಂಡಿದೆ. ಇದರಿಂದ ಹೆಚ್ಚಿನ ಕಲೆಕ್ಷನ್ ಆಗವ ಸಾಧ್ಯತೆ ಇದೆ.
ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಬಾಲಿವುಡ್ನಲ್ಲಿ ಒಂದು ದೊಡ್ಡ ಯಶಸ್ಸಿಗಾಗಿ ಕಾದಿದ್ದಾರೆ. ಅವರು ನಟಿಸಿದ ಹೊಸ ಸಿನಿಮಾ ‘ಜರಾ ಹಟ್ಕೆ ಜರಾ ಬಚ್ಕೆ’ (Zara Hatke Zara Bachke) ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದೆ. ಮೊದಲ ದಿನ ಈ ಸಿನಿಮಾ ಸಾಧಾರಣ ಓಪನಿಂಗ್ ಪಡೆದುಕೊಂಡಿದೆ. ಜೂನ್ 2ರಂದು ತೆರೆಕಂಡು ಈ ಚಿತ್ರಕ್ಕೆ ಮೊದಲ ಸಿನಿಮಾ ಸಂಗ್ರಹ ಆಗಿದ್ದು 5.49 ಕೋಟಿ ರೂಪಾಯಿ. ಆದರೆ ಎರಡನೇ ದಿನವಾದ ಶನಿವಾರ (ಜೂನ್ 3) ಕೊಂಚ ಚೇತರಿಕೆ ಕಂಡಿದ್ದು, 7.20 ಕೋಟಿ ರೂಪಾಯಿ ಕಲೆಕ್ಷನ್ (Box Office Collection) ಆಯಿತು. ಈ ಸಿನಿಮಾದಲ್ಲಿ ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಅವರು ಜೋಡಿಯಾಗಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದೆ.
ಬಾಲಿವುಡ್ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿಲ್ಲ. ಹಾಗಾಗಿ ಸಾಧಾರಣೆ ಗಳಿಕೆ ಆದರೂ ಕೂಡ ಸಮಾಧಾನಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ಮೊದಲ ಎರಡು ದಿನಗಳಲ್ಲಿ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾದ ಕಲೆಕ್ಷನ್ ಎರಡಂಕಿ ಮೀರಲು ಸಾಧ್ಯವಾಗಿಲ್ಲ. ಆದರೆ ಭಾನುವಾರ ಅನೇಕ ಕಡೆಗಳಲ್ಲಿ ಹೌಸ್ಫುಲ್ ಬೋರ್ಡ್ ಕಾಣಿಸಿಕೊಂಡಿದೆ. ಇದರಿಂದ ಹೆಚ್ಚಿನ ಕಲೆಕ್ಷನ್ ಆಗವ ಸಾಧ್ಯತೆ ಇದೆ. ಮೂರು ದಿನಕ್ಕೆ 22 ಕೋಟಿ ರೂಪಾಯಿ ಆಗುವ ಸಾಧ್ಯತೆ ಇದೆ ಎಂದು ಟ್ರೇಡ್ ವಿಶ್ಲೇಷಕರು ಅಂದಾಜಿಸಿದ್ದಾರೆ.
#ZaraHatkeZaraBachke brings relief for exhibitors, #HouseFull boards are back again… Witnesses healthy growth on Day 2… Eyes ₹ 22 cr+ weekend, an EXCELLENT number for this *mid-range* film… Fri 5.49 cr, Sat 7.20 cr. Total: ₹ 12.69 cr. #India biz. #Boxoffice
The *national… pic.twitter.com/NrDBAnJ7xi
— taran adarsh (@taran_adarsh) June 4, 2023
ಸಾರಾ ಅಲಿ ಖಾನ್ ಅವರು ಇತ್ತೀಚೆಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ತಮ್ಮನ್ನು ಟ್ರೋಲ್ ಮಾಡಿದವರಿಗೆ ಈಗ ಸಾರಾ ಅಲಿ ಖಾನ್ ಅವರು ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಮಾಧ್ಯಮದವರ ಜೊತೆ ಮಾತನಾಡುವಾಗ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲ ಧರ್ಮದ ಪೂಜಾ ಸ್ಥಳಗಳಿಗೆ ತಾವು ಇಷ್ಟೇ ಶ್ರದ್ಧೆ ಮತ್ತು ಭಕ್ತಿಯಿಂದ ಹೋಗುವುದಾಗಿ ಅವರು ಹೇಳಿದ್ದಾರೆ.
‘ನಾನು ನನ್ನ ಕೆಲಸವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ನಾನು ಜನರಿಗಾಗಿ ಮತ್ತು ನಿಮಗಾಗಿ ಕೆಲಸ ಮಾಡುತ್ತೇನೆ. ನನ್ನ ಕೆಲಸ ನಿಮಗೆ ಇಷ್ಟವಾಗದಿದ್ದರೆ ನನಗೆ ಬೇಸರ ಆಗುತ್ತದೆ. ಆದರೆ ನನ್ನ ವೈಯಕ್ತಿಕ ನಂಬಿಕೆಗಳು ನನಗೆ ಸಂಬಂಧಿಸಿದ್ದು. ನಾನು ಅಜ್ಮೇರ್ ಶರೀಫ್ ದರ್ಗಾಗೆ ಹೋಗುವಷ್ಟೇ ಶ್ರದ್ಧೆಯಿಂದ ಬಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಹೋಗುತ್ತೇನೆ. ಅಷ್ಟೇ ಶ್ರದ್ಧೆಯಿಂದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಇದನ್ನು ನಾನು ಮುಂದುವರಿಸುತ್ತೇನೆ. ಜನರು ಏನು ಬೇಕಾದರೂ ಹೇಳಲಿ. ನನಗೆ ತೊಂದರೆ ಇಲ್ಲ. ನಿಮಗೆ ಆ ಕ್ಷೇತ್ರದ ಶಕ್ತಿ ಇಷ್ಟವಾಗಬೇಕು. ನಾನು ಆ ಶಕ್ತಿಯನ್ನು ನಂಬುತ್ತೇನೆ’ ಎಂದು ಸಾರಾ ಅಲಿ ಖಾನ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.