ಬಾಲಿವುಡ್ನಲ್ಲಿ ಹರಡಿಕೊಂಡಿರುವ ಡ್ರಗ್ಸ್ ಜಾಲವನ್ನು ಎನ್ಸಿಬಿ ಅಧಿಕಾರಿಗಳು ಭೇದಿಸುತ್ತಿದ್ದಾರೆ. ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ಮಾಡಿ ಸಿಕ್ಕಿಬಿದ್ದಿರುವ ಆರ್ಯನ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಇತರೆ ಸೆಲೆಬ್ರಿಟಿಗಳ ಹೆಸರು ಕೂಡ ಹೊರಬರುತ್ತಿದೆ. ಆ ಪೈಕಿ ನಟಿ ಅನನ್ಯಾ ಪಾಂಡೆಗೆ ಎನ್ಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಅವರ ಮನೆ ಮೇಲೆ ದಾಳಿ ಮಾಡಿದ ಬಳಿಕ ಎನ್ಬಿಸಿ ಕಚೇರಿಗೆ ಬಂದು ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಆದರೆ ಸರಿಯಾದ ಸಮಯಕ್ಕೆ ವಿಚಾರಣೆಗೆ ಬಾರದ ಅನನ್ಯಾ ಅವರು ಅಧಿಕಾರಿಗಳ ಕೋಪಕ್ಕೆ ಕಾರಣ ಆಗಿದ್ದಾರೆ.
ಮುಂಬೈನ ಎನ್ಸಿಬಿ ಕಚೇರಿಗೆ ಶುಕ್ರವಾರ (ಅ.22) ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಅನನ್ಯಾಗೆ ಸೂಚಿಸಲಾಗಿತ್ತು. ಆದರೆ ಅವರು ಬಂದಿದ್ದು ಬರೋಬ್ಬರಿ 3 ಗಂಟೆ ತಡವಾಗಿ! ಇದರಿಂದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅಸಮಾಧಾನಗೊಂಡರು. ಸಮಯ ಪಾಲನೆ ಮಾಡದೇ ಇರುವ ನಟಿಯ ವಿರುದ್ಧ ಅವರು ಗರಂ ಆದರು ಎನ್ನುತ್ತಿವೆ ಮೂಲಗಳು.
ಸಮಯ ಪ್ರಜ್ಞೆ ಇಲ್ಲದೇ ತಡವಾಗಿ ಬಂದು ವಿಚಾರಣೆಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡದಿರುವ ಅನನ್ಯಾ ಪಾಂಡೆ ವರ್ತನೆಗೆ ಸಮೀರ್ ವಾಂಖೆಡೆ ಕೋಪ ಮಾಡಿಕೊಂಡಿದ್ದಾರೆ. ‘ಮನಸ್ಸಿಗೆ ಬಂದ ಸಮಯದಲ್ಲಿ ಆಗಮಿಸಲು ಇದು ಸಿನಿಮಾ ಪ್ರೊಡಕ್ಷನ್ ಹೌಸ್ ಅಲ್ಲ. ಇದು ಕೇಂದ್ರದ ತನಿಖಾ ಸಂಸ್ಥೆ. ಇನ್ಮೇಲೆ ಸರಿಯಾದ ಸಮಯಕ್ಕೆ ವಿಚಾರಣೆಗೆ ಹಾಜರಾಗಬೇಕು’ ಎಂದು ಅನನ್ಯಾ ಪಾಂಡೆಗೆ ಸಮೀರ್ ವಾಂಖೆಡೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ವರದಿ ಆಗಿದೆ.
ನಾಲ್ಕು ಗಂಟೆಗಳ ಕಾಲ ಅನನ್ಯಾಗೆ ಎನ್ಸಿಬಿ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆರ್ಯನ್ ಖಾನ್ ಜೊತೆ ಅವರು ಮಾಡಿದ್ದಾರೆ ಎನ್ನಲಾದ ವಾಟ್ಸಾಪ್ ಚಾಟ್ಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಅವರ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದೆ. ಒಂದು ವೇಳೆ ಅನನ್ಯಾ ಪಾಂಡೆ ಮಾದಕವಸ್ತು ಸೇವಿಸಿರುವುದಕ್ಕೆ ಅಥವಾ ಪೂರೈಕೆ ಮಾಡಿರುವುದಕ್ಕೆ ಸಾಕ್ಷಿಗಳು ಸಿಕ್ಕರೆ ಅವರನ್ನು ಬಂಧಿಸುವ ಸಾಧ್ಯತೆ ಕೂಡ ದಟ್ಟವಾಗಿದೆ. ಇದು ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಶಾರುಖ್ ಪುತ್ರ ಆರ್ಯನ್ ಖಾನ್ ಮತ್ತು ಅನನ್ಯಾ ಪಾಂಡೆ ಬಾಲ್ಯದ ಸ್ನೇಹಿತರು. ಇಬ್ಬರ ಕುಟುಂಬದವರ ನಡುವೆ ಒಳ್ಳೆಯ ಒಡನಾಟ ಇದೆ. ಡ್ರಗ್ಸ್ ವಿಚಾರದಲ್ಲಿ ಅನನ್ಯಾ ಮತ್ತು ಆರ್ಯನ್ ನಡುವೆ ಯಾವ ರೀತಿಯ ಸಂಪರ್ಕ ಇತ್ತು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.
ಇದನ್ನೂ ಓದಿ:
Ananya Panday: ‘ಶಾರುಖ್ ಖಾನ್ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್ ಸುಳಿಯಲ್ಲಿ ನಟಿ
Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್ ಖಾನ್; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್ ಮಗನ ವರ್ತನೆ